ಮೊರಾರ್ಜಿ ದೇಸಾಯಿ ವಸತಿ ಹ್ಯಾಮ್ ಸ್ಟೇಷನ್‌ನಲ್ಲಿ ಮಾತನಾಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು

Teachers and students who spoke at the Morarji Desai residential ham station

ಮೊರಾರ್ಜಿ ದೇಸಾಯಿ ವಸತಿ ಹ್ಯಾಮ್ ಸ್ಟೇಷನ್‌ನಲ್ಲಿ ಮಾತನಾಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು 

ಬೀಳಗಿ 20 : ಅಂತರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಮಾಡುವಂತ ಹ್ಯಾಮ್ ಸ್ಟೇಷನ್  ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲೆಯಲ್ಲಿ ಮೊದಲ, ರಾಜ್ಯದಲ್ಲಿ 3ನೇಯ ಕೇಂದ್ರವಾಗಿದೆ, ಇಲ್ಲಿನ ವಿಜ್ಞಾನ ಶಿಕ್ಷಕ ಕೃಷ್ಣಾ ಜೋಶಿ ಹಾಗೂ ಕು.ರಫೀದಾ ಖಾಜಾಮೈನುದ್ದನ್ ತಹಸಿಲ್ದಾರ್ ಮತ್ತು ಕು.ವಿನಾಯಕ ಬೂಸರಡ್ಡಿ ಇಬ್ಬರು ವಿದ್ಯಾರ್ಥಿಗಳು ಹ್ಯಾಮ್ ಲೈಸೆನ್ಸ್‌ ಪಡೆದ ಜಿಲ್ಲೆಯ ಮೊದಲ ವಿದ್ಯಾರ್ಥಿಗಳು, ತುರ್ತು ಸಂದರ್ಭದಲ್ಲಿ ಹಾಗೂ ಪರಿಸರದಲ್ಲಿ ಆಗುವ ಅನಾಹುತದ ಸಂದರ್ಭದಲ್ಲಿ ಸಂದೇಶ ರವಾನಿಸಲು ಉಪಯುಕ್ತವಾದ ಸಂವಹಣ ಇದಾಗಿದೆ ಎಂದು ವಸತಿ ಶಾಲೆಯ ಪ್ರಾಂಶುಪಾಲ ಶೇಖಪ್ಪ ಅರಸನಗಿ ಹೇಳಿದರು. 

      

   ಮೊರಾರ್ಜಿ ದೇಸಾಯಿ ವಸತಿ ಹ್ಯಾಮ್ ಸ್ಟೇಷನ್‌ನಲ್ಲಿ ಮಾತನಾಡಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಹ್ಯಾಮ್ ಲೈಸೆನ್ಸ್‌ ಹೊಂದಿದವರ ಜೊತೆಗೆ ನಿರರ್ಗಳವಾಗಿ ಮಾತನಾಡಲು ಅನುಕೂಲವಾಗಿದೆ. ಮೊಬೈಲ್ ನೆಟ್ವರ್ಕ್‌ ನಿಂತಾಗ, ನೈಸರ್ಗಿಕ ಅವಗಡಗಳು ಸಂಭವಿಸಿದಾಗ ತುರ್ತು ಸಂದರ್ಭದಲ್ಲಿ ಹ್ಯಾಮ್ ಲೈಸೆನ್ಸ್‌ ಪಡೆದವರ ನೆರವು ಪಡೆದು ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು, ನಿತ್ಯ ಶಾಲಾ ಆವರಣದಲ್ಲಿ ಹ್ಯಾಮ್ ಬಳಕೆ ಮಾಡಲಾಗುತ್ತಿದೆ ಎಂದರು. 

   ಬಳಿಕ ವಿಜ್ಞಾನ ಶಿಕ್ಷಕ ಕೃಷ್ಣಾ ಜೋಶಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸ್ತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ರಾಜ್ಯದ 20 ವಸತಿ ಶಾಲೆಯಲ್ಲಿ ಮೊದಲ ಪ್ರಯತ್ನ ಇದಾಗಿದೆ, ಮಕ್ಕಳಲ್ಲಿ ಭಾಷಾ ಕೌಶಲ್ಯ ಹೆಚ್ಚಿಸುವುದು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಡ್ ವರ್ಡ್‌ ಬಳಕೆ ಮಾಡಿ ಸಂವಹನ ಮಾಡುವಂತಹ ಅವಕಾಶ ಮಕ್ಕಳಿಗೆ ಸಿಗುತ್ತದೆ, ಶಾಲಾ ಮಟ್ಟದಲ್ಲಿ ಮಕ್ಕಳಿಗೆ ತಂತ್ರಜ್ಞಾನದ ಬೆಳವಣಿಗೆ ಸೂಚಿಸುವುದಕ್ಕೆ ಅತ್ಯುತ್ತಮ ಸಾಧನ ಇದಾಗಿದೆ ಎಂದರು.