ಕೊಪ್ಪಳ 31: ಸಕರ್ಾರಿ ಆಸ್ಪತ್ರೆಗಳ ವೈದ್ಯರ ಕಾರ್ಯನಿರ್ವಹಿಸುವ ಅವಧಿಯನ್ನು ನಿಗದಿಪಡಿಸಿ, ಅಚ್ಚುಕಟ್ಟಾಗಿ ಕೆಲಸ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶಿವಾನಂದ ಎಸ್. ಪಾಟೀಲ್ ಅವರು ಸೂಚನೆ ನೀಡಿದರು.
ಕೊಪ್ಪಳ ಮತ್ತು ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿನ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಕರ್ಾರಿ ಆಸ್ಪತ್ರೆಗಳ ವೈದ್ಯರು ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಸಹ ನಡೆಸುತ್ತಿರುತ್ತಾರೆ. ಚಿಕಿತ್ಸೆಗಾಗಿ ಸಾರ್ವಜನಿಕರು ಸಕರ್ಾರಿ ಆಸ್ಪತ್ರೆಗಳಲ್ಲಿ ಬಂದಾಗ ಸಂಬಂಧಿಸಿದ ವೈದ್ಯರು ಇಲ್ಲದಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಕರ್ಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರ ಕಾರ್ಯನಿರ್ವಹಿಸುವ ಅವಧಿ ನಿಗದಿ ಪಡಿಸುವುದು ಅತ್ಯವಶ್ಯಕವಾಗಿದೆ. ಒಂದು ಜಿಲ್ಲೆಗೆ ಕನಿಷ್ಠ 10 ವೈದ್ಯರಿರಬೇಕು. ಪ್ರಸ್ತುತ ಇರುವ ವೈದ್ಯರು ಕನಿಷ್ಠ ಪಕ್ಷ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಯಾವ ವೈದ್ಯರು ಯಾವ ಸಮಯದಲ್ಲಿ ಸಿಗುವರು ಎಂಬುದರ ಕುರಿತು ಆಸ್ಪತ್ರೆಗಳಲ್ಲಿ ನಮೂದಿಸಬೇಕು. ವೈದ್ಯರು ಸಕರ್ಾರಿ ಸೇವೆಯನ್ನು ನಿಗದಿತ ಸಮಯದಲ್ಲಿ ಕೆಲಸವನ್ನು ನಿರ್ವಹಿಸಬೇಕು. ಆಯುಷ್ಮಾನ, ರಾಜೀವ್ ಆರೋಗ್ಯ ಭಾಗ್ಯ ಹಾಗೂ ಇತ್ಯಾದಿ ಆರೋಗ್ಯ ಯೋಜನೆಗಳನ್ನು "ಆರೋಗ್ಯ ಕನರ್ಾಟಕ" ಯೋಜನೆಯಡಿ ವಿಲೀನಗೊಳಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಯೋಜನೆಯಡಿ ಸಕರ್ಾರವು ಸಾಕಷ್ಟು ಹಣವನ್ನು ಕಾಯ್ದಿರಿಸಿದೆ. ಆಸ್ಪತ್ರೆಗಳ ಅಭಿವೃದ್ಧಿಗಾಗಿ ಹೈದರಾಬಾದ್ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮತ್ತು ಸ್ಥಳೀಯ ಶಾಸಕರುಗಳ ನಿಧಿಯಲ್ಲಿ ಅನುದಾನವನ್ನು ನೀಡುತ್ತಿದ್ದು, ಸಂಬಂಧಿಸಿದ ಆಸ್ಪತ್ರೆಗಳ ಅಧಿಕಾರಿಗಳು ಈ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಾ ಸಕರ್ಾರಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಐದು ವರ್ಷಗಳ ಹಿಂದೆ ನೀಡಿದ ಹಣ ಬಳಕೆಯೇ ಆಗಿಲ್ಲ. ಇದ್ದಕ್ಕೆ ಕಾರಣ ಏನು? ಕುಷ್ಟಗಿ ತಾಲೂಕಾ ಆಸ್ಪತ್ರೆಯ ಅಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜಿಲ್ಲೆಯ ಗಂಗಾವತಿ ತಾಲೂಕಿನ ಸಕರ್ಾರಿ ಆಸ್ಪತ್ರೆಯು ರಾಜ್ಯದಲ್ಲಿನ ಒಂದು ಆದರ್ಶ ಆಸ್ಪತ್ರೆಯಾಗಿದ್ದು, ಇದೇ ರೀತಿ ಎಲ್ಲಾ ಆಸ್ಪತ್ರೆಗಳು ಆಗಬೇಕು. ಕಾಪರ್ೋರೇಟ್ ಆಸ್ಪತ್ರೆಗಳಿಗಿಂತ ಉತ್ತಮ ಆಸ್ಪತ್ರೆಗಳಾಗಬೇಕು. ಆಸ್ಪತ್ರೆಗಳ ಸಣ್ಣ-ಪುಟ್ಟ ಸಮಸ್ಯೆಗಳಿದ್ದಲ್ಲಿ ಆಸ್ಪತ್ರೆಯ ಅನುದಾನದಲ್ಲಿ ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಸಕರ್ಾರಿ ಮೇಡಿಕಲ್ ಕಾಲೇಜುಗಳಿಂದ ಸಾರ್ವಜನಿಕರ ಸೇವೆಗೆ ಅನುಕೂಲವಾಗುತ್ತಿದೆ. ರಾಜ್ಯದ 146 ತಾಲೂಕ ಆಸ್ಪತ್ರೆಗಳನ್ನು ಮತ್ತು ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳನ್ನು ಎರಡನೇ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ವೈದ್ಯರ ಸಹಕಾರ ಮುಖ್ಯವಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶಿವಾನಂದ ಎಸ್. ಪಾಟೀಲ್ ಅವರು ಹೇಳಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದಶರ್ಿಯಾದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಬರುವ ರೋಗಿಗಳ ಪೈಕಿ ಹೃದಯಕ್ಕೆ ಸಂಬಂಧಿಸಿದ ಮತ್ತು ಇತರೆ ಗಂಭೀರ ಪ್ರಕರಣಗಳು ಬಂದಾಗ ನಮ್ಮಲ್ಲಿ ಚಿಕಿತ್ಸೆ ಲಭ್ಯವಿಲ್ಲ ಪಕ್ಕದ ಗದಗ ಅಥವಾ ಹುಬ್ಬಳ್ಳಿಗೆ ಹೋಗಿ ಎಂದು ಇಲ್ಲಿನ ವೈದ್ಯರಿಂದ ರೇಫರ್ ಮಾಡಲಾಗುತ್ತದೆ. ಇದ್ದರಿಂದ ಬಡ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ವೈದ್ಯರಿಗೆ ಸೇವಾ ಸಮಯವನ್ನು ನಿಗದಿ ಪಡಿಸಿರಿ. ತಾಲೂಕಿನ ಅಳವಂಡಿ ಹೋಬಳಿಯಲ್ಲಿ ಕೇವಲ ಎಬ್ಬರೆ ವೈದ್ಯರಿದ್ದು, ಇದರಿಂದ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಆದ್ದರಿಂದ ಜಿಲ್ಲೆಗೆ ಇನ್ನೂ ಹೆಚ್ಚು ವೈದ್ಯಕೀಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಪಂಕಜಕುಮಾರ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿದರ್ೇಶಕ ಡಿ.ಎಸ್. ರಮೇಶ, ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟರಾಜಾ, ಗದಗ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಸೇರಿದಂತೆ ಕೊಪ್ಪಳ ಮತ್ತು ಗದಗ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.