ಟಾಟಾ ಓಪನ್: ಪ್ರಜ್ಞೇಶ್ ಗೆ ನೇರ ಪ್ರವೇಶ

prajnesh

ನವದೆಹಲಿ, .25 - ಭಾರತದ ನಂಬರ್ 1 ಸಿಂಗಲ್ಸ್ ಆಟಗಾರ ಪ್ರಜ್ಷೇಶ್ ಗುಣೇಶ್ವರನ್ ಅವರು ಮೂರನೇ ಆವೃತ್ತಿಯ ಟಾಟಾ ಓಪನ್ ಟೆನಿಸ್ ಟೂರ್ನಿಗೆ ಪ್ರವೇಶ ಪಡೆದ ಮೊದಲ ಭಾರತದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಟಾಟಾ ಓಪನ್ ಫೆಬ್ರವರಿ 3 ರಿಂದ 9 ರವರೆಗೆ ಪುಣೆಯ ಮಹಲುಂಗಾ ಬಾಲೆವಾಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪೋಲೆಂಡ್ ಕಾಮಿಲ್ ಮಾಶ್ಜಾಕ್ ಅವರು ಟೂರ್ನಿಯಿಂದ ಹಿಂದೆ ಸರಿದ ನಂತರ ಪ್ರಜ್ನೇಶ್ ಮುಖ್ಯ ಡ್ರಾದಲ್ಲಿ ಸ್ಥಾನ ಪಡೆದರು. ವಿಶ್ವದ 123 ನೇ ಕ್ರಮಾಂಕದ ಪ್ರಜ್ನೇಶ್ ಇತ್ತೀಚೆಗೆ ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದರು. ಇದು ಅವರ ಸತತ ಐದನೇ ಗ್ರ್ಯಾನ್ ಸ್ಲ್ಯಾಮ್.

  ಮಹಾರಾಷ್ಟ್ರ ಸರ್ಕಾರದ ಸಹಯೋಗದೊಂದಿಗೆ ಮಹಾರಾಷ್ಟ್ರ ಲಾನ್ ಟೆನಿಸ್ ಅಸೋಸಿಯೇಷನ್ ​​(ಎಂಎಸ್ಎಲ್ಟಿಎ) ಆಯೋಜಿಸಲಿದ್ದ ಪಂದ್ಯಾವಳಿಯ ಮುಖ್ಯ ಡ್ರಾದಲ್ಲಿ ಪ್ರಜ್ನೇಶ್ ಪ್ರವೇಶಿಸಿದರು.

  ಪ್ರಜ್ಷೇಶ್ ಟೂರ್ನಿಯ ಕೊನೆಯ ಎರಡು ಆವೃತ್ತಿಗಳಲ್ಲಿ ಆಡಿದ್ದಾರೆ ಮತ್ತು ವರ್ಷ ಅವರು ತಮ್ಮ ಛಾಪು ಬಿಡಲು ಬಯಸುತ್ತಾರೆ. ಎಂಎಸ್ಎಲ್ಟಿಎ ಕಾರ್ಯದರ್ಶಿ ಸುಂದರ್ ಅಯ್ಯರ್, “ಟಾಟಾ ಓಪನ್ ಹಿಂದಿನ ಆವೃತ್ತಿಗಳು ಅನೇಕ ಭಾರತೀಯ ಆಟಗಾರರನ್ನು ಆಕರ್ಷಿಸಿದೆ. ಭಾರತೀಯ ಆಟಗಾರರು ದೇಶೀಯ ಪ್ರೇಕ್ಷಕರ ಮುಂದೆ ಆಡಲು ಇದು ಉತ್ತಮ ವೇದಿಕೆಯಾಗಿದೆ. ಪುಣೆ ಟೆನಿಸ್ ಬಗ್ಗೆ ತುಂಬಾ ಒಲವು ಹೊಂದಿದೆಎಂದಿದ್ದಾರೆ

  ವಿಶ್ವದ ಅಗ್ರ ಆಟಗಾರರು ಭಾರತದ ಪ್ರಧಾನ ಎಟಿಪಿ 250 ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬೆನೊಯೆಟ್ ಪಿಯರೆ, ಐವೊ ಕಾರ್ಲೋವಿಕ್ ಮತ್ತು ಫಿಲಿಪ್ ಕೋಲ್ಸ್ಕ್ರೈಬರ್ ಪ್ರಮುಖ ಆಕರ್ಷಣೆ. ಪಂದ್ಯಾವಳಿಯ ಅರ್ಹತಾ ಸುತ್ತನ್ನು ಫೆಬ್ರವರಿ 1 ಮತ್ತು 2 ರಂದು ಆಡಲಾಗುವುದು.