ಪ್ರಸಾದ ವಿತರಣೆ ಪೂರ್ವದಲ್ಲಿ ಪರಿಶೀಲನಾ ಕ್ರಮ ಕೈಗೊಳ್ಳಿ: ಪಿ. ಸುನೀಲ್ಕುಮಾರ್

ಕೊಪ್ಪಳ 27: ಕೊಪ್ಪಳ ಜಿಲ್ಲೆಯ ಸುಪ್ರಸಿದ್ಧ ಧಾಮರ್ಿಕ ಕ್ಷೇತ್ರವಾದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವವು 2019ರ ಜನವರಿ. 22 ರಿಂದ ನಡೆಯಲಿದ್ದು, ಪ್ರಸಾದ ವಿತರಣೆ ಪೂರ್ವದಲ್ಲಿ ಆಹಾರವನ್ನು ಪರಿಶೀಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.   

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ಒದಗಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.  ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಭದ್ರತೆ, ಕುಡಿಯುವ ನೀರು ಇತ್ಯಾದಿ ಕುರಿತು ಜಿಲ್ಲಾಡಳಿತವು ಸಹಕರಿಸಲಿದೆ.  ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತೆಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದ್ದು, ನಗರಸಭೆಯು ಕ್ರಮ ವಹಿಸಬೇಕು.  ನಗರದ ಎಲ್ಲಾ ರಸ್ತೆಗಳ ಸ್ವಚ್ಛತೆ, ಧೂಳು ನಿಯಂತ್ರಣಕ್ಕೆ ಪಯರ್ಾಯ ವ್ಯವಸ್ಥೆ ಮಾಡಿ.  ಅಲ್ಲದೇ ತಾತ್ಕಾಲಿಕವಾಗಿ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಕುಡಿಯುವ ನೀರು ಪೂರೈಸಬೇಕು.  ಭದ್ರತೆಯ ಹಿತದೃಷ್ಠಿಯಿಂದ ಪೊಲೀಸ್ ಇಲಾಖೆಯು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು ಮತ್ತು ವಾಹನಗಳ ಪಾಕರ್ಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು.  ಅಗ್ನಿ ಶಾಮಕ ದಳದವರು ಅಗ್ನಿ ಶಾಮಕ ವಾಹನವನ್ನು ಸ್ಥಳದಲ್ಲಿಯೇ ಕಾಯ್ದಿರಿಸಬೇಕು.  ಜೆಸ್ಕಾ ಇಲಾಖೆಯು ಸಮರ್ಪಕ ವಿದ್ಯುತ್ ಪೂರೈಸಬೇಕು.  ಗವಿಮಠದ ಮುಂದಿರುವ ಸಿಸಿ ರಸ್ತೆ ನಿಮರ್ಾಣ ಕಾಮಗಾರಿ ಯಾವ ಹಂತದಲ್ಲಿದೆ.  ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಲೋಕೊಪಯೋಗಿ ಇಲಾಖೆಯು ಕ್ರಮ ಕೈಗೊಳ್ಳಬೇಕು.  ಪ್ರಸಾದ ವಿತರಣೆ ಪೂರ್ವದಲ್ಲಿ ಆಹಾರವನ್ನು ಪರಿಶೀಲಿಸುವುದು ಅತ್ಯವಶ್ಯವಾದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಆಹಾರ ಸುರಕ್ಷಾಧಿಕಾರಿ ಹಾಗೂ ಗವಿಮಠದ ಅಡುಗೆ ಸಿಬ್ಬಂದಿಯೊಂದಿಗೆ ವಿಷೇಶ ಸಭೆ ನಡೆಸಿ, ಆಹಾರ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು.  ಪ್ರಸಾದ ವಿತರಣೆ ಪೂರ್ವದಲ್ಲಿ ಆಹಾರ ಸುಕ್ಷಾ ಅಧಿಕಾರಿಯಿಂದ ಪರಿಶೀಲನೆ ನಡೆದ ನಂತರವೇ ಪ್ರಸಾದ ವಿತರಿಸಬೇಕು.  ಆಟೋಪಕರಣಗಳ ಪರವಾನಿಗೆ ಪಡೆಯುವ ಮೊದಲು ಸಂಬಂಧಪಟ್ಟ ಇಲಾಖೆಯಿಂದ ಸಲ್ಲಿಸಲಾಗುವ ನಿರಾಕ್ಷೇಪಣಾ ಪತ್ರವನ್ನು ಯಾವುದೇ ವಿಳಂಬಕ್ಕೆ ಆಸಪದ ನೀಡದೇ ಸೂಕ್ತ ಸಮಯದಲ್ಲಿ ಸಲ್ಲಿಸಬೇಕು.  ಈ ಹಿಂದೆ ಆಟೋಪಕರಣದಲ್ಲಿ ಸಂಭವಿಸಿದ ದುರ್ಗಟನೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮವಹಿಸಿ.  ಪರವಾನಿಗೆ ಪಡೆಯದೇ ಪ್ರಾರಂಭಿಸಿದ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಬೇಕು.  ಜಾತ್ರೆಯಲ್ಲಿ ಹಾಕಲಾಗುವ ಎಲ್ಲಾ ಅಂಗಡಿಗಳಿಗೆ ನಂಬರಿಂಗ್ ಮಾಡಬೇಕು.  ಇದರಿಂದ ಯಾವುದೇ ಅವಘಡ ಸಂಭವಿಸಿದಲ್ಲಿ ತುತರ್ು ಸೇವೆಗಾಗಿ ಅನುಕೂಲವಾಗುವುದು.  ಜಾತ್ರೆಯಲ್ಲಿ ಹಾಕಲಾಗುವ ಅಂಗಡಿಗಳ ನಕ್ಷೆಯನ್ನು ತಯ್ಯಾರಿಸಿ, ಜಿಲ್ಲಾಧಿಕಾರಿ ಕಛೇರಿಗೆ, ಪೋಲೀಸ್ ವರಿಷ್ಠಾಧಿಕಾರಿ ಕಛೇರಿಗೆ, ನಗರಸಭೆಗೆ, ಅಗ್ನಿಶಾಮಕ ಕಛೇರಿಗೆ ಹಾಗೂ ಜೆಸ್ಕಾಂ ಕಛೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು.  

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಪ್ರೋಬೆಷನರಿ ಐಎಎಸ್ ಅಧಿಕಾರಿ ಅಕ್ಷಯ್ ಶೀಧರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ವಿಜಯಕುಮಾರ ಮೆಕ್ಕಳಕಿ, ಡಿ.ವೈ.ಎಸ್.ಪಿ ಸಂದೀಗವಾಡ, ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್, ಗವಿಮಠ ಸಂಸ್ಥಾನದಿಂದ ಬಸವರಾಜ ಬಳ್ಳೊಳ್ಳಿ ಹಾಗೂ ಶರಣಬಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.