ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಲಾಪನ

Taluk Kannada Sahitya Parishad Alapana

ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಲಾಪನ 

ಶಿಗ್ಗಾವಿ 09  : ಭಾವೈಕ್ಯತೆಯ ಇತಿಹಾಸ ಸೃಷ್ಠಿಸಿದ ಸುಂದರ ಪಟ್ಟಣ ಶಿಗ್ಗಾವಿ. ಅರೆಮಲೆನಾಡಿನ ಗಡಿಅಂಚಿನ ಬಯಲು ಸೀಮೆಯ ಬೆಟ್ಟ ಗುಡ್ಡಗಳ ನಡುವೆ ಹಸಿರು ತೋಟಗಳಿಂದ ಕಂಗೋಳಿಸುತ್ತಿರುವ,ಸಂತ ಶಿಸುನಾಳ ಶರೀಪರು, ಬಾಡದ ಕನಕದಾಸರು,ಅರಟಾಳ ರುದ್ರಗೌಡರು ,ಹಿರೇಮಲ್ಲೂರ್ ಈಶ್ವರನ, ಶ್ರೀಮತಿಸುಧಾಮೂರ್ತಿ,ಮುಂತಾದವರು ಜಗತ್ ಪ್ರಸಿದ್ದ ಮಹನೀಯರುಗಳು  ಜನಿಸಿದ ಪುಣ್ಯಭೂಮಿ.  

    ನಾಲ್ಕನೇಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ಹಾವೇರಿ ಹಾಗೂ ಹುಬ್ಬಳ್ಳಿಗಳ ನಡುವೆ ಸದ್ದುಗದ್ದಲವಿಲ್ಲದೆ  ಮಾನವ ನಿರ್ಮಿತ ಹಾಗೂ ಪ್ರೇರಿತ ವ್ಯವಸ್ಥೆಗಳಿಂದ ವಂಚಿತವಾದ ಪಟ್ಟಣ ಶಿಗ್ಗಾವಿ, ಶ್ರೀಕಲಿಗ್ರಾಮ ಎಂದು ಶಾಸನಗಳಲ್ಲಿ ಅಸ್ತಿತ್ವವನ್ನು ಕಂಡುಕೊಂಡ ಈ ನಗರ ಕ್ರಮೇಣ ಶ್ರೀಕಲಿಗ್ರಾಮ,ಶಿಕ್ಕಲಿಗ್ರಾಮ, ಶಿಗ್ರಾಮ, ಶಿಗ್ಗಾಮ, ಶಿಗ್ಗಾಂವ, ಶಿಗ್ಗಾವಿ ಎಂದು ನಾಮಕರಣವಾಯಿತು.  

     ತಾಲೂಕಿನಲ್ಲಿ ​‍್ರ​‍್ರಥಮವಾಗಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟು ಹಾಕಿ  ಕನ್ನಡದ ಬಗ್ಗೆ ಈ ತಾಲೂಕಿನಲ್ಲಿ ಆಸಕ್ತಿ ಮೂಡಿಸಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟು ಹಾಕಿ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ಮಾಡಿದ ಕೀರ್ತಿ ಹಾಗೂ ಸುಮಾರು ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಿವೃತ್ತ ಪ್ರಾಚಾರ್ಯ ಮತ್ತು ಸಾಹಿತಿ ಬ.ಫ.ಯಲಿಗಾರ, ದಿವಂಗತ ಶಿಕ್ಷಣ ತಜ್ಞ ಲ್ಯಾಂಡಲಾರ್ಡ ಶಂಕರಗೌಡ ಪಾಟೀಲ ಮತ್ತು ಎಸ್‌.ಬಿ.ದೇಶಪಾಂಡೆ ಗುರುಗಳಿಗೆ ಸಲ್ಲುತ್ತದೆ. ನಂತರ ಶಿಕ್ಷಕ ಬಸವರಾಜ ಬಸರಿಕಟ್ಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ನಂತರ ಪ್ರೋ ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷರಾಗಿ ತಾಲೂಕ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಗೋಳಿಸಿದರು, ನಂತರ ಶಿಕ್ಷಕ ಎಸ್‌.ಎನ್‌.ಮುಗಳಿ ಅಧ್ಯಕ್ಷರಾಗಿ , ಪ್ರಸ್ತುತ ಶಿಕ್ಷಕ ನಾಗಪ್ಪ ಬೆಂತೂರ ಅಧ್ಯಕ್ಷರಾಗಿ  ತಾಲೂಕ 5 ನೇ ಸಾಹಿತ್ಯ ಸಮ್ಮೇಳನ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. 

ಭಾಕ್ಸ ಸುದ್ದಿ : ಶಿಗ್ಗಾವಿ ಪಟ್ಟಣದ ಎ.ಪಿ.ಎಂ.ಸಿಯ ಆವರಣದಲ್ಲಿ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದಾಗ ಸರ್ವಾದ್ಯಕ್ಷರಾಗಿ ದೂರದರ್ಶನ ನಿರ್ದೇಶಕ ಡಾ.ಮಹೇಶ.ಜೋಶಿ ನೇತೃತ್ವವಹಿಸಿದ್ದರು. 

      2010 ನೇ ಪ್ರಥಮ ಸಾಹಿತ್ಯ ಸಮ್ಮೇಳನ ಸರ್ವಾದ್ಯಕ್ಷರಾಗಿ ತಡಸ ಗ್ರಾಮದ ಸಾಹಿತಿ ಶೇಷಗೇರಿ ಮುತಾಲಿಕ  ದೇಸಾಯಿ, 2011-12 ರಲ್ಲಿ ಎರಡನೇಯ ಸಾಹಿತ್ಯ ಸಮ್ಮೇಳನ ಸರ್ವಾದ್ಯಕ್ಷರಾಗಿ ಶಿಗ್ಗಾವಿ ಪಟ್ಟಣದ ಸಾಹಿತಿ ಹಾಗೂ ಪ್ರಾಚಾರ್ಯರು ಬ.ಫ ಯಲಿಗಾರ, 2016 ರಲ್ಲಿ 3 ನೇ ಸಾಹಿತ್ಯ ಸಮ್ಮೇಳನ ಸರ್ವಾದ್ಯಕ್ಷರಾಗಿ ಅತ್ತಿಗೇರಿ ಗ್ರಾಮದ ಶಿಕ್ಷಕ, ಸಾಹಿತಿ ಹಾಗೂ ಶಿಸುನಾಳ ಶರೀಫಗಿರಿ ಟ್ರಸ್ಟನ ಧರ್ಮದರ್ಶಿ ಎಸ್‌.ಬಿ.ಅಂಗಡಿ, 2018 ರಲ್ಲಿ 4 ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹುಲಗೂರ ಗ್ರಾಮದ ಜಮಖಂಡಿ ಓಲೇಮಠದ ಶ್ರೀ ಮನಿಪ್ರ ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು, 2025 ರ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಪಟ್ಟಣದ ಮಗಳು ಹಾಗೂ ಬೆಳಗಾವಿಯ ಸೊಸೆ ಪ್ರಸ್ತುತ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ಆಯ್ಕೆಯಾಗಿರುವುದು ಮಹಿಳೆಯರಿಗೆ ಪ್ರಾಧ್ಯಾನತೆ ನೀಡಿದಂತಾಗಿದೆ. ರಾಮರಾಜ್ಯದ ಕನಸು ನನಸಾಗಿದೆ ಎಂದು ಹೇಳಬಹುದು. 

ಭಾಕ್ಸ ಸುದ್ದಿ : 7 ವರ್ಷಗಳ ನಂತರ ಶಿಗ್ಗಾವಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ  ಸಮ್ಮೇಳನ ನಡೆಯುತ್ತಿದೆ ಇದಕ್ಕೆ ಸರಕಾರದ ಯಾವುದೇ ಅನುಧಾನವಿಲ್ಲ, ಸಹೃದಯಿಗಳ ಧಾನ ಹಾಗೂ ಸಹಕಾರದಿಂದ  5 ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಮಾಡುತ್ತಿದ್ದಾರೆ.