ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಯಶಸ್ವಿಗೆ ಕೈಜೋಡಿಸಿ
ರಾಯಬಾಗ 18: ಪಟ್ಟಣದ ಮಹಾವೀರ ಭವನದಲ್ಲಿ ಫೆ.19 ರಂದು ನಡೆಯಲಿರುವ ರಾಯಬಾಗ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡು ಸಮ್ಮೇಳನ ಯಶಸ್ವಿಗೆ ಕೈಜೋಡಿಸಬೇಕೆಂದು ಸ್ವಾಗತ ಸಮಿತಿ ಅಧ್ಯಕ್ಷ, ತಹಶೀಲ್ದಾರ ಸುರೇಶ ಮುಂಜೆ ಕರೆ ನೀಡಿದರು. ಸೋಮವಾರ ಸಂಜೆ ತಹಶೀಲ್ದಾರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಬಾಗ ಪಟ್ಟಣದಲ್ಲಿ ಪ್ರಥಮ ಬಾರಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಮೊದಲ ಬಾರಿ ಮಹಿಳಾ ಸಾಹಿತಿಯೊಬ್ಬರು ಸಮ್ಮೇಳನ ಅಧ್ಯಕ್ಷತೆ ವಹಿಸಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದರು. ಫೆ.19 ರಂದು ಮುಂ.8 ಗಂಟೆಗೆ ಧ್ವಜಾರೋಹಣ ನೆರವೇರುವುದು, 9 ಗಂಟೆಗೆ ತಾಯಿ ಭುವನೇಶ್ವರಿ ಪೂಜೆ ನಂತರ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಅಬಾಜಿ ವೃತ್ತದ ಮಾರ್ಗವಾಗಿ ಮಹಾವೀರ ಭವನದ ವರೆಗೆ ಮೆರವಣಿಗೆ ನಡೆಯಲಿದೆ. 10.30ಕ್ಕೆ ವೇದಿಕೆ ಕಾರ್ಯಕ್ರಮ ನಂತರ ಮಧ್ಯಾಹ್ನ 1.30 ರಿಂದ 4 ಗಂಟೆವರೆಗೆ ಬಾಗೆಬನಿ, ಕಾವ್ಯ ಕನಿ, ಕವಿಬನ, ಬಾಗೆಬಾಗಿನ ವಿಷಯಗಳೊಂಡು ಕವಿಗೋಷ್ಠಿ ನಡೆಯಲಿದೆ. ಸಂಜೆ 4.40ಕ್ಕೆ ಸಮಾರೋಪ ಸಮಾರಂಭ ಜರುಗುವುದು. ನಂತರ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ.ಸಾ.ಪ.ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ, ಸಾಹಿತಿಗಳಾದ ಶಿವಾನಂದ ಬೆಳಕೂಡ, ಶಂಕರ ಕ್ಯಾಸ್ತಿ, ಟಿ.ಎಸ್.ವಂಟಗೂಡಿ, ಸುಖದೇವ ಕಾಂಬಳೆ ಅನೀಲ ಶೆಟ್ಟಿ ಇದ್ದರು.