ಮಾಂಸದ ಮುದ್ದೆಯಂತಿರುವ ಮಕ್ಕಳನ್ನು ತಿದ್ದಿ ತೀಡಿ ಬುದ್ದಿ ಕಲಿಯುವ ಶಕ್ತಿ ಗುರು ಮಾತೆಯರಿಗೆ ಇದೆ - ಕೋಳಿವಾಡ
ರಾಣಿಬೆನ್ನೂರ 8 : ಮಾಂಸದ ಮುದ್ದೆಯಂತಿರುವ ಮಕ್ಕಳನ್ನು ತಿದ್ದಿ ತೀಡಿ ಬುದ್ದಿ ಕಲಿಯುವ ಶಕ್ತಿ ಗುರು ಮಾತೆಯರಿಗೆ ಇದೆ. ಅಂತಹ ಕಾರ್ಯವನ್ನು ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಮಾಡಿದ್ದರು. ಅವರ ಮಾರ್ಗದಶನವನ್ನು ಎಲ್ಲ ಶಿಕ್ಷಕಿಯರು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಶನಿವಾರ ಇಲ್ಲಿನ ತಾಲೂಕಾ ಪ್ರಾಥಮಿಕ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸಾವಿತ್ರಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ರಾಜ್ಯ, ಜಿಲ್ಲಾ, ತಾಲೂಕಾ ಸಂಘ ಮತ್ತು ಪಿಕೆಕೆ ಇನಿಶಿಯೇಟಿವ್ ಹಾಗೂ ನಗರಸಭೆ, ರಾಜ್ಯ ಸರ್ಕಾರಿ ನೌಕರರ ಸಂಘ ರಾಣಿಬೆನ್ನೂರ ಘಟಕ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಂತಹ ದೊಡ್ಡ ವ್ಯಕ್ತಿಯಾಗಿದ್ದರೂ ಸಹ ತನಗೆ ಕಲಿಸಿದ ಶಿಕ್ಷಕರಿಗೆ ಮತ್ತು ಗುರು ಮಾತೆಯರಿಗೆ ಗೌರವ ಕೊಡುವ ಮೂಲಕ ನಮೃತೆಯಿಂದ ನಮಿಸುತ್ತಾನೆ. ಜಗತ್ತಿನಲ್ಲಿ ಗುರುವಿಗಿಂತ ದೊಡ್ಡ ವಸ್ತು ಬೇರೊಂದಿಲ್ಲ. ಶಿಕ್ಷಕ ಮತ್ತು ಶಿಕ್ಷಕಿಯರ ಹುದ್ದೆ ಶ್ರೇಷ್ಠವಾದ ಹುದ್ದೆ ಅದರ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಸರ್ಕಾರಿ ಶಾಲೆಯ ಶಿಕ್ಷಕಿಯರು ಮಕ್ಕಳಿಗೆ ಕನ್ನಡದ ಜೊತೆಗೆ ಇಂಗ್ಲೀಷ ಭಾಷೆಯ ಸಂಪೂರ್ಣ ಜ್ಞಾನ ನೀಡಬೇಕು. ಜೊತೆಗೆ ಜೀವನದ ಯಶಸ್ಸಿಗೆ ಕೌಶಲ್ಯ ಕಲಿಸಬೇಕು ಅಂದಾಗ ಮಾತ್ರ ಕನ್ನಡ ಶಾಲೆಗಳು ಉಳಿಯಲು ಸಾಧ್ಯ. ಕನ್ನಡದ ಅಳಿವು ಉಳಿವು ಸರ್ಕಾರಿ ಶಾಲೆಯ ಶಿಕ್ಷಕಿಯರ ಮೇಲಿದೆ ಎಂದರು.
ದಿವ್ಯ ಸಾನಿದ್ಧ ವಹಿಸಿದ್ದ ಇಲ್ಲಿನ ದೊಡ್ಡಪೇಟೆಯ ಆವರಗೊಳ್ಳ ಹಿರೇಮಠದ ಓಂಕಾರ ಶಿವಾರ್ಚಾ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಪಿಕೆಕೆ ಇನಿಶಿಯೇಟಿವ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಸಾವಿತ್ರಿಬಾಯಿ ಪಲೆ ಸಂಘದ ಸಂಸ್ಥಾಪಕ ಅಧ್ಯಕ್ಷೆ ಡಾಽ ಲತಾ ಮಳ್ಳೂರ ಮಾತನಾಡಿದರು.
ನಗರಸಭಾ ಅಧ್ಯಕ್ಷೆ ಚಂಪಕಾ ರಮೇಶ ಬಿಸಲಳ್ಳಿ, ತಾಲೂಕಾ ಪ್ರಾಥಮಿಕ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಸಿ. ಬಲ್ಲೂರ, ತಾಲೂಕಾ ಅಧ್ಯಕ್ಷೆ ಆರ್.ಎಸ್. ಬಸೇನಾಯ್ಕರ, ಸರೋಜಾ ಭರಮಗೌಡ್ರ, ರಾಜಶ್ರೀಸಜ್ಜೇಶ್ವರ, ಶೋಭಾ ನೋಟದ, ಕ್ಷೇತ್ರ ಸಮನ್ವಾಧಿಕಾರಿ ಮಂಜು ನಾಯಕ, ಅರುಣಕುಮಾರ ಚಂದನ, ಪದ್ವಾವತಿ ಪಾಟೀಲ, ಎಂ.ಬಿ. ದ್ಯಾಮಣ್ಣನವರ ಸೇರಿ ಇತರರು ಇದ್ದರು.
ಫೊಟೊ:8ಆರ್‌ಎನ್‌ಆರ್06ರಾಣಿಬೆನ್ನೂರ: ಇಲ್ಲಿನ ತಾಲೂಕಾ ಪ್ರಾಥಮಿಕ ಶಿಕ್ಷಕ ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸಾವಿತ್ರಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಸಂಘ ವತಿಯಿಂದ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಶಾಸಕ ಪ್ರಕಾಶಕೋಳಿವಾಡ ಉದ್ಘಾಟಿಸಿದರು.