ಹೆಣ್ಣು ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಕಲಿಸಿ : ಎಸ್‌.ರಾಮಪ್ಪ

Teach girls manners along with education: S. Ramappa

ಹೆಣ್ಣು ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಕಲಿಸಿ : ಎಸ್‌.ರಾಮಪ್ಪ  

ಕಂಪಿ ್ಲ08:  ಪಟ್ಟಣದ ಸರ್ಕಾರಿ ಷಾಮಿಯಾಚಂದ್ ಕಾಲೇಜು ಹಿಂಬದಿಯ ಆಂಜನೇಯ ದೇವಸ್ಥಾನ ಬಳಿಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರದ್ಧಾ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶನಿವಾರ ಆಚರಿಸಲಾಯಿತು. ಸಮನ್ವಯ ಅಧಿಕಾರಿ ರೇಖಾ ಮಾತನಾಡಿ, ಸಂಸ್ಥೆಯು ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಸಮರ​‍್ಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಪ್ರಗತಿಯನ್ನು ಹೊಂದಬೇಕು ಎಂದರು. ನಂತರ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಎಸ್‌.ರಾಮಪ್ಪ ಮಾತನಾಡಿ, ಮಹಿಳೆಯರ ಮೇಲೆ ಆಗುವ ದೌರ್ಜನ್ ಹಿಂಸೆ ಅಂತಹ ಪ್ರಕರಣಗಳನ್ನು ತಡೆಯುವ ಮೂಲಕ ಸಮಾಜದಲ್ಲಿ ಸಮಾನತೆ ತರಲು ಮಹಿಳಾ ದಿನಾಚರಣೆ ಆಚರಿಸುತ್ತದೆ ಅಲ್ಲದೆ ಪ್ರಸಕ್ತ ವರ್ಷ ಮಹಿಳೆಯರು ಮತ್ತು ಹುಡುಗಿಯರಿಗೆ ಹಕ್ಕುಗಳು ಸಮಾನತೆ ಸಬಲೀಕರಣ ಘೋಷವಾಕ್ಯದೊಡೆ ಕಾರ್ಯಕ್ರಮ ಇಡೀ ದೇಶಾದ್ಯಂತ ಆಚರಿಸುತ್ತಿದ್ದು ಪ್ರತಿಯೊಬ್ಬರು ತಮ್ಮ ಹಕ್ಕುಗಳನ್ನು ಸಮರ​‍್ಕವಾಗಿ ಪಾಲಿಸಿ ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಬಳಸಬೇಕು ಎಂದರು ಪೂರ್ವದಲ್ಲಿ ಮಂಜಮ್ಮ ಜೋಗತಿಯ ಕುರಿತಾದ ವಿಡಿಯೋವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷ ನಜ್ಮಾ, ಸೇವಾ ಪ್ರತಿನಿಧಿ ಮಾಲಾ ಸೇರಿದಂತೆ ಮಹಿಳೆಯರು ಇತರರು ಇದ್ದರು.