ಟಾಟಾ ಎಸ್. ಬೈಕ್ ಗಳ ನಡುವೆ ಭೀಕರ ರಸ್ತೆ ಅಪಘಾತ
ಜಮಖಂಡಿ : 1 : ತಾಲ್ಲೂಕಿನ ಆಲಗೂರ ಗ್ರಾಮದ ಬಳಿ ಕಾರು. ಟಾಟಾ ಎಸ್. ಬೈಕ್ ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿದ್ದು.ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ತಾಲ್ಲೂಕಿನ ಬಿ.ಕೆ. ಜಂಬಗಿ ಗ್ರಾಮದ ಆನಂದ ಬಾಡಗಿ (22) ಬೆಳಗಾವಿ ಜಿಲ್ಲೆಯ ಅರಬಾವಿ ನಿವಾಸಿ ಭೀಮಪ್ಪ ಗಂಟೆಣ್ಣವರ (42) ವಿಜಯಪೂರ ಜಿಲ್ಲೆಯ ಬೆನಕನಹಳ್ಳಿಯ ಮಹಾಂತೇಶ ಹೊನ್ನಾಕಟ್ಟೆ (33) ಹೀಗೆಟಾಟಾ ಎಸ್.ಕಾರು. ಬೈಕ್ ನಲ್ಲಿ ಇದ್ದ ತಲಾ ಒಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಜಮಖಂಡಿಯಿಂದ ವಿಜಯಪೂರಕ್ಕೆ ಹೊರಟ್ಟಿದ ಟಾಟಾ ಎಸ್. ವಿಜಯಪೂರದಿಂದ ಜಮಖಂಡಿ ಕಡೆಗೆ ಬರುತ್ತಿರುವ ಕಾರು ಡಿಕ್ಕಿ ಹೊಡೆದಿದ್ದು. ಟಾಟಾ ಎಸ್ ಹಿಂಬದಿಯಲ್ಲಿ ಇದ್ದ ಬೈಕ್ ಗಳು ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಎಸ್.ಪಿ.ಅಮರನಾಥ ರೆಡ್ಡಿ. ಡಿ.ಎಸ್.ಪಿ. ಶಾಂತವೀರ ಈ. ಸಿಪಿಐ ಮಲ್ಲಪ್ಪ ಮಡ್ಡಿ. ಗ್ರಾಮೀಣ ಠಾಣೆಯ ಪಿಎಸ್ ಐ ಗಂಗಾಧರ ಪೂಜಾರಿ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.ಪೋಟೋ : ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸ್ಥಳಕ್ಕೆ ಜಿಲ್ಲಾ ಎಸ್ ಪಿ. ಭೇಟಿ ನೀಡಿರುವುದು.