ಕೊತಬಾಳ ಗ್ರಾಮದಲ್ಲಿ ವಾರದ ಸಂತೆ ಪ್ರಾರಂಭ ಸದುಪಯೋಗ ಪಡೆದುಕೊಳ್ಳಿ : ರಿಯಾಜ್ ಖತೀಬ
ರೋಣ 25: ಕೊತಬಾಳ ಗ್ರಾಮದಲ್ಲಿ ಪ್ರತಿ ರವಿವಾರ ಜರಗುವ ವಾರದ ಸಂತೆಯಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಕೃಷಿ ಉತ್ಪನ್ನಗಳ ಹಾಗೂ ತರಕಾರಿ ದಿನ ಬಳಕೆ ವಸ್ತುಗಳ ಮಾರಾಟ ಸಂತೆಯನ್ನು ಪ್ರಾರಂಭಿಸಲಾಗಿದ್ದು, ಗ್ರಾಮಸ್ಥರು ಹಾಗೂ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಸಂತೆಯ ಸದುಪಯೋಗ ಪಡೆದುಕೊಳ್ಳುವಂತೆ ಪ್ರಭಾರ ಸಹಾಯಕ ನಿರ್ದೇಶಕರಾದ ರಿಯಾಜ್ ಖತೀಬ ಅವರು ತಿಳಿಸಿದರು. ಕೊತಬಾಳ ಗ್ರಾಮ ಪಂಚಾಯತ,ಮತ್ತು ಗ್ರಾಮ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊಳೆಆಲೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊತಬಾಳ ಗ್ರಾಮದಲ್ಲಿ ರವಿವಾರದಂದು ವಾರದ ಸಂತೆಯನ್ನು ಪಂಚಾಯತ ಅಧ್ಯಕ್ಷರಾದ ಭೀಮಮ್ಮ ಪ. ಗುಳಗುಳಿ ,ಉಪಾಧ್ಯಕ್ಷರಾದ ಹನಮಂತ ಅಸೂಟಿ ಸರ್ವ ಸದಸ್ಯರು ಹಾಗೂ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸರೋಜಾ ನಲ್ಲೂರ, ಸದಸ್ಯರು ಹಾಗೂ ಗ್ರಾಮದ ಮುಖಂಡರಾದ ಸಿದ್ದಪ್ಪ ಯಾಳಗಿ, ಶೇಖಪ್ಪ ಕೋರಿ, ಎಸ್ ಮುದಗಲ್ಲ ,ಹನಮಂತ , ನಾಲ್ವಾಡದ , ಗೌಡ್ರ ಹಾಗೂ ಸಿಬ್ಬಂದಿ ವರ್ಗ, ಗುರುಹಿರಿಯರ ಉಪಸ್ಥಿತಿಯಲ್ಲಿ ಸಂತೆಯನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊಳೆಆಲೂರ ಮಾಜಿ ಸದಸ್ಯರಾದ ಹನಮಂತ ನಾಗರಾಜ ಇವರನ್ನು ಸನ್ಮಾನಿಸಲಾಯಿತು, ಸಂತೆಯಲ್ಲಿ ದಿನಬಳಕೆ ವಸ್ತುಗಳು ಹಾಗೂ ತರಕಾರಿ ವ್ಯಾಪಾರ ವಹಿವಾಟು ಬಲು ಜೋರಾಗಿ ನಡೆಯಿತು.