ಲೋಕದರ್ಶನ ವರದಿ
ಮುದಗಲ್ಲ 14: ಪಟ್ಟಣ ಸಮೀಪದ ತಲೇಖಾನ ಗ್ರಾಪಂ ತನ್ನ ವ್ಯಾಪ್ತಿ ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ವಿಫಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಾನುವಾರು ಕುಡಿಯುವ ನೀರಿನ ತೋಟಿ, ನೀರು ಸಂಗ್ರಹ ಗುಮ್ಮಿಗಳ ಸ್ವಚ್ಛತೆ, ಪ್ಲಾಟ್ ಫಾರಂ ಸ್ವಚ್ಛತೆ ಹಾಗೂ ವಿವಿಧ ಗ್ರಾಮ ಮತ್ತು ತಾಂಡಾಗಳ ಎಲ್ಲೊಂದರಲ್ಲಿ ಕೊಳಚೆ ನೀರು ಸಂಗ್ರಹವಾಗಿ ದುವರ್ಾಸನೆ ಹರಡುವುದಲ್ಲದೇ, ಸೋಳ್ಳೆಗಳ ಉತ್ಪತ್ತಿಗೆ ಕಾರಣವಾಗಿವೆ. ಕುಡಿಯುವ ನೀರಿನ ಸರಬರಾಜು ಪೈಪ್ಲೈನ್ಗಳು ದುರಸ್ಥಿಗೆ ಬಂದು ಏಲ್ಲೊಂದರಲ್ಲಿ ನೀರುಸೊರಿಕೆಯಾಗಿ ಜನರಿಗೆ ಕಲುಷಿತ ನೀರು ಪೂರೈಕೆಯಾಗುವುದುರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವಂತಾಗಿದೆ ಎಂದು ದೇಸಾಯಿ ಭೋಗಾಪೂರ ತಾಂಡಾ ನಿವಾಸಿಗಳು ಆರೋಪಿಸಿದ್ದಾರೆ. ಪಾಪಣ್ಣನ ತಾಂಡಾದಲ್ಲಿ ಜಾನುವಾರು ತೋಟ್ಟಿ ಸ್ವಚ್ಛತೆಗೋಳಿಸಿ ವರ್ಷಗತಿಸಿದೆ ಗ್ರಾಪಂ ಆಡಳಿತ ಇತ್ತ ಹೊರಳಿ ನೋಡಿಲ್ಲ, ನೀರಿನಲ್ಲಿ ಹುಳುಗಳು ಉತ್ಪತಿಯಾಗಿವೆ, ಧೂಳು, ಕಸ-ಕಡ್ಡಿಗಳು ಸಂಗ್ರಹವಾಗಿ ನೀರು ಕಲುಷಿತಗೊಂಡಿದಲ್ಲದೇ, ವಾಸನ ಬೀರಿದೆ. ಜಾನುವಾರುಗಳು ನೀರು ಕೂಡಿಯಲು ಹಿಂಜರಿಯುತ್ತಿವೆ. ಕಸ್ತೂರಿ ತಾಂಡಾದ ಬಾಪಣ್ಣನ ಮನೆ ಹತ್ತಿರು ವ್ಯರ್ಥನೀರು ಸಂಗ್ರಹವಾಗಿ ಹಸಿರು ಬಣ್ಣಕ್ಕೆ ತಿರುಗಿದ್ದು ತಾಂಡಾದ ತುಂಬ ವಾಸನೆ ಹರಡಿದೆ ಗ್ರಾಪಂ ವತಿಯಿಂದ ಮರಂ ಹಾಕಿ ನೀರು ಮುಂದೆ ಹೋಗುವಂತೆ ಮಾಡಬೇಕೆಂದು ಮನವಿಮಾಡಿ ಸಾಕಾಗಿದೆಎಂದು ಬಾಪಣ್ಣ ಮತ್ತು ತಿಪ್ಪಣ್ಣ ಆರೋಪಿಸಿದ್ದಾರೆ.
ದೇಸಾಯಿ ಭೋಗಾಪೂರ ಗ್ರಾಮದ ಸ.ಕಿ.ಪ್ರಾ. ಶಾಲೆಯ ಮುಂದಿನ ರಸ್ತೆಯಲ್ಲಿ ನೀರು ಹರಿದು ಪಾಚಿಗಟ್ಟಿದೆ. ಶಾಲೆಯಲ್ಲಿ ಮಕ್ಕಳು ಹೋಗು ಅದೇ ನೀರಿನಲ್ಲಿ ಓಡಾಡುವಂತಹ ಪರಸ್ಥಿತಿ ನಿಮರ್ಾಣವಾಗಿದೆ. ಮಾನಪ್ಪ ಕಬಾಡರ್ ಮನೆಯ ಹಿಂದೆ ಚರಂಡಿ ತುಂಬಿ ಓಣಿಯ ಜನರಿಗೆ ತೊಂದರೆಯಾಗಿದೆ. ಹಡಗಲಿಯಲ್ಲಿ ಬಟ್ಟೆ, ಪಾತ್ರೆ ತೊಳೆಯುವ, ಬಚ್ಚಲ ನೀರು ರಸ್ತೆಗೆ ಹರಿಯುತ್ತಿದೆ ಇದರಿಂದ ಗ್ರಾಮದಲ್ಲಿ ನೈರ್ಮಲ್ಯಹಾಳಾಗಿದೆ. ಹಡಗಲಿಯಿಂದ ಛತ್ತರ ರಾಮಜಿನಾಯಕ ತಾಂಡಾದ ವರೆಗೆ ಪಿಎಂಜಿಎಸ್ವಾಯ್ ಇಲಾಖೆ ಅಧಿಕಾರಿಗಳು ನಿಮರ್ಿಸುತ್ತಿರುವ ರಸ್ತೆ ಮಧ್ಯ ಕುಡಿಯುವ ನೀರಿನ ಪೈಪ್ಲೈನ್ ಸಿಕ್ಕಿಕೊಂಡಿದ್ದ ರಸ್ತೆ ಉದ್ದಕ್ಕೂ ಒಡೆದ ಪೈಪ್ನಲ್ಲಿಯೇ ಜನರು ನೀರು ಉಪಯೋಗಿಸುತ್ತಿದ್ದು ಕಲುಷಿತ ನೀರು ಸರಬರಾಜಾಗುತ್ತಿದೆ. ಸರಕಾರ ನೈರ್ಮಲ್ಯ ಕಾಪಾಡಲು 14ನೇ ಹಣಕಾಸು ಅನುದಾನ ಮತ್ತು ತೆರಿಗೆ ಸಂಗ್ರಹದಲ್ಲಿ ಅನುದಾನ ಮೀಸಲಿರಿಸಿದೆ ಆದರೆ ಗ್ರಾಪಂ ಆಡಳಿತ ಮಾತ್ರ ಸ್ವಚ್ಛತೆಗೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಬಂದಿಸಿದ ಅಧಿಕಾರಿಗಳು ಗ್ರಾಪಂಕಡೆ ಗಮನಹರಸಿ ಸಂಬಂದಿಸಿದವರಿಗೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಬೇಕು ಎಂದು ಇಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.