ದೇವಾಲಯ ಉದ್ಘಾಟನೆ ಸ್ವಾತಂತ್ರ್ಯ ರಕ್ಷಣೆಯಲ್ಲಿ ಮರಾಠಾ ಸಮುದಾಯದ ಪಾತ್ರ ಮುಖ್ಯವಾಗಿದೆ - ಕೋಳಿವಾಡ
ರಾಣೇಬೆನ್ನೂರು 31: ಭಾರತ ದೇಶದ ರಕ್ಷಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ ಅತಿ ಮುಖ್ಯವಾಗಿರುವುದು ಯಾರೊ ಮರೆಯುವಂತಿಲ್ಲ. ತುಳಜಾ ಭವಾನಿ ಶಿವಾಜಿ ಮಹಾರಾಜರ ಆರಾಧ್ಯ ದೈವ, ದೇವಿಯ ಆಶೀರ್ವಾದದಿಂದ ಇತಿಹಾಸದಲ್ಲಿ ನಡೆದ ಯಾವುದೇ ಯುದ್ಧಗಳು ಸೋಲು ಕಂಡಿಲ್ಲ. ಭವಾನಿ ಕುಲ ಸಮುದಾಯದ ಶಕ್ತಿ ದೇವತೆ ಅವಳಾಗಿದ್ದಾಳೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.ಅವರು ಶುಕ್ರವಾರ ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿ ಶ್ರೀ ತುಳಜಾ ಭವಾನಿ ದೇವಸ್ಥಾನ ಸೇವಾ ಸಮಿತಿ ಆಯೋಜಿಸಿದ್ದ, ನೂತನ ಶ್ರೀ ತುಳಜಾಭವಾನಿ, ಶ್ರೀ ಚೌಡೇಶ್ವರಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ರಾಜ ಮನೆತನದಲ್ಲಿ ಜನ್ಮ ತಾಳಿದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿ, ದೇಶಾಭಿಮಾನದಿಂದ ರಾಜ್ಯವನ್ನು ಕಟ್ಟಿದ ಮಹಾನ್ ಪುರುಷ ಅವರಾಗಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಭಾವೈಕ್ಯತೆಯ ಸಮಾಜವನ್ನು ಕಟ್ಟುವಲ್ಲಿ ಮತ್ತು ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸುವ ದೈವಭಕ್ತಿ ಸಮಾಜ ಇದಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಅರುಣಕುಮಾರ್ ಪೂಜಾರ್ ಮಾತನಾಡಿ, ಸ್ವಾತಂತ್ರ್ಯ ಗಳಿಸುವಲ್ಲಿ ಈ ಮರಾಠ ಸಮುದಾಯದ ಪಾತ್ರ ಅತ್ಯಂತ ಹಿರಿದಾಗಿದೆ. ಕುಲ ದೇವಿ ಆಶೀರ್ವಾದ ಇವರ ಮೇಲಿದೆ. ಸಂಸ್ಕೃತಿ ಮತ್ತು ಸಂಸ್ಕಾರ ಗ್ರಾಮದ ವಿಶೇಷತೆಯಾಗಿದೆ ತಾಲೂಕಿಗೆ ಹೆಮ್ಮೆಯ ಕ್ಷೇತ್ರ ಇದಾಗಿದೆ ಎಂದರು ರಾಜಕೀಯವಾಗಿ, ಯಾವುದೇ ಜಾತಿ ಮತ ಪಂಥ ಭೇದ ಭಾವ ಇಲ್ಲಿಲ್ಲ. ನುಡಿದಂತೆ ನಡೆಯುವ ಸಮುದಾಯ ಇದಾಗಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿ, ಈ ಸಮುದಾಯದ ಅಭಿವೃದ್ಧಿಗಾಗಿ ಪ್ರತಿ ಕ್ಷೇತ್ರದಲ್ಲಿ ತಲಾ 5 ಲಕ್ಷದಂತೆ 75 ಲಕ್ಷಕ್ಕೂ ಹೆಚ್ಚು ಹಣವನ್ನು ದೊರಕಿಸಿಕೊಟ್ಟಿದ್ದೇನೆ ಎಂದರು. ಅರೆಮಲ್ಲಾಪುರ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ, ಡಾ, ಪ್ರಣವಾನಂದರಾಮ ಶ್ರೀಗಳು, ದುಗ್ಗಾವತಿ ಹಿರೇಮಠದ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿ, ಸಂದೇಶಾಮೃತ ನೀಡಿದರು.
ಮುಖಂಡರಾದ ಮಂಜುನಾಥ ಓಲೇಕಾರ್, ಸಣ್ಣ ತಮ್ಮಪ್ಪ ಬಾರ್ಕಿ, ಸಂತೋಷಕುಮಾರ ಪಾಟೀಲ್, ಕೆ.ಕೆ.ಎಂ.ಪಿ. ಜಿಲ್ಲಾ ಅಧ್ಯಕ್ಷ ಎಂ ಎನ್ ವೆಂಕೊಜಿ, ಎಸ್.ಎಸ್. ರಾಮಲಿಂಗಣ್ಣನವರ್, ಮೊದಲಾದವರೂ ಮಾತನಾಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಯಶವಂತರಾವ್ ಸೊರ್ವೆ, ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಯಲ್ಲಪ್ಪ ರೆಡ್ಡಿ ರಡ್ಡೇರ,ಶ್ರೀ ಮತಿ ಪೂರ್ಣಿಮಾ ಪ್ರ. ಕೋಳಿವಾಡ, ಕೆ. ಕೆ. ಎಂ. ಪಿ. ವೆಂಕರಾವ್ ಚವ್ಹಾಣ, ನಾಗೇಶರಾವ್ ವನ್ಸೆ, ಯಶವಂತರಾವ್ ಜಾದವ, ಕೃಷ್ಣಪ್ಪ ಕಂಬಳಿ, ಹನುಮಂತಪ್ಪ ಬ್ಯಾಲದಹಳ್ಳಿ ಮಂಜನಗೌಡ ಪಾಟೀಲ್, ಡಾ, ದಯಾನಂದ, ಮರಿಯೋಜಿರಾವ್ ಜಿ. ಎಚ್., ಮಂಜುನಾಥ ಹಲವಾಗಲ, ಯಶವಂತರಾವ್ ಸೊರ್ವೆ, ಬಸವರಾಜ್ ನಾಗರಜ್ಜಿ, ಪವಿತ್ರಕುಮಾರ್ ನಾಗೇನಹಳ್ಳಿ, ಅಶ್ವಿನಿ ಅ. ಬಣಕಾರ, ಶಿವು ಸಣ್ಣಬೊಮ್ಮಾಜಿ, ಮತ್ತಿತರ ಗಣ್ಯರು ನಾಡಿನ ಸಮಾಜದ ನೂರಾರು ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀ ತುಳಜಾ ಭವಾನಿ, ಶ್ರೀ ಚೌಡೇಶ್ವರಿ, ಸಂಗೊಳ್ಳಿ ರಾಯಣ್ಣ ಮೂರ್ತಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೆ ಧನ ಕನಕ ವಿವಿಧ ರೂಪದಲ್ಲಿ ಆರ್ಥಿಕ ಸಹಾಯ ನೀಡಿದೆ ನೂರಾರು ಗಣ್ಯರನ್ನು ದೇವಸ್ಥಾನ ಸೇವಾ ಸಮಿತಿ ಪರವಾಗಿ ಅಭಿನಂದಿಸಿ, ಗೌರವಿಸಲಾಯಿತು. ಸಾಹಿತಿ, ಪರಶುರಾಮ ಬಣಕಾರ ಸಂಗಡಿಗರು ಪ್ರಾರ್ಥಿಸಿದರು. ನಾಗರಾಜ ಮಾಕನೂರ ಸ್ವಾಗತಿಸಿ, ಡಾಕ್ಟರ್ ಕೆ ಸಿ ನಾಗರಜ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ಜಾದವ ನಿರೂಪಿಸಿ, ರಾಜು ತಾ. ಸುರ್ವೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಜನನಿ ಜಾನಪದ ಕಲಾವೇದಿಕೆ ಕಲಾವಿದರು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದರು.