ಮುಂಬರುವ ಜನಗಣತಿಯಲ್ಲಿ ಸಮಸ್ಯೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಲು ತಹಶೀಲ್ದಾರ ಮೂಲಕ ಶಿಕ್ಷಕ ಸಂಘದಿಂದ ಮನವಿ

ಮುಂಬರುವ ಜನಗಣತಿಯಲ್ಲಿ ಸಮಸ್ಯೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಲು ತಹಶೀಲ್ದಾರ ಮೂಲಕ ಶಿಕ್ಷಕ ಸಂಘದಿಂದ ಮನವಿ Teachers' association requests through Tahsildar to exempt teachers facing problems in upcoming cen

ಲೋಕದರ್ಶನ ವರದಿ 

 ಯರಗಟ್ಟಿ 12 : ಜನಗಣತಿ ಕಾರ್ಯಕ್ಕೆ ಮಾರಣಾತಿಕ ಕಾಯಿಲೆಇರುವ ಶಿಕ್ಷಕರಿಗೆ, ಹೆರಿಗೆ ರಜೆಯಲ್ಲಿರುವ ಶಿಕ್ಷಕಿಯರಿಗೆ ್ಘ ಮುಖ್ಯ ಶಿಕ್ಷಕರಿಗೆ, ಬಿಎಲ್‌ಓ ಶಿಕ್ಷಕರಿಗೆ ವಿನಾಯತಿ ನೀಡಿ ಉಳಿದವರನ್ನು ಜನಗಣತಿ ಕಾರ್ಯಕ್ಕೆ ಬಳಿಸಿಕೊಳುವಂತೆ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ರಾಜ್ಯ ಅಧ್ಯಕ್ಷ ಸಂಗಮೇಶ ಖನ್ನಿನಾಯ್ಕರ ತಹಸೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮೂಲಕ ಸರಕಾರಕ್ಕೆ ಮನವಿಸಲ್ಲಿಸಿದರು. 

ಮನವಿ ಸ್ವೀಕರಿಸಿ ತಹಶೀಲ್ದಾರ ಎಮ್‌. ವ್ಹಿ. ಗುಂಡಪ್ಪಗೋಳ ಮಾತನಾಡಿ ಈ ಜನಗಣತಿ ಕಾರ್ಯಕ್ಕೆ ಅನುಕೂಲ ಇರವ ಶಿಕ್ಷಕರಿಗೆ ಈ ಕೆಲಸಕ್ಕೆ ಆಯ್ಕೆಮಾಡಲಾಗುವುದು. ಮತ್ತು ಮಾರಣಾತಿಕ ಕಾಯಿಲೆವಿರುವ ಶಿಕ್ಷಕರಿಗೆ, ಹೆರಿಗೆ ರಜೆಯಲ್ಲಿರುವ ಶಿಕ್ಷಕಿಯರಿಗೆ ್ಘ ಮುಖ್ಯ ಶಿಕ್ಷಕರಿಗೆ, ಬಿಎಲ್‌ಓ ಶಿಕ್ಷಕರಿಗೆ ರಿಯಾತಿ ನೀಡಿ ಖಂಡಿತವಾಗಿ ಸಮಸ್ಯೆಗಳನ್ನು ಪರಿಹರಿಸೋಣ ಮತ್ತು ಎಲ್ಲಾ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಅನುಕೂಲ ಮಾಡಲಿಕ್ಕೆ ಪ್ರಯತ್ನ ಮಾಡೋಣ ಎಂದು ಹೇಳಿದರು. 

ಈ ವೇಳೆ ಶಿಕ್ಷಕರಾದ ಎಂ. ಎಂ. ಚಿಲದ, ಎಸ್‌. ಬಿ. ಮಿಕಲಿ, ಪ್ರಧಾನಗುರುಗಳಾದ ಎ. ಎ. ಮಕ್ತುಮನವರ, ಶಿಕ್ಷಣ ಸಂಯೋಜಕರಾದ ಎಂ. ಬಿ. ಕಡಕೋಳ, ಸಿಆರ್‌ಪಿಗಳಾದ ವಸಂತ ಬಡಿಗೇರ, ಎಂ. ಎಂ. ಮಲ್ಲಕನ್ನವರ, ಬಿ. ಎಸ್‌. ಸಿದ್ದಬಸನ್ನವರ, ಸೋಮೇಶ ಪೂಜೇರ, ವಿಜಯ ಮೆಳವಂಕಿ, ಆರ್‌. ಎ. ಗಂಗೂರ, ಡಿ. ಎಚ್‌. ಭಜಂತ್ರಿ, ಆರ್‌. ಕೆ. ಹುಣಶೀಕಟ್ಟಿ, ಅನಿಲ ಭಜಂತ್ರಿ, ಬಿ. ಎಂ. ಸರದಾರ, ಮಲ್ಲಪ್ಪ ಯರಝರ್ವಿ, ವಾಯ್‌. ಬಿ. ನಂದಿ ಸೇರಿದಂತೆ ಅನೇಕ ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.