ರಾಜ್ಯಕ್ಕೆ 6ನೇ ಸ್ಥಾನ ಪಡೆದ ನೇಕಾರನ ಮಗ

ಬಾಗಲಕೋಟೆ: ಬನಹಟ್ಟಿ ಎಸ್ಆರ್ಎ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾಥರ್ಿ ರವಿಕುಮಾರ ಕರಲಟ್ಟಿ 625ಕ್ಕೆ 620 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡಿದ್ದಾನೆ.

ಕರಲಟ್ಟಿ ಎಂಬ ನೇಕಾರರ ಕುಟುಂಬದಲ್ಲಿ ಹುಟ್ಟಿದ ರವಿಕುಮಾರ ಕನ್ನಡ ವಿಷಯಕ್ಕೆ 125, ಇಂಗ್ಲೀಷ 99, ಹಿಂದಿ 99, ಗಣಿತ 98, ಸಮಾಜ ವಿಜ್ಞಾನ 100 ಮತ್ತು ವಿಜ್ಞಾನ 99 ಅಂಕ ಪಡೆದಿದ್ದಾನೆ. ಅವರ ತಂದೆ ನೇಕಾರ ವೃತ್ತಿಯಲ್ಲಿ ತೊಡಗಿದ್ದು, ಪಿಯುಸಿ ವರೆಗೆ ವಿದ್ಯಾಬ್ಯಾಸ ಮಾಡಿದ್ದಾರೆ. ತಂದೆಯ ಕೆಲಸದಲ್ಲಿ ನೇರವಾಗುತ್ತಾ ಪ್ರತಿದಿನ 7 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದನು. ಅಲ್ಲದೇ ಶಾಲೆಯ ಎಲ್ಲ ಶಿಕ್ಷಕರ ಉತ್ತಮ ಪ್ರೋತ್ಸಾಹ ಮತ್ತು ವಿಶೇಷ ಕಾಳಜಿಯಿಂದ ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಯಿತು ಎನ್ನುತ್ತಾನೆ ರವಿಕುಮಾರ.