ನವದೆಹಲಿ 27: ಎಲೆಕ್ಟ್ರಿಕ್ ವಾಹನಗಳು ಮತ್ತು ಚಾರ್ಜರ್ ಗಳ ಮೇಲಿನ ತೆರಿಗೆಯನ್ನು ಆಗಸ್ಟ್ 1ರಿಂದ ಕಡಿತಗೊಳಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಶನಿವಾರ ನಿರ್ಧರಿಸಿದೆ.
ಕೇಂದ್ರ ಹಣಕಾಸು ಮತ್ತು ಕಾಪರ್ೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಜಿಎಸ್ಟಿ ಮಂಡಳಿಯ 36ನೇ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ.
ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಜಿಎಸ್ ಟಿ ದರವನ್ನು ಶೇಕಡಾ 12ರಿಂದ 5ಕ್ಕೆ ಇಳಿಸಲು ಮಂಡಳಿ ಶಿಫಾರಸು ಮಾಡಿದೆ.
ಎಲೆಕ್ಟ್ರಿಕ್ ವಾಹನಗಳ ಚಾರ್ಜರ್ ಮತ್ತು ಚಾಜರ್ಿಂಗ್ ಕೇಂದ್ರಗಳ ಜಿಎಸ್ಟಿ ದರವನ್ನು ಶೇಕಡಾ 18ರಿಂದ ಶೇಕಡಾ 5ಕ್ಕೆ ಇಳಿಸಲು ನಿರ್ಧರಿಸಲಾಗಿದೆ.
ಸ್ಥಳೀಯ ಪ್ರಾಧಿಕಾರಗಳು ಬಾಡಿಗೆಗೆ ಪಡೆಯುವ ಎಲೆಕ್ಟ್ರಿಕ್ ಬಸ್ಗಳಿಗೆ (12 ಕ್ಕೂ ಹೆಚ್ಚು ಪ್ರಯಾಣಿಕರ ಸಾಗಿಸುವ ಸಾಮಥ್ರ್ಯ) ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ.
ಈ ಬದಲಾವಣೆ 2019, ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ತೆರಿಗೆ ಪಾವತಿಸುವ ಆಯ್ಕೆಯನ್ನು ಪಡೆಯಲು ಜಿಎಸ್ಪಿ ಸಿಎಂಪಿ -02 ಅಜರ್ಿಯಲ್ಲಿ ಮಾಹಿತಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜುಲೈ 31ರಿಂದ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್, ಕಂದಾಯ ಕಾರ್ಯದಶರ್ಿ ಅಜಯ್ ಭೂಷಣ್ ಪಾಂಡೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಏಪ್ರಿಲ್ 2019 ರಿಂದ ಜೂನ್ 2019 ರವರೆಗೆ (ಸಂಯೋಜನೆ ಯೋಜನೆಯಡಿ ತೆರಿಗೆ ಪಾವತಿದಾರರಿಂದ) ಫಾರ್ಮ ಜಿಎಸ್ಟಿ ಸಿಎಂಪಿ -08ರಲ್ಲಿ ಸ್ವಯಂ ಮೌಲ್ಯಮಾಪನ ತೆರಿಗೆಯ ವಿವರಗಳನ್ನು ಒಳಗೊಂಡಿರುವ ಹೇಳಿಕೆಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಜುಲೈ 31 ರಿಂದ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.