ಟೈಕ್ವಾಂಡೊ ಸ್ವಯಂ ರಕ್ಷಣೆ ಕಲೆ: ಜಗನ್ನಾಥಗೌಡ್ರ ಸಿದ್ದನಗೌಡ್ರ

ಧಾರವಾಡ 29: ಕೊರಿಯಾ ದೇಶದ ಮೂಲ ಕ್ರೀಡೆಯಾದ ಟೈಕ್ವಾಂಡೋ ಸ್ವಯಂ ರಕ್ಷಣೆ ಕಲೆಯಾಗಿದ್ದು, ನಮ್ಮ ರಾಷ್ಟ್ರದಲ್ಲಿ ಬೆಳೆಸುವ ಅಗತ್ಯವಿದೆ ಎಂದು ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ್ರ  ಸಿದ್ದನಗೌಡ್ರ ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಧಾರವಾಡದ ಬೇಂದ್ರೆ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯವು ಪದವಿಪೂರ್ವ ಶಿಕ್ಷಣ ಇಲಾಖೆ, ಧಾರವಾಡ ಜಿಲ್ಲಾ ಪ್ರಾಚಾರ್ಯರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ 2018-19ನೇ ಸಾಲಿನ ರಾಜ್ಯಮಟ್ಟದ  ಟೈಕ್ವಾಂಡೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. 

ಟೈಕ್ವಾಂಡೋ ಕ್ರೀಡೆ ಓಲಂಪಿಕ್ ಕ್ರೀಡಾಕೂಟದಲ್ಲಿ ಈಗಾಗಲೇ ಸೇರ್ಪಡೆಯಾಗಿದೆ. ಈ   ಕ್ರೀಡೆಯನ್ನು ನಮ್ಮ ರಾಷ್ಟ್ರದಲ್ಲಿ ಬೆಳೆಸುವ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ಸಾಂಪ್ರದಾಯಿಕ ಕ್ರೀಡೆಗಳ ಜೊತೆಗೆ ಟೈಕ್ವಾಂಡೊ ಕ್ರೀಡೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು. ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಜಗನ್ನಾಥಗೌಡ್ರ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೆಶಕ ಎಲ್.ಎಸ್. ಪಾಟೀಲ ವಹಿಸಿದ್ದರು.

ವೇದಿಕೆಯಲ್ಲಿ ಕುಂದಗೊಳ ಸಕರ್ಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಆಶಾ ಜಮಖಂಡಿ, ನಿವೃತ್ತ ಉಪನಿದರ್ೆಶಕ ಡಾ.ಸದಾನಂದ ಪಾಟೀಲ, ಪ್ರೊ. ಎಂ.ಎ. ಸಿದ್ಧಾಂತಿ, ಎಸ್.ಬಿ. ಕರೆಪ್ಪಗೌಡರ್, ಸಂದೀಪ ಬೂದಿಹಾಳ, ಸಹಾಯಕ ನಿದರ್ೆಶಕ ಸಿ.ಎಂ. ಗಣಾಚಾರಿ, ಪರಮೇಶ್ವರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೇಂದ್ರೆ ಪದವಿಪೂರ್ವ ಕಾಲೇಜ್ ಪ್ರಾಚಾರ್ಯ ಗುರುರಾಜ ಪೊಲೀಸ್ ಪಾಟೀಲ ಸ್ವಾಗತಿಸಿದರು. ಕ್ರೀಡಾ ಸಂಯೋಜನಾಧಿಕಾರಿ ಯು.ಎನ್. ಹಜಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಗೌಡ ಉಪ್ಪಿನ ಕಾರ್ಯಕ್ರಮ ನಿರೂಪಿಸಿದರು. ನರಸಿಂಹಮೂತರ್ಿ ವಂದಿಸಿದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯಲಿರುವ ಈ ರಾಜ್ಯಮಟ್ಟದ ಟೈಕ್ವಾಂಡೋ ಪಂದ್ಯಾವಳಿಯಲ್ಲಿ ಮಂಗಳೂರು, ಬೆಂಗಳೂರು, ದಾವಣಗೆರೆ ಮೈಸೂರು, ಹಾಸನ, ಬೆಳಗಾವಿ, ವಿಜಯಪುರ, ಧಾರವಾಡ  ಸೇರಿದಂತೆ ಸುಮಾರು 26 ಜಿಲ್ಲೆಗಳ 500 ಕ್ಕೂ ಹೆಚ್ಚು ಸ್ಪಧರ್ಾಳುಗಳು, ಮಾಸ್ಟರ್ಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

 ನಾಳೆ ಮಧ್ಯಾಹ್ನ ಅಂತಿಮ ಸ್ಪಧರ್ೆಗಳು ನಡೆಯಲಿದ್ದು, ನಂತರ ಜರುಗುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಗುತ್ತದೆ.