ಶಿಕ್ಷಕರ ವಗರ್ಾವಣೆ ತಕ್ಷಣ ಆರಂಭಿಸಲು ಆಗ್ರಹ

ಶಿಕ್ಷಕರ ವಗರ್ಾವಣೆ ತಕ್ಷಣ ಆರಂಭಿಸಲು ಆಗ್ರಹ

ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ

ಧಾರವಾಡ : ಶಿಕ್ಷಣ ಇಲಾಖೆಯ ಅವಕೃಪೆಗೆ ಒಳಗಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವಗರ್ಾವಣೆ ಪ್ರಕ್ರಿಯೆ ಅನೇಕ ಕಾರಣಗಳಿಂದಾಗಿ ಕಳೆದ 2-3 ವರುಷಗಳಿಂದ ನೆನೆಗುದಿಗೆ ಬಿದ್ದಿದ್ದು, ಪ್ರಸ್ತುತ ವಿಳಂಬವಿಲ್ಲದೇ ಶಿಕ್ಷಕರ ವಗರ್ಾವಣೆಯನ್ನು ತಕ್ಷಣ ಆರಂಭಿಸಬೇಕೆಂದು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯಮಂತ್ರಿಗಳನ್ನು ಆಗ್ರಹಪಡಿಸಿದೆ. 

ಶಿಕ್ಷಕರ ಸಂಘದ ಪದಾಧಿಕಾರಿಗಳು ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಆಚರಿಸುವ ಬದಲು, ರಾಜ್ಯದ ಸಮಸ್ತ ಶಿಕ್ಷಕ-ಶಿಕ್ಪ್ಷಕಿಯರಿಗೆ ಆಗಿರುವ ವಗರ್ಾವಣೆಯ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ಸಿ.ಎಂ. ಕುಮಾರಸ್ವಾಮಿ ಅವರಿಗೆ ಬರೆದ ಮನವಿ ಪತ್ರವನ್ನು ಬುಧವಾರ ನಗರದ ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ಮೂಲಕ ಸಿ.ಎಂ. ಕುಮಾರಸ್ವಾಮಿ ಅವರಿಗೆ ಸಲ್ಲಿಸಿ, ವಿಳಂಬವಿಲ್ಲದೇ ತಕ್ಷಣ ಶಿಕ್ಷಕರ ವಗರ್ಾವಣೆ ಪ್ರಕ್ರಿಯೆಯನ್ನು ಯಥಾವತ್ತಾಗಿ ಇಲಾಖೆ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು. 

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾರಕವಾದ ಅವೈಜ್ಞಾನಿಕ ವಗರ್ಾವಣೆ ನೀತಿ ವಗರ್ಾವಣೆಯಲ್ಲಿ ಅನುಸರಿಸಬೇಕಾದ ಮಾನದಂಡಗಳ ಅಸೃಷ್ಟತೆ, ವಗರ್ಾವಣೆ  ತಂತ್ರಾಂಶದಲ್ಲಿನ ದೋಷ, ಟಿ.ಡಿ.ಎಸ್. ತಂತ್ರಾಂಶದಲ್ಲಿನ ದೋಷ ಹಾಗೂ ವಿಧಾನ ಸಭೆ ಚುನಾವಣೆ ನೀತಿ ಸಂಹಿತೆ ಇತ್ಯಾದಿ ಹಲವು ಕಾರಣಗಳಿಂದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಳೆದ 2-3ವರ್ಷಗಳಿಂದ ವಗರ್ಾವಣೆ ಜರುಗಿಸುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಫಲವಾಗಿದೆ. ಸರಕಾರ ಇನ್ನುಳಿದ ಇಲಾಖೆಗಳಲ್ಲಿ ವಗರ್ಾವಣೆ ಮತ್ತು ಬಡ್ತಿ ಪ್ರಕ್ರಿಯೆಯನ್ನು ಸರಳವಾಗಿ ನಡೆಸುತ್ತಿದೆ. ಆದರೆ ಶಿಕ್ಷಕರ ವಿಷಯದಲ್ಲಿ ಇದು ನಿಲುಕದ ನಕ್ಷತ್ರವಾಗಿದೆ. ವಗರ್ಾವಣೆ ಹಾಗೂ ಬಡ್ತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಶಿಕ್ಷಕರ ವಗರ್ಾವಣೆ ಪ್ರಕ್ರಿಯೆಯನ್ನು ಪದೇ ಪದೇ ಮುಂದೂಡಲಾಗಿತ್ತಿದೆ.  ಈಗ ವಗರ್ಾವಣೆ 6ನೇ ಬಾರಿ ಸ್ಥಗಿತಗೊಂಡಿದೆ.  ಇನ್ನು ಮುಂದಿನ ವರ್ಷ ಮಾರ್ಚದಲ್ಲಿ ಪರೀಕ್ಷೆ ಮತ್ತು ಎಪ್ರಿಲ್/ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯುವುದರಿಂದ ಮತ್ತೆ ಶಿಕ್ಷಕ-ಶಿಕ್ಪ್ಷಕಿಯರು ವಗರ್ಾವಣೆಯಿಂದ ವಂಚಿತರಾಗುವರೆಂಬ ಆತಂಕ ಶಿಕ್ಷಕರಲ್ಲಿ ಮೂಡಿದೆ. ಸಾವಿರಾರು ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ. ಹಲವಾರು  ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ವಗರ್ಾವಣೆಯ ಅನಿಶ್ಚಿತತೆಯಿಂದಾಗಿ ಶಿಕ್ಷಕರು ಮಾನಸಿಕವಾಗಿ ಕ್ಷೊಬೆಗೊಳಗಾಗಿದ್ದು, ಇದರಿಂದ ಪರಿಣಾಮಕಾರಿ ಬೋಧನೆ ಮೇಲೆ ಹಾಗೂ ಗುಣಮಟ್ಟದ ಶಿಕ್ಷಣ ಮೇಲೆ ಪರಿಣಾಮ ಬೀರುತ್ತಿದೆ. ಕಾರಣ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡಲು ಸ್ಥಗಿತಗೊಳಿಸದ ಪ್ರಾಥಮಿಕ ಶಾಲಾ ಶಿಕ್ಷಕರ ವಗರ್ಾವಣೆಯನ್ನು ಅನಗತ್ಯ ವಿಳಂಬ ಮಾಡದೇ ತಕ್ಷಣವೇ ಪಾರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಬೇಕೆಂದು ಸಂಘದ ವತಿಯಿಂದ ಮನವಿಯಲ್ಲಿ ವಿನಂತಿಸಲಾಗಿದೆ. 

ಶಿಕ್ಷಕರ ವಗರ್ಾವಣೆಯಲ್ಲಿ ಭ್ರಪ್ಟಾಚಾರವನ್ನು ತಡೆಗಟ್ಟುವ ಸಲುವಾಗಿ ಕೌನ್ಸಲಿಂಗ ಮೂಲಕವೇ ವಗರ್ಾವಣೆ ಮಾಡಲು ಪ್ರಾರಂಭಿಸಲಾಯಿತು. ತದನಂತರ ಇದು 2007ರಲ್ಲಿ ಕಾಯ್ದೆಯಾಗಿತ್ತು. ಪ್ರತಿವರ್ಷವು ಒಂದಿಲ್ಲೊಂದು ಶಿಕ್ಷಕರಿಗೆ ಮಾರಕವಾಗುವ ನಿಯಮಗಳನ್ನು ಸೇರಿಸುತ್ತಾ  ಹೊಗುತ್ತಿದ್ದು, ಇದು ಗೊಂದಲದ ಗೂಡಾಗಿದ್ದು, ಈಗ ವಗರ್ಾವಣೆ ಕಾಯ್ದೆಯಲ್ಲಿರುವ ಎಲ್ಲ ಅವೈಜ್ಞಾನಿಕ  ನಿಯಮಾವಳಿಗಳನ್ನು ತೆಗೆದು ಹಾಕಿ, ಸಮಗ್ರ ಪರಿಷ್ಕರಣೆ ಮಾಡಿ ಶಿಕ್ಷಕರ ಸ್ನೇಹಿ ವಗರ್ಾವಣೆ ನೀತಿಯನ್ನು ಜಾರಿಗೆ ತರಬೇಕೆಂದು ಸಂಘದ ರಾಜ್ಯಾಧ್ಯಕ್ಷ ಗುರು ಪೋಳ, ಉಪಾಧ್ಯಕ್ಷ ಗುರು ತಿಗಡಿ, ಪ್ರದಾನ ಕಾರ್ಯದಶರ್ಿ ಶಂಕರ ಘಟ್ಟಿ, ಪದಾಧಿಕಾರಿಗಳಾದ ಕೆ.ಎಸ್. ದೊಡವಾಡ, ಸಿ.ಎಂ. ಕಿತ್ತೂರ, ಮಹಾದೇವಿ ದೊಡಮನಿ, ಎಲ್.ಐ. ಲಕ್ಕಮ್ಮನವರ, ಎಂ.ಎನ್. ಸತ್ತೂರ, ಕಲ್ಲಯ್ಯ ಕಾದ್ರೊಳ್ಳಿ, ಆರ್.ಎಸ್. ಹಿರೇಗೌಡರ, ರಮೇಶ ಮಂಗೋಡಿ, ಚಂದ್ರು ತಿಗಡಿ, ಜಿ. ಬಿ. ಹೊಸಮನಿ, ಬಿ.ಎಂ. ಸಜ್ಜನ, ಎಸ್.ವೈ. ಕಟ್ಟಿಮನಿ, ಎಂ.ಎನ್. ಮೇದಾರ ಮುಂತಾದವರು ಒತ್ತಾಯಿಸಿದ್ದಾರೆ.  

ಸಂಘದ ರಾಜ್ಯಾಧ್ಯಕ್ಷ ಗುರು ಪೋಳ, ಉಪಾಧ್ಯಕ್ಷ ಗುರು ತಿಗಡಿ, ಪ್ರಧಾನ ಕಾರ್ಯದಶರ್ಿ ಶಂಕರ ಘಟ್ಟಿ, ಪದಾಧಿಕಾರಿಗಳಾದ ಕೆ.ಎಸ್. ದೊಡವಾಡ, ಸಿ.ಎಂ. ಕಿತ್ತೂರ, ಮಹಾದೇವಿ ದೊಡಮನಿ, ಎಲ್.ಐ. ಲಕ್ಕಮ್ಮನವರ, ಎಂ.ಎನ್. ಸತ್ತೂರ, ಕಲ್ಲಯ್ಯ ಕಾದ್ರೊಳ್ಳಿ, ಆರ್.ಎಸ್. ಹಿರೇಗೌಡರ, ರಮೇಶ ಮಂಗೋಡಿ, ಚಂದ್ರು ತಿಗಡಿ, ಜಿ. ಬಿ. ಹೊಸಮನಿ, ಬಿ.ಎಂ. ಸಜ್ಜನ, ಎಸ್.ವೈ. ಕಟ್ಟಿಮನಿ, ಎಂ.ಎನ್. ಮೇದಾರ ಈ ಸಂದರ್ಭದಲ್ಲಿ ಹಾಜರಿದ್ದರು.