ಶೈಕ್ಷಣಿಕ ವಾತಾವರಣ ನಿಮರ್ಿಸುವ ಹೊಣೆ ಶಿಕ್ಷಕರ ಮೇಲಿದೆ: ಶಾಸಕ ಬಳ್ಳಾರಿ

ನೂತನ ಶಾಲಾ ಕಟ್ಟಡಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿದರು.

ಲೋಕದರ್ಶನ ವರದಿ

ಬ್ಯಾಡಗಿ08: ಭಾರತ ದೇಶವು ಶಿಕ್ಷಣ ಸಂಪದ್ಭರಿತ ರಾಷ್ಟ್ರವಾಗಿ ಹೊರಹೊಮ್ಮಲು ಸಕರ್ಾರದೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಇಲ್ಲದಿದ್ದರೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿನ್ನೆಡೆ ಅನುಭವಿಸಬೇಕಾಗುತ್ತಿದ್ದು ಶೈಕ್ಷಣಿಕ ವಾತಾವರಣ ನಿಮರ್ಿಸುವ ಹೊಣೆಗಾರಿಕೆಯನ್ನು ಶಿಕ್ಷಕರು ತೋರಬೇಕಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.

 ತಾಲೂಕಿನ ಕಾಗಿನೆಲೆ ಗ್ರಾಮದ ಸಕರ್ಾರಿ ಉದರ್ು ಪ್ರೌಢಶಾಲೆಯಲ್ಲಿ ನೂತನ ಶಾಲಾ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿದರು.

 ಶೈಕ್ಷಣಿಕ ಸ್ಪಧರ್ೆ ಎಂದರೆ ಕೇವಲ ಅಂಕಗಳನ್ನು ಗಳಿಸುವುದಷ್ಟೇ ಅಲ್ಲ ಶಿಕ್ಷಣದ ಜೊತೆಗೆ ಬದುಕಿನ ಜ್ಞಾನಾರ್ಜನೆ ಸೇರಿದಂತೆ ಪ್ರಜ್ಞಾವಂತ ನಾಗರಿಕನನ್ನಾಗಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

      ಕಡ್ಡಾಯವಾಗಿ ಶಿಕ್ಷಣ ಕೊಡಿಸಿ: ಮುಸ್ಲಿಂ ಸಮುದಾಯದ ಮಕ್ಕಳಿಗೆ ಪಾಲಕರು ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು, ಕುಟುಂಬದ ಆಥರ್ಿಕ ಪರಿಸ್ಥಿತಿಯನ್ನು ಸುಧಾರಿಸುವ ಏಕೈಕ ಉದ್ದೇಶದಿಂದ ಚಿಕ್ಕ ಮಕ್ಕಳನ್ನೇ ದುಡಿಮೆಗಾಗಿ ಕಳಿಸುವುದನ್ನು ರೂಢಿಸಿಕೊಂಡಿದ್ದಾರೆ. 

 ಯಾವುದೇ ಕಾರಣಕ್ಕೂ ಪದವಿ ಹಂತದವರೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ರೂಢಿಸಿಕೊಳ್ಳಬೇಕು ಇಲ್ಲದೇ ಹೋದಲ್ಲಿ ತಮ್ಮ ಮಕ್ಕಳು ಅವರು ಮಾಡುವಂತಹ ಯಾವುದೇ ವೃತ್ತಿಯಲ್ಲಿಯೂ ಪರಿಪೂರ್ಣನಾಗಲು ಸಾಧ್ಯವಿಲ್ಲ ಎಂದರು.

  ಜಿಪಂ.ಸದಸ್ಯ ಅಬ್ದುಲ್ಮುನಾಫ್ ಎಲಿಗಾರ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಶಿಕ್ಷರೊಂದಿಗೆ ಪೊಷಕರು ಸಹ ಕೈ ಜೋಡಿಸಿದಾಗ ಮಕ್ಕಳ ಭವಿಷ್ಯ ಸುಭದ್ರವಾಗಿರಲು ಸಾಧ್ಯವಾಗುತ್ತದೆ, ಇತ್ತೀಚಿನ ದಿನಗಳಲ್ಲಿ ಅಂತಜರ್ಾಲದ ಹವ್ಯಾಸ ಹೆಚ್ಚಾಗಿದ್ದು ಚಿಕ್ಕ ವಯಸ್ಸಿನಲ್ಲಿಯೇ ಕತ್ತೆಲೆ ಜಗತ್ತಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ.

  ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಎಚ್ಚೆತ್ತುಕೊಳ್ಳುವ ಮೂಲಕ ಮಕ್ಕಳ ಚಲನವಲನದ ಬಗ್ಗೆ ನಿಗಾ ವಹಿಸಬೇಕು ಇದಕ್ಕಾಗಿ ಸಕರ್ಾರವು ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಮಾಡಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

           ಮುಸ್ಲಿಂ ಯುವತಿಯರಿಗೂ ಶಿಕ್ಷಣ ಕೊಡಿಸಿ: ಸ್ಪಧರ್ಾತ್ಮಕ ಯುಗದಲ್ಲಿ ಪುರಷರಷ್ಟೇ ಸರಿಸಮನಾಗಿ ಮಹಿಳೆ ಮುನ್ನುಗ್ಗುತ್ತಿದ್ದಾಳೆ, ಪ್ರಸಕ್ತ ದಿನಗಳಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿಯೂ ಮುನ್ನುಗ್ಗುತ್ತಿದ್ದು, ಆ ಕಾರಣಕ್ಕಾಗಿ ಪ್ರತಿಯೊಬ್ಬ ಪಾಲಕರು ಗಂಡು ಹೆಣ್ಣು ಎಂಬ ಬೇಧ ಭಾವ ನೋಡದೇ ಸರಿಸಮ ಶಿಕ್ಷಣ ಕೊಡಿಸುವ ಮೂಲಕ ಮುಸ್ಲಿಂ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿ ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಮಾಡಿಕೊಡುವಂತೆ ಸಲಹೆ ನೀಡಿದರು.. 

 ತಾ.ಪಂ.ಸದಸ್ಯ ಜಗದೀಶ ಪೂಜಾರ, ಜಿಪಂ ಮಾಜಿ ಅಧ್ಯಕ್ಷ ಶಂಕ್ರಪ್ಪ ಮಾತನವರ, ನಿವೃತ್ತ ಇಂಜಿನಿಯರ ಸಿ.ಆರ್.ಬಳ್ಳಾರಿ, ಎಸ್ಡಿಎಮ್ಸಿ ಉಪಾದ್ಯಕ್ಷೆ ಅಖಿಲಾ ಉನ್ನಿಸ್ ಹಾವೇರಿ, ಅಲ್ಲಾಭಕ್ಷ ಬಳಿಗಾರ, ಅಬ್ದುಲ್ ನಾಯಕ, ಸದಾನಂದ ಪಾಟೀಲ, ಶಿವಾನಂದ ಕಡಗಿ, ಶೇಖರಗೌಡ ಗೌಡ್ರ, ಮನೋಜ ಯತ್ನಳ್ಳಿ, ಚಂದ್ರಪ್ಪ ಬಾಕರ್ಿ ಇನ್ನಿತರರು ಉಪಸ್ಥಿತರಿದ್ದರು.