ಲೋಕದರ್ಶನ ವರದಿ
ರಾಯಬಾಗ 03: ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಇತ್ತೀಚೆಗೆ ಕುಡಚಿ ಪಟ್ಟಣದ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಪುರುಷರ ಏಕವಲಯ ಟೈಕ್ವಾಂಡೋಕ್ರೀಡೆಯ 54 ಕೆ.ಜಿ. ವಿಭಾಗದಲ್ಲಿ ಸ್ಥಳೀಯ ಕೆಎಲ್ಇ ಸಂಸ್ಥೆಯ ಮಲಗೌಡಾ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ ಪ್ರಥಮವರ್ಷದ ವಿದ್ಯಾಥರ್ಿ ಆಕಾಶ ಕಸರಡ್ಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಸಾಧನೆಗೈದ ವಿದ್ಯಾಥರ್ಿಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ರೂಪೇಶ ಪಾಟೀಲ ಹಾಗೂ ಸ್ಥಾನಿಕ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ. ಕಾಲೇಜಿನ ದೈಹಿಕ ನಿದರ್ೇಶಕ ಶಿವಾನಂದ ಖವಟಕೊಪ್ಪ ವಿದ್ಯಾಥರ್ಿಗೆ ತರಬೇತಿಯನ್ನು ನೀಡಿದ್ದಾರೆ.