ತಬಲಾ ಮಾಂತ್ರಿಕ ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಸಮಾರಂಭ

Tabla Magician Pt. Ravi Kudligi award ceremony


ತಬಲಾ ಮಾಂತ್ರಿಕ ಪಂ. ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಸಮಾರಂಭ 

ಕೂಡ್ಲಿಗಿ  16: ನಮ್ಮ ಭಾರತೀಯ ಕಲೆ, ಸಂಸ್ಕೃತಿ ವಿಶ್ವಕ್ಕೆ ಮಾದರಿಯಾದುದು, ಪಾಶ್ಚಾತ್ಯರೂ ನಮ್ಮ ಸಂಸ್ಕೃತಿಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಯಾದಗಿರಿಯ ಎಸ್‌.ಬಿ.ದೇಶಮುಖ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಶಿವರಾಜ ದೇಶಮುಖ ಅಭಿಪ್ರಾಯಪಟ್ಟರು.   

ದಿನಾಂಕ: 15-12-2024ರಂದು ಸಂಜೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಧಾರವಾಡದ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯು ಪಂ.ರವಿ ಕೂಡ್ಲಿಗಿ ಅವರ 10ನೇ ಪುಣ್ಯಸ್ಮರಣೆ ಅಂಗವಾಗಿ ಏರಿ​‍್ಡಸಿದ್ದ “ತಬಲಾ ಮಾಂತ್ರಿಕ ಪಂ.ರವಿ ಕೂಡ್ಲಿಗಿ ಪ್ರಶಸ್ತಿ ಹಾಗೂ ಸಂಗೀತೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ದೇಶಮುಖರು ಮಾತನಾಡುತ್ತ ಇಂದಿನ ಯುವ ಜನಾಂಗ ನಮ್ಮ ಭಾರತೀಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯತೆ ಇದೆ ಎಂದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಹಿಂದೂಸ್ಥಾನಿ ಗಾಯಕ ಡಾ.ಅಶೋಕ  ಹುಗ್ಗಣ್ಣವರ ತಮ್ಮ ಮತ್ತು ರವಿ ಕೂಡ್ಲಿಗಿ ಅವರ ಒಡನಾಟವನ್ನು ಸ್ಮರಿಸಿದರು.   

ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡುತ್ತ ಧಾರವಾಡದಲ್ಲಿರುವಷ್ಟು ಸಾಹಿತ್ಯ ಸಂಗೀತ, ಕಲೆಯ ವಾತಾವರಣ ಮತ್ತೊಂದು ನಗರದಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲ.  ಸಾಧಕರ ನಾಡಿನಲ್ಲಿಂದು ಪರಂಪರೆಯ ಬಹುದೊಡ್ಡ ಕುಡಿಗಳು ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಧಾರವಾಡದ ಸಂಗೀತ ಪರಂಪರೆಯಲ್ಲಿರುವ ವಿನಯಶೀಲಗುಣ ಬಹುಶ್ರೇಷ್ಠ ಗುಣವಾಗಿದೆ, ಇಂಥಹ ಸಾಧಕರ ಸಾಲಿನಲ್ಲಿರು ಪಂ.ರವಿ ಕೂಡ್ಲಗಿಯವರ ನೆನಪುಗಳನ್ನು ಕಟ್ಟಿಕೊಡುವ ಒಂದು ಕೃತಿ ರಚನೆಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.   

ಕವಿವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರು ಪಂ.ರವೀಂದ್ರ ಯಾವಗಲ್ ಅವರಿಗೆ ಪಂ.ರವಿ ಕೂಡ್ಲಿಗಿ ಪ್ರಶಸ್ತಿ ಪ್ರದಾನ ಮಾಡಿದರು.  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ.ರವೀಂದ್ರ ಯಾವಗಲ್ ಅವರು ರವಿ ಕೂಡ್ಲಿಗಿ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ನನಗೆ ಸಂದಿರುವುದು ಅತೀವ ಸಂತೋಷವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಪ್ರೌಢ ತಬಲಾವಾದಕರಾಗಿ ಹೊರ ಹೊಮ್ಮಿದ್ದ ರವಿ, ಗಂಭೀರ ಸ್ವರೂಪದ ಕಲಿಕೆ ಹೊಂದಿದ್ದರು. ಅವರಿಗೆ ಸಿಗಬೇಕಾಗಿದ್ದ ಪ್ರಶಸ್ತಿ ಪುರಸ್ಕಾರಗಳು ದೊರಕದೇ ಇರುವುದು ಖೇದದ ಸಂಗತಿಯಾಗಿದೆ ಎಂದರು.   

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿಲಕ್ಷ್ಮೀ ಕೂಡ್ಲಿಗಿ ವೇದಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ಸತೀಶ ಜಾಧವ ಮತ್ತು ಡಾ.ಬಸವರಾಜ ಕಲೆಗಾರ ಅವರನ್ನು ಸನ್ಮಾನಿಸಲಾಯಿತು.   

ರವಿ ಕೂಡ್ಲಗಿ ನಿರೂಪಿಸಿದರು. ಡಾ.ಎ.ಎಲ್‌.ದೇಸಾಯಿ ಸ್ವಾಗತಿಸಿದರು, ಭೀಮಾಶಂಕರ ಬಿದರನೂರ ಪರಿಚಯಿಸಿದರು. ವಿಜಯಲಕ್ಷ್ಮೀ ಸುಭಾಂಜಿ ವಂದಿಸಿದರು.   

ನಂತರ ಜರುಗಿದ ಸಂಗೀತೋತ್ಸವದಲ್ಲಿ ವಿದುಷಿ ಸುಜಾತಾ ಗುರವ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನದಲ್ಲಿ ರಾಗ ಬಿಹಾಗ ಮತ್ತು ವಚನ ಪ್ರಸ್ತುತ ಪಡಿಸಿದರು. ಪ್ರಶಸ್ತಿ ಪುರಸ್ಕೃತ ಪಂ.ರವೀಂದ್ರ ಯಾವಗಲ್‌ರು ತೀನತಾಲದಲ್ಲಿ ವಿಶೇಷವಾಗಿ ಪೇಶ್ಕಾರ, ಕಾಯ್ದಾ, ತುಕಡಾ, ಚಕ್ರದಾರ್‌ಗಳನ್ನು ತಬಲಾ ವಾದನದಲ್ಲಿ ಪ್ರಸ್ತುತ ಪಡಿಸಿದರು. ಡಾ.ಎ.ಎಲ್‌.ದೇಸಾಯಿ ರಚನೆಯ ಗೀತಗಾಯನವನ್ನು ಸ್ವರ ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಡಾ.ಶಕ್ತಿ ಪಾಟೀಲ ಅವರ ಸ್ವರ ಸಂಯೋಜನೆಯಲ್ಲಿ ಪ್ರಸ್ತುತ ಪಡಿಸಿದರು. ಸುಗಮ ಸಂಗೀತವನ್ನು ಡಾ.ಜ್ಯೋತಿಲಕ್ಷ್ಮೀ ಕೂಡ್ಲಿಗಿ ಶಿಷ್ಯವೃಂದ ಹಾಗೂ ಗದಗಿನ ಮಾಸ್ಟರ್ ವಿಹಾನಸಾಗರ ಮಳಲಿ ಪ್ರಸ್ತುತ ಪಡಿಸಿದರು. 

ಕಾರ್ಯಕ್ರಮದಲ್ಲಿ ಡಾ.ಶಾಂತಾರಾಮ ಹೆಗಡೆ, ಡಾ.ಬಾಳಣ್ಣ ಶೀಗೀಹಳ್ಳಿ, ಮಲ್ಲಿಕಾರ್ಜುನ ಚಿಕ್ಕಮಠ ಡಾ.ಶಕ್ತಿ ಪಾಟೀಲ, ಉಸ್ತಾದ್ ಶಫಿಕ್‌ಖಾನ್, ಡಾ.ರಾಜಶೇಖರ ಜಾಡರ, ವೀರಣ್ಣ ಪತ್ತಾರ, ವೇಣುಗೋಪಾಲ ಜೋಶಿ, ಪ್ರಕಾಶ ಬಾಳಿಕಾಯಿ, ರತ್ನಾ ಪಾಟೀಲ, ರಮೇಶ ನಾಡಗೇರ, ಅರವಿಂದ ದೇಶಮುಖ, ಡಾ.ಗುರುಬಸವ ಮುರಗಿ, ಡಾ.ಗೋಪಿಕೃಷ್ಣ, ಡಾ.ಪರಶುರಾಮ ಕಟ್ಟಿಸಂಗಾವಿ, ಸುರೇಖಾ ಸುರೇಶ, ಡಾ.ನಾಗಲಿಂಗ ಮುರಗಿ,