ಪಾರ್ಥನಹಳ್ಳಿ : ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ: ನಾಯಕ

ಸಂಬರಗಿ 27: ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಹೋಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಜು ನಾಯಕ ಹೇಳಿದರು. 

ಪಾರ್ಥನಹಳ್ಳಿ ಗ್ರಾಮದಲ್ಲಿ ರವಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಟ್ಯಾಂಕರ್ ನೀರಿಗೆ ಚಾಲನೆ ನೀಡಿದ ಅವರು ಈಗಾಗಲೆ ಬರಗಾಲ ಪೀಡಿತ ಹಲವಾರು ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ, ಪ್ರತಿ ಗ್ರಾಮಗಳಲ್ಲಿ ಜನರ ಸಹಕಾರ ಅತ್ಯಾವಶ್ಯಕವಿದ್ದು ನೀರಿನ ಸದುಪಯೋಗ ಪಡೆಯಬೇಕೆಂದು ಅವರು ವಿನಂತಿಸಿದರು.

ಗ್ರಾ. ಪಂ ಅಧ್ಯಕ್ಷ ದಸ್ತಗೀರ ಮೋಳೆ, ಸಿದರಾಯ ತೇಲಿ, ಅರ್ಣಪ್ಪಾ ಮುಜಗನ್ನವರ, ಪರಗೌಡಾ ಮಗದುಮ್ಮ, ಗೀತಾ ಮಡ್ಡಿ, ರಾಘವೇಂದ್ರ ಇವರು ಉಪಸ್ಥಿತರಿದ್ದರು.