ದಿ. ಇಬ್ರಾಹೀಮ ಸುತಾರ ತೃತಿಯ ಪುಣ್ಯಸ್ಮರಣೆ: ಭಾವೈಕ್ಯ ದಿನೋತ್ಸವ

The. Commemoration of Ibrahim Sutara Triti: Bhavaikya Dinotsava

ದಿ. ಇಬ್ರಾಹೀಮ ಸುತಾರ ತೃತಿಯ ಪುಣ್ಯಸ್ಮರಣೆ: ಭಾವೈಕ್ಯ ದಿನೋತ್ಸವ  

ಮಹಾಲಿಂಗಪುರ 06: ಕೂಡಿ ಬಾಳಿದರೆ ಸೌಹಾರ್ದ ಒಡೆದು ಆಳುವುದು ಕೋಮುವಾದವೆಂದು ಬಹಳ ಮಾರ್ಮಿಕ ನುಡಿಗಳನ್ನು ವಿಜಯಪುರದ ಕವಿ, ಸಾಹಿತಿ ಡಾ. ಅಮೀರುದ್ದೀನ ಖಾಜಿ ಸಭೆಗೆ ತಿಳಿಸಿದರು. 

ಖ್ಯಾತ ಪ್ರವಚನಕಾರರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪಡೆದ ದಿ. ಇಬ್ರಾಹೀಮ ಸುತಾರ ತೃತಿಯ ಪುಣ್ಯಸ್ಮರಣೆ ಅಂಗವಾಗಿ ಭಾವೈಕ್ಯ ದಿನೋತ್ಸವ ಕಾರ್ಯಕ್ರಮ ಬುಧವಾರ ಶ್ರೀ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ನಡೆಯಿತು. ಮುಖ್ಯ ಅತಿಥಿ ಸ್ಥಾನದಿಂದ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 

ಹಿಂದಿನ ಕಾಲದಿಂದಲೂ ಸೂಫಿಗಳು, ಸಂತರು ಅನ್ಯೋನ್ಯತೆಯಿಂದ ಬದುಕು ಸವಿಸಿ, ವಿಶ್ವದ ಮೂಲೆ ಮೂಲೆಗಳಲ್ಲಿರುವ ಜನರಿಗೆ ಸೌಹಾರ್ದದದ ಅರಿವು ಮೂಡಿಸಿ, ಭಾರತದ ಘನತೆ ಗೌರವಗಳನ್ನು ಹೆಚ್ಚಿಸಿ ಹೋಗಿದ್ದಾರೆ.ಅದೇ ಮಾರ್ಗ ಆಯ್ದುಕೊಂಡ ಶರಣರಾದ ದಿ.ಇಬ್ರಾಹಿಂ ಸುತಾರ ಅವರು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಏಕತೆಯ ಪ್ರವಚನ ನೀಡಿ ಪ್ರತಿಯೊಬ್ಬರ ನೆಚ್ಚಿನ ಸುತಾರಜೀ ಆಗಿರುವರು. ಈ ಸಂದರ್ಭದಲ್ಲಿ ಸ್ಮರಣೆ ಮತ್ತು ಅಧ್ಯಾತ್ಮ ರಂಗಕ್ಕೆ ನೀಡಿದ ನೀಡುತ್ತಿರುವ ಭಾವೈಕ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸುವುದು ಸ್ತುತ್ಯಾರ್ಹವಾಗಿದೆ ಎಂದರು. 

ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ, ಶಾಸ್ತ್ರ ಕಲಿಯುವುದು ಕಠಿಣ ಕೆಲಸ. ಜನಸಾಮಾನ್ಯರಿಗೆ ಸರಳ ರೀತಿಯಲ್ಲಿ ಮನವರಿಕೆಯಾಗುವಂತೆ ಅಧ್ಯಾತ್ಮದ ಅರಿವು ತಿಳಿಸುವುದೇ ಇಬ್ರಾಹಿಂ ಸುತಾರ ಹಾಗೂ ಅವರ ತಂಡದ ಸಂವಾದವಾಗಿತ್ತು.ಅದು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಅವರ ಅಗಲಿಕೆ ನಂತರ ಆ ಸ್ಥಾನ ಖಾಲಿಯಾಗಿದೆ. ಮುಂದಿನ ಪೀಳಿಗೆ ವರೆಗೆ ಶಾಸ್ತ್ರ ಮುಂದುವರಿಯಲು ಯುವಕರು ಅಧ್ಯಾತ್ಮದ ಸಂವಾದ ಕಾರ್ಯಕ್ರಮಗಳನ್ನು ಏರಿ​‍್ಡಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಯುವ ಮಿತ್ರರಿಗೆ ಕರೆ ನೀಡಿದರು. 

ಹಾಪಿಜ್ ಮುಹ್ಮದಲಿ ಮಾತನಾಡಿ, ನಮ್ಮ ಧರ್ಮಕ್ಕೆ ಚ್ಯುತಿ ಬಾರದಂತೆ ನಡೆದುಕ್ಕೊಂಡು, ಇನ್ನೊಂದು ಧರ್ಮದ ಅವಹೇಳನ ಮಾಡುವುದು ಅಕ್ಷಮ್ಯ ಅಪರಾಧ. ಈ ಕೆಲಸ ಮಾಡುವ ಯಾರೆಯಾಗಲಿ ಅಂತಹವರಿಗೆ ಶೋಭೆ ತರುವಂತಹದ್ದಲ್ಲ. ಆದ್ದರಿಂದ ಕೂಡಿ ಬಾಳಿದರೆ ಸ್ವರ್ಗ ಎಂಬ ತತ್ವದಡಿ ನಾವೆಲ್ಲರೂ ಬದುಕು ಕಟ್ಟಿಕೊಳ್ಳಬೇಕು ಎಂದರು. ತಂದೆ, ತಾಯಿಗಳ ಸೇವೆ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು.ಏಕೆಂದರೆ ಇವರು ಸ್ವರ್ಗದ ವಾರಸುದಾರರು ಎಂದರು. 

ನೇತೃತ್ವ ವಹಿಸಿದ್ದ ಹಂದಿಗುಂದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು.ಉರ್ಧು ಶಿಕ್ಷಕ ಶಮಶುದ್ದೀನ ಝಾರೆ ಕವನ ವಾಚನ ಮಾಡಿದರು. 

 2024-25 ನೇ ಸಾಲಿನ ನಗದು ಸಹಿತ ಭಾವೈಕ್ಯಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಭಜನಾ ಕಲಾವಿದ ದಿ. ರಾಜೇಸಾಬ ಹಳಿಂಗಳಿ ಕುಟುಂಬ ವರ್ಗಕ್ಕೆ ನೀಡಲಾಯಿತು. ಅಲ್ಲದೆ ರಾಷ್ಟ್ರೀಯ ಭಾವೈಕ್ಯ ಕುರಿತು ಭಾಷನ ಸ್ಪರ್ಧೆಯ ವಿಜೇತ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. 

ಹಿರಿಯರಾದ ಮಲ್ಲಪ್ಪಣ್ಣ ಕಟಗಿ, ಸಿದ್ಧಾರೂಢ ಮಠದ ಉತ್ತರಾಧಿಕಾರಿ ಸಿದ್ಧಾನಂದ ಭಾರತಿ ಮಹಾಸ್ವಾಮಿಗಳು, ಗೌರವ ಉಪಸ್ಥಿತಿ ವಿರೂಪಾಕ್ಷಪ್ಪ ಪಾವಟೆ, ಶಿಕ್ಷಕ ಮುಸ್ತಾಕ್ ಅಹ್ಮದ್ ಬಿದರಿ ನಿರೂಪಿಸಿ, ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ಅಧ್ಯಕ್ಷ ಹುಮಾಯೂನ್ ಇಬ್ರಾಹಿಂ ಸುತಾರ ಸ್ವಾಗತಿಸಿ, ಅಧ್ಯಾತ್ಮ ಜೀವಿ ಚಿದಂಬರ ದೇಶಪಾಂಡೆ ವಂದಿಸಿದರು.