ಲೋಕದರ್ಶನ ವರದಿ
ವಿಜಯಪುರ 03: ಜ 2 ರಂದು ಸಂಜೆ 6 ಘಂಟೆಗೆ ನಗರದ ಶ್ರೀ ನಗರ ಕಾಲನಿಯಲ್ಲಿರುವ ಗಾನಬನದಲ್ಲಿ ಶ್ರೀಗುರು ಕುಮಾರೇಶ್ವರರ ಪ್ರತಿಷ್ಠಾನ ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ಶ್ರೀ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ಇದರ ಸಹಯೋಗದಲ್ಲಿ 35ನೇಯ ಮಾಸಿಕ ಸಂಗೀತ ಕಾರ್ಯಕ್ರಮದ ಶಿಷರ್ಿಕೆ ಅಡಿಯಲ್ಲಿ ಗಾನಬನದಲ್ಲಿ ನಾದ ವೈಭವ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರವಿ ಬನಗಾರ ವಹಿಸಿದ್ದರು. ಮ.ನಿ.ಪ್ರ. ಶಿವಯೋಗ ಮಂದಿರದ ಸ್ಥಾಪನಾಚಾರ್ಯದರ್ಯರಾದ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಹಾಕಿಕೊಟ್ಟ ಸಂಗೀತ ಪರಂಪರೆಯನ್ನು ಪಂಚಾಕ್ಷರ ಗವಾಯಿಗಳ ಪೂಜ್ಯ ಪುಟ್ಟರಾಜ ಶಿವಯೋಗಿಗಳ ನಡೆಸಿಕೊಂಡು ಬಂದರು. ತದನಂತರ ವಿಜಯಪುರದಲ್ಲಿ ಪಂಡಿತ ತೋಂಟದಯರ್ಾ ಕವಿಗವಾಯಿಗಳು ಗಾನಬನವನ್ನು ಹುಟ್ಟುಹಾಕಿ ಅದರಲ್ಲಿ ಅಂದ ಮಕ್ಕಳಿಗೆ ಮತ್ತು ಬಡ ಮಕ್ಕಳಿಗೆ ಉಚಿತ ಪ್ರಸಾದ ವಸತಿ ವ್ಯವಸ್ಥೆ ಕಲ್ಪಿಸಿಕೊಡುವದಲ್ಲದೆ ದಿವ್ಯತ್ರೆಯರ ಹಾಕಿಕೊಟ್ಟ ಸಂಗೀತ ವಿದ್ಯೆಯನ್ನು ಗುರುಕುಲ ಪದ್ಧತಿಯಂತೆ ಕಲಿಸುತ್ತಿದ್ದಾರೆ. ಸಮಾಜಮುಖಿಯಾದ ಈ ಕಾರ್ಯಕ್ಕೆ ನಗರದ ಎಲ್ಲಾ ನಾಗರಿಕರು ತನು ಮನ ಧನದಿಂದ ಸೇವೆ ಸಲ್ಲಿಸಬೇಕು ಎಂದು ಮಾತನಾಡಿದರು.
ಉದ್ಘಾಟಕರಾಗಿ ಎಂ.ಎಸ್.ಎಂ.ಸಿ.ಎಚ್ ನ್ಯೂರೋ ಸರ್ಜರಿಯ ಡಾ.ಎಸ್.ಎಬಿ. ಸೊನ್ನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ನೇತ್ರ ತಜ್ಞರಾದ ಡಾ. ಮೀನಾಕ್ಷಿ ಸೊನ್ನದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಗಾನಬನದ ವಿದ್ಯಾಥರ್ಿಯಾದ ಸೃಷ್ಟಿ ಶಾಸ್ತ್ರಿ, ತಮ್ಮ ಸುಮುಧುರ ಕಂಠದಿಂದ ಶಾಸ್ತ್ರಿಯ ಸಂಗೀತವನ್ನು ಪ್ರಸ್ತುತ ಪಡಿಸಿದರು. ನೆರೆದಿರುವಂತ ಎಲ್ಲರ ಮನ ಸೆಳೆದಳು ತದನಂತರ ಗಾನಬನದ ಪಂಡಿತ ತೋಂಟದಾರ್ಯ ಕವಿಗವಾಯಿಗಳು, ವಂದನಾರ್ಪಣೆ ಗೈದರು ತದನಂತರ ಗುರುಕುಮಾರ ಪಂಚಾಕ್ಷರೇಶ್ವರ ಮಂದಿರದಲ್ಲಿ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.