ತಾಲೂಕು ಆಡಳಿತದಿಂದ ಯೋಗಿನಾರೇಯಣ ಯತೇಂದ್ರ (ಕೈವಾರ ತಾತಯ್ಯ) ಜಯಂತಿ ಆಚರಣೆ

Taluk administration celebrates Yoginareyana Yatendra (Kaiwara Tataiah) Jayanti

ತಾಲೂಕು ಆಡಳಿತದಿಂದ ಯೋಗಿನಾರೇಯಣ ಯತೇಂದ್ರ (ಕೈವಾರ ತಾತಯ್ಯ) ಜಯಂತಿ   ಆಚರಣೆ

ಹುಬ್ಬಳ್ಳಿ 14: ಯುವ ಪೀಳಿಗೆ ಮಹಾನಾಯಕರ ಜಯಂತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲರವರು  ಹೇಳಿದರು. ಇಂದು ತಾಲೂಕು ಆಡಳಿತಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಶ್ರೀ   ಯೋಗಿನಾರೇಯಣ ಯತೇಂದ್ರ (ಕೈವಾರ ತಾತಯ್ಯ)ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಜಯಂತಿಗೆ ಕರೆದುಕೊಂಡು ಬರುವ ಕೆಲಸ ಪೋಷಕರೂ ಮಾಡಬೇಕು. ಎಂದು ಹೇಳಿದರು.  ಈ ಸಂದರ್ಭದಲ್ಲಿ  ಯೋಗಿನಾರೇಯಣ ಯತೇಂದ್ರ (ಕೈವಾರ ತಾತಯ್ಯ)ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮಾಜದ ಹಿರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.  ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರಾದ ಜಿ. ವಿ.ಪಾಟೀಲ್, ಸಮಾಜದ ಮುಖಂಡರಾದ ,  ವೆಂಕಟೇಶ ಕಾ ಮುತ್ತಗಾರ, ಶಶಿಕಾಂತ  ಬಿಜವಾಡ, ಶೇಖಪ್ಪ ಸಾಹುಕಾರ, ಶಿವಾನಂದ ಮುಮ್ಮಿಕಟ್ಟಿ, ದುರ್ಗಮ್ಮ ಬಿಜವಾಡ,  ಲಕ್ಷ್ಮಿ.ವಿ.ಎಂ, ಲಕ್ಷಮ್ಮ ವಿವಿಧ ಇಲಾಖೆಗಳ ಅಧಿಕಾರಿಗಳು,   ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.