ಕೈಗಾ ಸ್ಥಾವರಕ್ಕೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಟೆಂಪೋ ಪಲ್ಟಿ : 15 ಕಾರ್ಮಿಕರಿಗೆ ಗಾಯ

ಕೈಗಾ ಸ್ಥಾವರಕ್ಕೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಟೆಂಪೋ ಪಲ್ಟಿ : 15  ಕಾರ್ಮಿಕರಿಗೆ ಗಾಯ Tempo transporting workers to Kaiga plant overturns: 15 workers injured


ಕಾರವಾರ 03 :   ಕೈಗಾ ಅಣು  ವಿದ್ಯುತ್ ಸ್ಥಾವರ  5 ಮತ್ತು 6 ನೇ ಘಟಕಗಳ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟೆಂಪೋ ಪಲ್ಟಿಯಾಗಿ ಹದಿನೈದು ಜನ ಗಾಯಗೊಂಡ ಘಟನೆ ಸೋಮವಾರ  ಬೆಳಿಗ್ಗೆ ನಡೆದಿದೆ.ಕೈಗಾ ಅಣುಸ್ಥಾವರ ಘಟಕಕ್ಕೆ  ಹೋಗುವ ರಸ್ತೆಯಲ್ಲಿ ನಡೆದ ಭೀಕರ ಅಪಘಾತಲ್ಲಿ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಖಾಸಗಿ ಕಂಪನಿಗೆ ಸೇರಿದ  ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ  ಟೆಂಪೋ ಸೋಮವಾರ  ಮುಂಜಾನೆ ಮಲ್ಲಾಪುರ ಮತ್ತು ಕೈಗಾ ಸ್ಥಾವರ ಇರುವ ರಸ್ತೆ ಮಧ್ಯ  ಉರುಳಿಬಿದ್ದಿದೆ.  15 ಜನರು ಗಾಯಗೊಂಡಿದ್ದಾರೆ, ಕೆಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ನಡೆಯುತ್ತಿರುವ 5-6 ಘಟಕದ ನಿರ್ಮಾಣ  ಯೋಜನೆಯಲ್ಲಿ ಬ ತೋಡಗಿರುವ  ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನವು ಅಪಾಯಕಾರಿ   ತಿರುವು ಮೂಲಕ ಸಾಗುವಾಗ ಮಾರ್ಗ ಮಧ್ಯ ಉರುಳಿತು .  ಪ್ರತ್ಯಕ್ಷದರ್ಶಿಗಳು ಮತ್ತು ಪ್ರಾಥಮಿಕ ವರದಿಗಳ ಪ್ರಕಾರ  ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿ ಹತ್ತಿರದ ಕಂದರಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ .  ವೇಗದ ಚಾಲನೆ , ರಸ್ತೆ ತಿರುವು ಅಪಘಾತಕ್ಕೆ   ಕಾರಣವೆಂದು ಶಂಕಿಸಲಾಗಿದೆ.   ತನಿಖೆ ನಡೆಯುತ್ತಿದೆ. ಮಲ್ಲಾಪುರ ಪೊಲೀಸ್ ಠಾಣೆ ಮತ್ತು ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ರಕ್ಷಣಾ ತಂಡಗಳು ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ, ಅವಶೇಷಗಳ ನಡುವೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದರು.ಗಾಯಗೊಂಡ ಎಲ್ಲಾ 15 ಕಾರ್ಮಿಕರನ್ನು , ಮುಖ್ಯವಾಗಿ ಅಣು ಸ್ಥಾವರ  ಸ್ಥಳ ನಿರ್ವಹಣೆ ಮತ್ತು ವಿಸ್ತರಣೆ ಕೆಲಸಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು   ತುರ್ತು ಆರೈಕೆಗಾಗಿ ಕಾರವಾರದ ಮೆಡಿಕಲ್  ಕಾಲೇಜು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಲಾಗಿದೆ. ಮೆಡಿಕಲ್ ಕಾಲೇಜು ಡೈರೆಕ್ಟರ್ ಪೂರ್ಣಿಮಾ ಖುದ್ದಾಗಿ ನಿಂತು, ಗಾಯಗೊಂಡ  ಕಾರ್ಮಿಕರಿಗೆ ಚಿಕಿತ್ಸೆ ಕೂಡಿಸಿ ಮಾನವೀಯತೆ ಮರೆದಿದ್ದಾರೆ. ..