ಲೋಕದರ್ಶನ ವರದಿ
ಹಾವೇರಿ 16: ತಾಲೂಕಿನ ಹನುಮನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವಗರ್ಾವಣೆಯಾದ ಶಿಕ್ಷಕ ಎಚ್.ಎಸ್ ತಂಗೊಡರ್ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲೆಗಳ ಅಭಿವೃದ್ಧಿಗೆ ಪಾಲಕರ ಹಾಗೂ ಗ್ರಾಮಸ್ಥರ ಸಹಾಯ, ಜನಪ್ರತಿನಿಧಿಗಳು ಸಹಕಾರ ಅಗತ್ಯ. ಅದರಿಂದ ಸುಮಾರು 22 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಲು ಅನುಕೂಲವಾಗಿದ್ದು, ಸೇವೆ ತೃಪ್ತಿ ತಂದಿದೆ. ಮುಂಬರುವ ಶಿಕ್ಷಕರಿಗೂ ಇದೇ ರೀತಿ ಸಹಕಾರ ನೀಡಬೇಕೆಂದು ವಗರ್ಾವಣೆ ಹೊಂದಿದ ಶಾಲಾ ಸಹ ಶಿಕ್ಷಕ ಎಚ್.ಎಸ್ ತಂಗೊಡರ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಬಾಲಕ್ಕನವರ ಅವರು ಮಾತನಾಡಿ, ಶಿಕ್ಷಕರಾದವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಸಮಾಜದಲ್ಲಿ ಗಣ್ಯ ವ್ಯಕ್ತಿಗಳನ್ನಾಗಿಸಿ, ಹಿರಿಯರು ತಂದೆ ತಾಯಿಯರನ್ನು ಗೌರವಿಸುವಂತೆ ಮಾನವೀಯ ಮೌಲ್ಯಗಳನ್ನು ಬೆಳೆಸುವಂತೆ ಉತ್ತೇಜಿಸಬೇಕು ಎಂದು ಹೇಳಿದರು.
ಇದೇ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಯ ಎಚ್ ಎಸ್ ಬೇಳಾರ ಅವರು ವಗರ್ಾವಣೆಗೊಂಡ ಶಿಕ್ಷಕರೊಂದಿಗೆ ಕಾರ್ಯ ನಿರ್ವಹಿಸಿದ ಸುಮಧುರ ಕ್ಷಣಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಹಿರೇಮಠ ಶಿಕ್ಷಕರು ಸ್ವಾಗತಿಸಿ, ಪ್ರಕಾಶ ದೊಡ್ಡಮನಿ ನಿರೂಪಿಸಿ, ಚೌಧರಿ ಗುರುಗಳು ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಕೋಳೂರ, ಉಪಾಧ್ಯಕ್ಷ ಕರಬಸಪ್ಪ ಮುದ್ದಿಯವರ, ಶೇಕಪ್ಪ ಬಾಲಣ್ಣನವರ, ಶಂಕರ ಬಾಲಕ್ಕನವರ, ಶರಣಪ್ಪ ಬಂಕಾಪುರ, ರುದ್ರಗೌಡ ಪಾಟೀಲ್ ಸೇರಿದಂತೆ ಸಹಪಾಠಿ ಶಿಕ್ಷಕರು, ಗ್ರಾಮಸ್ಥರು, ಮಕ್ಕಳು ಪಾಲ್ಗೊಂಡಿದ್ದರು.