ಜೋಹಾನ್ಸ್ ಬರ್ಗ್, ಜ.25 - ನಾಯಕ ಜೋ ರೂಟ್ ಹಾಗೂ ಓಲಿ ಪೋಪ್ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 400 ರನ್ ಕಲೆ ಹಾಕಿದೆ.
4 ವಿಕೆಟ್ ಗೆ 192 ರನ್ ಗಳಿಂದ ಶನಿವಾರದ ಆಟ ಮುಂದುವರಿಸಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 400 ರನ್ ಕಲೆ ಹಾಕಿತು.
ಐದನೇ ವಿಕೆಟ್ ಗೆ ರೂಟ್ (59) ಹಾಗೂ ಪೋಪ್ (56) ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟ ನೀಡಿತು. ರೂಟ್ 108 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 59 ರನ್ ಬಾರಿಸಿದರು. ಉಳಿದಂತೆ ಪೋಪ್ 78 ಎಸೆತಗಳಲ್ಲಿ 56 ರನ್ ಸಿಡಿಸಿದರು.
ಕೆಳ ಮಧ್ಯಮ ಕ್ರಮಾಂಕದಲ್ಲಿ ಕ್ರಿಸ್ ವೋಕ್ಸ್ 32, ಮಾರ್ಕ್ ವುಡ್ ಅಜೇಯ 35, ಸ್ಟುವರ್ಟ್ ಬ್ರಾಡ್ 43 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ದಕ್ಷಿಣ ಆಫ್ರಿಕಾ ಪರ ಅನ್ರಿಕ್ ನಾರ್ಟ್ಜೆ ಐದು ವಿಕೆಟ್ ಪಡೆದರು.