ಹೈದರಾಬಾದ್, ಏ 29 ದೇಶದ ಗಮನ ಸೆಳೆದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಿಂದ ನಾಮಪತ್ರ ಸಲ್ಲಿಸಲು ತೆಲಂಗಾಣದ 50 ರೈತರು ಮುಂದಾಗುವ ಮೂಲಕ ಮೋದಿಗೆ ಸವಾಲು ಎಸೆದಿದ್ದಾರೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಸುಮಾರು 50 ರೈತರು ತಮ್ಮ ಬಹುದಿನದ ಬೇಡಿಕೆಯಾದ ಪ್ರತ್ಯೇಕ ಮಂಡಳಿ ರಚಿಸಿ ಕ್ಷೇತ್ರದ ಕೃಷಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಗಮನ ಸೆಳೆಯಲು ಪ್ರಧಾನಿ ಮೋದಿ ವಿರುದ್ಧ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ.
ಸದ್ಯ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಕರ್ಾರ ತಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಿಲ್ಲ. ಇದಕ್ಕೂ ಮೊದಲು ಆಡಳಿತ ನಡೆಸಿದ ಯುಪಿಎ ಸಕರ್ಾರ ಕೂಡ ರೈತರ ಹಿತವನ್ನು ಕಡೆಗಣಿಸಿದೆ. ಪ್ರಧಾನಿ ಮೋದಿ ಅವರು ಕೂಡ ಅದನ್ನೇ ಮಾಡಿದ್ದಾರೆ. ನಾವು ಅವರ ವಿರೋಧಿಗಳಲ್ಲ ಅಥವಾ ಯಾರ ವಿರುದ್ಧವೂ ಪ್ರಚಾರ ನಡೆಸುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ.
ಕಳೆದ ಮೂನರ್ಾಲ್ಕು ವರ್ಷಗಳ ಅವಧಿಯಲ್ಲಿ ಅರಿಶಿನ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದೆ ದೇಶದ ರೈತರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅರಿಶಿನ ಬೆಲೆ ನೆಲಕಚ್ಚಿದ್ದು, ಪ್ರತಿ ಕ್ವಿಂಟಾಲ್ 5,200 ಇದ್ದದ್ದು, ಈಗ 3,200 ರೂಪಾಯಿ ತಲುಪಿದೆ ಎಂದು ರೈತರು ದೂರಿದ್ದಾರೆ.
ನಾಮಪತ್ರ ಸಲ್ಲಿಸುವ ತಮ್ಮ ನಿರ್ಧಾರ ಕ್ಕೆ ಸ್ಥಳೀಯ ಆಡಳಿತ ಹಾಗೂ ಬಿಜೆಪಿ ನಿರಾಕರಿಸಿವೆ. ವಿರೋಧದ ನಡುವೆಯೂ ಇತರ ಪ್ರದೇಶಗಳ ರೈತರೊಂದಿಗೆ ಸಮಾಲೋಚಿಸಿ ತಮ್ಮ ಪ್ರಚಾರ ನಡೆಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ತಮಿಳುನಾಡು ಅರಿಶಿನ ಬೆಳೆಗಾರರು ಕೂಡ ಇದೇ ನಿರ್ಧಾರ ಕೈಗೊಂಡಿದ್ದು, ತೆಲಂಗಾಣ ರೈತರಿಗೆ ಬೆಂಬಲ ಸೂಚಿಸಿದ್ದಾರೆ.