ಸಿಂಥೆಟಿಕ್ ಟರ್ಫ ಕ್ರಿಕೆಟ್ ನೆಟ್ ಪ್ರಾಕ್ಟೀಸ ಪಿಚ್ ಉದ್ಘಾಟನೆ

ಗದಗ  27 :  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಸಭೆ ಗದಗ-ಬೆಟಗೇರಿ ಹಾಗೂ ನಿಮರ್ಿತಿ ಕೇಂದ್ರ, ಗದಗ ಇವರ ಸಹಯೋಗದಲ್ಲಿ ಗದಗ ನಗರದಲ್ಲಿ ಸಿಂಥೆಟಿಕ್ ಟರ್ಫ ಕ್ರಿಕೆಟ್ ನೆಟ್ ಪ್ರಾಕ್ಟೀಸ್ ಪಿಚ್ದ ಉದ್ಘಾಟನೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಪಟು ಸುನೀಲ ಜೋಶಿ ಉದ್ಘಾಟಿಸಿದರು.  

    ದೈಹಿಕ ಸದೃಢತೆ ಹಾಗೂ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು  ಕ್ರೀಡೆಗಳು ಸಹಕಾರಿಯಾಗುತ್ತವೆ  ಎಂದು ಸುನೀಲ ಜೋಶಿ  ಅವರು ತಿಳಿಸಿದರು.  

ಶಾಸಕ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.  ಸಮಾರಂಭದಲ್ಲಿ ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ,  ಸಂಸದರಾದ ಶಿವಕುಮಾರ ಉದಾಸಿ,  ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ,  ಜಿ.ಪಂ. ಸದಸ್ಯ ಸಿದ್ದು ಪಾಟೀಲ,   ಗದಗ ಬೆಟಗೇರಿ   ನಗರಸಭೆ ಅಧ್ಯಕ್ಷ ಸುರೇಶ ಚಂದ್ರಪ್ಪ ಕಟ್ಟಿಮನಿ, ನಗರಸಭೆ  ಸದಸ್ಯ  ಶೇಖ್,   ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ,  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ  ಚವ್ಹಾಣ ,  ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ  ಬಿ.ಬಿ. ವಿಶ್ವನಾಥ    ಗದಗ ಬೆಟಗೇರಿ  ನಗರಸಭೆ ಆಯುಕ್ತ ಮನ್ಸೂರ ಅಲಿ ಖಾನ್,   ನಿಮರ್ಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ವಿ. ಶಿರೋಳ,  ಕ್ರಿಕೆಟ್ ಮಂಡಳಿಯ  ಸದಸ್ಯರಾದ ಅಬ್ದುಲ್ ಹಕೀಮ್, ಕ್ರಿಕೆಟ್ ತರಬೇತುದಾರರು, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.