ಲೋಕದರ್ಶನ ವರದಿ
ಬೆಳಗಾವಿ 01: ತಾಲೂಕಿನ ಹಂದಿಗನೂರ ಸಿ.ಆರ್.ಸಿ. ವ್ಯಾಪ್ತಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಭೆಯಲ್ಲಿ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಬಸವರಾಜ ಸುಣಗಾರ ಹಾಗೂ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಚಕ್ರ ಎಸೆತ್ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾದ ಹಂದಿಗನೂರ ಕನ್ನಡ ಶಾಲೆಯ ಸಹ ಶಿಕ್ಷಕರಾದ ನಾಗರಾಜ ಪಮ್ಮಾರ ರನ್ನ ಅಭಿನಂದಿಸಲಾಯಿತು.
ಸಿ.ಆರ್.ಸಿ. ಸಾಗರ ಹರಾಡೆಯವರು ಮುಂದಾಳತ್ವದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ವಿವಿಧ ಶಾಲಾ ಮುಖ್ಯೋಪಾಧ್ಯಾಯರಾದ ವ್ಹಿ.ಬಿ. ಹುಬ್ಬಳೀಕರ, ಎಂ.ಸಿ. ವಾನರ್ೊಳಕರ ವ್ಹಿ. ಎಂ. ಪಾಟೀಲ, ಎಂ.ಜೆ.ಕುರಿ, ಅನಿಲ ತೀನೇಕರ, ವಿ.ಆರ್. ಹಾಲೆಣ್ಣವರ್, ಸುರೇಶ ಅಷ್ಟಗಿ, ಎಂ.ಆರ್. ನಾಲಫರೋಶಿ, ಅಶೋಕ ಕಲರ್ೆಪ್ಪನವರ, ಮಲ್ಲಾರಿ, ಮುಂತಾದವರು ಉಪಸ್ಥಿತರಿದ್ದು ಇವರ ಆಯ್ಕೆಗೆ ಸಂತೋಷ ವ್ಯಕ್ತ ಪಡಿಸಿದರು.