ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಪವಿತ್ರವಾದುದು: ಪ್ರೊ.ಮಾಲತಿ ಪಟ್ಟಣಶೆಟ್ಟಿ

ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಪವಿತ್ರವಾದುದು: ಪ್ರೊ.ಮಾಲತಿ ಪಟ್ಟಣಶೆಟ್ಟಿ Teaching profession is the holiest of all professions: Prof. Malathi Pattanashetty

ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಪವಿತ್ರವಾದುದು: ಪ್ರೊ.ಮಾಲತಿ ಪಟ್ಟಣಶೆಟ್ಟಿ 

ಧಾರವಾಡ 11: ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ನಿರಂತರ ಸ್ಪೂರ್ತಿದಾಯಕವಾಗಿ ಉಳಿಯುವ ಏಕೈಕ ವ್ಯಕ್ತಿ ಶಿಕ್ಷಕ ಮಾತ್ರ. ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಪವಿತ್ರವಾದುದು ಎಂದು ನಾಡಿನ ಹಿರಿಯ ಲೇಖಕಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಹೇಳಿದರು.  

     ಇಲ್ಲಿನ ಧಾರವಾಡ ಲಯನ್ಸ್‌ ಸಂಸ್ಥೆಯು ನಾರಾಯಣಪುರದ ಲಯನ್ಸ್‌ ಸಭಾಂಗಣದಲ್ಲಿ  ಬುಧವಾರ ಸಂಜೆ ಏರಿ​‍್ಡಸಿದ ಶಿಕ್ಷಕರ ದಿನೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕೆಂದು ಕರೆನೀಡಿದರು.  

    ಸಮಾಜ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರುವ ಧಾರವಾಡ ಲಯನ್ಸ್‌ ಸಂಸ್ಥೆಯ ಕಾರ್ಯವನ್ನು ಅವರು ಶ್ಲಾಘಿಸಿದರು.  

     ಈ ಸಂದರ್ಭದಲ್ಲಿ ಲಯನ್ಸ್‌ ಸಂಸ್ಥೆಯ 15 ಕ್ಕೂ ಹೆಚ್ಚು ಶಿಕ್ಷಕರನ್ನು ಆತ್ಮೀಯವಾಗಿ ಗೌರವಿಸಲಾಯಿತು.  

      ಸಮಾರಂಭದಲ್ಲಿ ಖಜಾಂಚಿ ಶ್ರೀಕಾಂತ ದೇವಗಿರಿ, ಶೈಲಾ ಕರಗುದರಿ, ಹರ್ಷ ದೇಸಾಯಿ, ಹರ್ಷ ಡಂಬಳ, ಮುಕುಂದ ಹೆಬ್ಲಿಕರ, ಆನಂದ ಕಮಲಾಪುರ, ಅರವಿಂದ ಹೆಬಸೂರ, ವಸಂತ ಭಟ್, ಡಾ.ಉಷಾ ಗದ್ದಗಿಮಠ, ನೀತಾ ಕೊಪ್ಪಿಕರ , ಅಮೃತಾ ಜೋಶಿ, ಅನುರಾಧಾ ಕುಲಕರ್ಣಿ, ಕವಿತಾ ಅಂಗಡಿ, ನಂದಿನಿ ಬಾಗಿ, ಆರತಿ ಕಮಲಾಪುರ ಇತರರು ಇದ್ದರು.  

   ಲಯನ್ಸ್‌ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಸ್ವಾಗತಿಸಿದರು. ಉಷ್ಮಾ ದೇಸಾಯಿ ಧ್ವಜವಂದನೆ ಸಲ್ಲಿಸಿದರು. ಡಾ.ರಾಜಶ್ರೀ ಗುದಗನವರ ಪರಿಚಯಿಸಿದರು. ಕಾರ್ಯದರ್ಶಿ ಪ್ರೊ.ಸುರೇಶ ಗುದಗನವರ ನಿರೂಪಿಸಿದರು. ಡಾ.ಅನಿರುಧ್ ಕುಲಕರ್ಣಿ ವಂದಿಸಿದರು.