ಕೊಪ್ಪಳ 12: ಕೊಪ್ಪಳ ಅಪರ ಜಿಲ್ಲಾಧಿಕಾರಿಯಾಗಿ ಸೈಯದಾ ಅಯಿಷಾ ಅವರು (ಜೂನ್. 10 ರಂದು) ಸೋಮವಾರದಂದು ಅಧಿಕಾರ ವಹಿಸಿಕೊಂಡರು. ಪ್ರಭಾರ ಅಪರ ಜಿಲ್ಲಾಧಿಕಾರಿಯಾಗಿದ್ದ ಬಾಲಚಂದ್ರ ಅವರು ಕೊಪ್ಪಳ ನೂತನ ಅಪರ ಜಿಲ್ಲಾಧಿಕಾರಿಯಾಗಿರುವ ಸೈಯದಾ ಅಯಿಷಾರವರಿಗೆ ಅಧಿಕಾರ ಹಸ್ತಾಂತರಿಸಿದರು. ಸೈಯದಾ ಅಯಿಷಾ ಅವರು ಕೆಎಎಸ್ 2008ರ ಬ್ಯಾಜ್ನವರಾಗಿದ್ದು, ಈ ಹಿಂದೆ ಬೆಂಗಳೂರು ಕೆ.ಯು.ಐ.ಡಿ.ಎಫ್.ಸಿ. ಯ ಜನರಲ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಕೊಪ್ಪಳ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.