ಮುಂಬೈ, ನ 30-ಐತಿಹಾಸಿಕ ಪಾತ್ರಗಳಿಗೆ ವೈಭವಪೂರಿತ ರೂಪ ನೀಡುವ ಬಾಲಿವುಡ್ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರದಲ್ಲಿ ನಟಿಸುವುದು ಎಲ್ಲ ನಟನಟಿಯರ ಕನಸು. ಈಗ ಅಂತಹದೇ ಕನಸು ನಟಿ ತಾಪ್ಸಿ ಪನ್ನೂಗೆ ದೊರೆಕಿದೆ.
ಆರಂಭದಿಂದಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತಾಪ್ಸಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಹಿಂದಿ ಚಿತ್ರರಂಗದ ಮೊದಲ ಚಿತ್ರವಾದ ‘ಪಿಂಕ್ ’ ಹಾಗೂ ‘ಬದ್ಲಾ’ ಚಿತ್ರಗಳಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿ ಸೈ ಎನ್ನಿಸಿಕೊಂಡಿದ್ದರು.
ಈಗ ತಾಪ್ಸಿ ಪನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಸಂಸ್ಥೆಯಿಂದ ತಯಾರಾಗುತ್ತಿರುವ ‘ಸಿಯಾ ಜಿಯಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ತಾಪ್ಸಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲಿ.