ಶಿಶಿಕ್ಷು ತರಬೇತಿ ಮತ್ತು ಪಿ.ಎಮ್. ಇಂಟರ್ನ್-ಶಿಪ್ ಯೋಜನೆಗಳ ಅರಿವು ಕಾರ್ಯಗಾರ ಯಶಸ್ವಿ
ಕೊಪ್ಪಳ 24 : ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚಿಗೆ "ಶಿಶಿಕ್ಷು ತರಬೇತಿ ಮತ್ತು ಪಿ.ಎಮ್, ಇಂಟರ್ನ್-ಶಿಪ್ ಯೋಜನೆಗಳ ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಅನುಭವಿ ಉಪನ್ಯಾಸಕರಿಂದ ಮಾಹಿತಿ ನೀಡಿದರು.ಈ ಕಾರ್ಯಾಗಾರದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಕೈಗಾರಿಕಾ ಕಂಪನಿಗಳ ಉದ್ಯಮಿದಾರರು ಹಾಗೂ ಕೊಪ್ಪಳ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ 250 ಕ್ಕೂ ಹೆಚ್ಚಿನ ತರಬೇತಿದಾರರು ಪ್ರತ್ಯಕ್ಷವಾಗಿ ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ 1500 ಕ್ಕೂ ಹೆಚ್ಚು ತರಬೇತಿದಾರರು ಹಾಗೂ ಸಿಬ್ಬಂದಿ ವರ್ಗದವರು ವರ್ಚುವಲ್ ಮೂಲಕ ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು. ಸಂಸ್ಥೆಯ ಪ್ರಾಚಾರ್ಯರು ಹಾಗೂ ಕೊಪ್ಪಳ ಜಿಲ್ಲಾ ನೋಡಲ್ ಅಧಿಕಾರಿಗಳಾದ ಗವಿಶಂಕರ್.ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಉದ್ಘಾಟನೆಯನ್ನು ನೆರವೇರಿಸಿದರು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಕಲಬುರಗಿ ವಿಭಾಗೀಯ ಕಛೇರಿಯ ತರಬೇತಿ ಅಧಿಕಾರಿ ಪ್ರವೀಣ ಮಳ್ಳಿ ಅವರು ಕಾರ್ಯಕ್ರಮದ ಕುರಿತು ಉಪನ್ಯಾಸವನ್ನು ನೀಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಸಹಾಯಕ ಶಿಶಿಕ್ಷು ಸಲಹೆಗಾರ ಕೊಟ್ರೇಶ ಡಿ., ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ರಮೇಶ ಬೋಗಮ್, ಹನುಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವೀರಭದ್ರ್ಪ ಕಾಳಗಿ, ಯಲಬುರ್ಗಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ(ಮಹಿಳಾ) ಪ್ರಾಚಾರ್ಯರಾದ ವೇಷಗಾರ ಶರಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.