ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ನಡೆದ 15 ನೆಯ ಹಸ್ತಪ್ರತಿ ಸಮ್ಮೇಳನ ಮುಕ್ತಾಯ

ಲೋಕದರ್ಶನ ವರದಿ

  ಬೆಳಗಾವಿ 14: ಭರತೇಶ ಶಿಕ್ಷಣ ಸಂಸ್ಥೆಯ ಡಾ. . ನೇ. ಉಪಾಧ್ಯೆ ವಿಸ್ತರಣಾ ಕೇಂದ್ರದಲ್ಲಿ ನಡೆದ 15 ನೆಯ ಅಖಿಲ ಕನರ್ಾಟಕ ಹಸ್ತಪ್ರತಿ ಸಮ್ಮೇಳನ ಇಂದು ಮುಕ್ತಾಯ ಗೊಂಡಿತು. ಸಮಾರೋಪ ಸಮ್ಮೇಳನದಲ್ಲಿ ಸಮಾರೋಪ ನುಡಿಗಳನ್ನಾಡಿದ ಕನರ್ಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ. ಶ್ರೀರಾಮ ಇಟ್ಟಣ್ಣವರ ಅವರು ಮಾತನಾಡಿ ನಮ್ಮ ಇತಿಹಾಸದ ಗರ್ಭದಲ್ಲಿ ಅಡಗಿರುವ ಸಂಸ್ಕೃತಿಕ ವಿಷಯಗಳನ್ನು ಅಧ್ಯಯನ ನಡೆಸಬೇಕು. ಮೊದಲಿನ ಅನೇಕ ವಿದ್ವಾ0 ಸರು ಕಾಲ್ನಡಿಗೆಯಲ್ಲಿ ಹಸ್ತಪ್ರತಿ ಸಂಗ್ರಹ ಮಾಡಿದ ನಿದರ್ಶನಗಳು ನಮ್ಮ ಮುಂದೆ ಇವೆ. ಅವರಿಗೆ ಬಂದ ಸಮಸ್ಯೆಗಳು ಅನೇಕ. ಬಯಲಾಟದ ಹಸ್ತಪ್ರತಿಗಳ ಸಂಗ್ರಹದ ಕಾರ್ಯವೂ ಸಾಗುತ್ತಲಿದೆ ಎಂದು ಹೇಳಿದರು

ಜರ್ಮನಿಯ ಶ್ರೀ ಅಜಿತ್ ಬೆನಾಡಿಯವರಿಂದ 1 ಲಕ್ಷ ರೂಗಳ ದತ್ತಿ: ಡಾ. . ನೇ. ಉಪಾಧ್ಯೆ ವಿಸ್ತರಣ ಕೇಂದ್ರಕ್ಕೆ ಶ್ರೀ ಅಜಿತ್ ಬೆನಾಡಿಯವರು ಒಂದು ಲಕ್ಷ ರೂಗಳ ದತ್ತಿ ಯನ್ನು ಸ್ಥಾಪಿಸಿದರು. ಬಂದ ಬಡ್ಡಿ ಹಣದಿಂದ ವರ್ಷಕ್ಕೊಂದು ಕಾರ್ಯಕ್ರಮ ಮಾಡಿರೆಂದು ವಿನಂತಿಸಿದರು. ವಿಷಯವಾಗಿ ಡಾ. ಜಿನದತ್ತ ದೇಸಾಯಿ ಯವರು ಅವರನ್ನು ಅಭಿನಂದಿಸಿದರು ಮತ್ತು ದಾನಿಗಳು ರೀತಿ ಮುಂದೆ ಬರಬೇಕು ಅಂದಾಗ ಮಾತ್ರ ನಮ್ಮ ಕೇಂದ್ರದ ಉದ್ದೇಶ ಈಡೇರುತ್ತದೆ ಎಂದು ಹೇಳಿದರು. ವೇದಿಕೆಯ ಮೇಲಿದ್ದ ಎಲ್ಲ ಅತಿಥಿಗಳು ಶ್ರೀ ಅಜಿತ್ ಬೆನಾಡಿ ಅವರನ್ನು ಸನ್ಮಾನಿಸಿದರು

ಸಮ್ಮೇಳನದ ಸವರ್ಾಧ್ಯಕ್ಷರಾದ ನಾಡೋಜ ಹಂಪನಾ ಮಾತನಾಡಿ ಮನುಷ್ಯ ಮನುಷ್ಯನನ್ನು ಹತ್ತಿರ ತರುವ ಸಾಹಿತ್ಯ ರಚನೆ ಆಗಬೇಕು ಮತ್ತು ಅದು ಸೇತುವೆ ಆಗಬೇಕು ಎಂದು ಹೇಳಿದರು

ಸಮಾರೋಪದ ಅಧ್ಯಕ್ಷೀಯ ಭಾಷಣ ಮಾಡಿದ ಭರತೇಶ ಶಿಕ್ಷಣ ಸಂಸ್ಥೆಯ ಟ್ರಸ್ಟೀ ಶ್ರೀ ವಿನೋದ್ ದೊಡ್ಡಣ್ಣವರ ಮಾತನಾಡಿ ಹಸ್ತಪ್ರತಿಗಳು ನಮ್ಮ ಆಸ್ತಿ ಮತ್ತು ನಮ್ಮ ಪರಂಪರೆಯ ಪ್ರತೀಕ, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ವಿದೇಶದಲ್ಲಿ ಎಷ್ಟೋ ಹಸ್ತಪ್ರತಿಗಳು ಶಾಸನಗಳು, ಮೂತರ್ಿಗಳು ಇವೆ ಅವುಗಳ ನ್ನು ಭಾರತಕ್ಕೆ ತರುವ ಕೆಲಸ ಒಗ್ಗೂಡಿ ಎಲ್ಲರು ಮಾಡಬೇಕಾಗಿದೆ ಎಂದು ಹೇಳಿದರು. ಮುಂದುವರಿದು ಮಾತನಾಡಿ ಈಗ ಇದ್ದಂತ ಮೂತರ್ಿಗಳ, ಶಾಸನಗಳ, ಪರಂಪರೆಯ ಕುರುಹುಗಳ ದಾಖಲೀಕರಣ ಭಾರತದಾದ್ಯಂತ ನಡೆಯುತ್ತಲಿದೆ ಆದರೆ ಇನ್ನೂ ಅಚ್ಚುಕಟ್ಟಾಗಿ ನಾವೆಲ್ಲರೂ ಕೊಡುಗೆ ನೀಡ ಬೇಕಾಗಿದೆ ಎಂದು ಹೇಳಿದರು. ವೇದಿಕೆಯ ಮೇಲೆ ಡಾ. ಕೆ. ರವೀಂದ್ರನಾಥ್, ಭರತೇಶ ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಶ್ರೀ ಶ್ರೀಪಾಲ ಖೇಮಲಾಪುರೆ ಅವರು ಉಪಸ್ಥಿತರಿದ್ದರು. ಡಾ. . ಆರ್. ರೊಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು