ತಾಳಿಕೋಟಿ ಸಹಕಾರಿ ಬ್ಯಾಂಕ್, ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ
ತಾಳಿಕೋಟಿ 03 : ಪಟ್ಟಣದ ಪ್ರತಿಷ್ಠಿತ ತಾಳಿಕೋಟಿ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಶಿನಾಥ ಚಂದಪ್ಪ ಸಜ್ಜನ (ಬಿದರಕುಂದಿ) ಅಧ್ಯಕ್ಷರಾಗಿ ಹಾಗೂ ಚಿಂತಪ್ಪಗೌಡ ಸಾಹೇಬಗೌಡ ಯಾಳಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸೋಮವಾರ ಪಟ್ಟಣದ ಬ್ಯಾಂಕಿನ ಸಭಾಂಗಣದಲ್ಲಿ ಜರುಗಿದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಶಿನಾಥ ಚಂದಪ್ಪ ಸಜ್ಜನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿಂತಪ್ಪಗೌಡ ಸಾಹೇಬಗೌಡ ಯಾಳಗಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಚೇತನ ಭಾವಿಕಟ್ಟಿ ಘೋಷಿಸಿದರು. ಆಡಳಿತ ಮಂಡಳಿಗೆ ಆಯ್ಕೆಯಾದ 13 ನಿರ್ದೇಶಕರೆಲ್ಲರೂ ಸದರಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಚುನಾವಣಾ ಸಹಾಯಕರಾಗಿ ಮುಖ್ಯ ಶಿಕ್ಷಕ ಆರಿ್ಬ.ಧಮ್ಮೂರಮಠ ಬ್ಯಾಂಕಿನ ವ್ಯವಸ್ಥಾಪಕಿ ಶ್ರೀಮತಿ ಬಿ.ಕೆ.ಮಣೂರ ಕಾರ್ಯನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ನಿರ್ದೇಶಕರಾದ ದತ್ತು ಹೆಬಸೂರ, ಮುರಿಗೆಪ್ಪ ಸರಶೆಟ್ಟಿ, ಈಶ್ವರ್ಪ ಬಿಳೇಭಾವಿ,ಡಿ.ಕೆ.ಪಾಟೀಲ, ಅಮರಸಿಂಗ್ ಹಜೇರಿ( ಬಾಬು), ಸುರೇಶ ಪಾಟೀಲ, ಪ್ರಹ್ಲಾದಸಿಂಗ್ ಹಜೇರಿ, ಗಿರಿಜಾಬಾಯಿ ಬಸಯ್ಯ ಕೊಡಗಾನೂರ, ಶೈಲಾ ವಿಶ್ವನಾಥ ಬಡದಾಳಿ, ರಾಮಣ್ಣ ಕಟ್ಟಿಮನಿ ಸಂಜೀವಪ್ಪ ಬರದೇನಾಳ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಸದಸ್ಯತ್ವದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅಭಿನಂದನಾ ಸಭೆ: ಬ್ಯಾಂಕಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಕಾಶಿನಾಥ ಸಜ್ಜನ ಹಾಗೂ ಉಪಾಧ್ಯಕ್ಷ ಚಿಂತಪ್ಪಗೌಡ ಯಾಳಗಿ ಇವರನ್ನು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಮಾಜದ ಗಣ್ಯರು ಅಭಿನಂದಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ನೂತನ ಅಧ್ಯಕ್ಷ ಕಾಶಿನಾಥ್ ಸಜ್ಜನ ಮಾತನಾಡಿ ಎಲ್ಲ ನಿರ್ದೇಶಕರು ನಮ್ಮಿಬ್ಬರ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದಾರೆ ಅವರ ವಿಶ್ವಾಸಕ್ಕೆ ಚುತಿ ಬಾರದ ಹಾಗೆ ಬ್ಯಾಂಕಿನ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದರು.ಈ ವೇಳೆ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ (ಯಾಳಗಿ) ವಿವಿ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಗಣ್ಯರಾದ ಕಾಶಿನಾಥ ಮುರಾಳ,ಹಣಮಂತ್ರಾಯಗೌಡ ಬಾಗೇವಾಡಿ,ಎಸ್.ಎಂ.ಸಜ್ಜನ, ಎಚ್.ಎಸ್.ಪಾಟೀಲ, ಮಹಾದೇವಪ್ಪ ಕುಂಬಾರ,ಪ್ರಕಾಶ ಹಜೇರಿ,ಮಾನಸಿಂಗ್ ಕೊಕಟನೂರ, ಗವಿಸಂಗಯ್ಯ ಪಂಚಗಲ್, ಪ್ರಭು ಬಿಳೆಭಾವಿ,ಮುತ್ತು ಕಶಟ್ಟಿ, ಮಹಾಂತೇಶ ಮುರಾಳ,ಬಿ.ಎಸ್.ಇಸಾಂಪೂರ ಮತ್ತಿತರರು ಇದ್ದರು.