ಲೋಕದರ್ಶನ ವರದಿ
ಬೆಳಗಾವಿ 22: ಸಾಗರ ಬಿ.ಇಡಿ. ಮಹಾವಿದ್ಯಾಲಯದಲ್ಲಿ "ಸ್ವರಾಂಜಲಿ" ಸುಗಮಸಂಗೀತ ಕಾರ್ಯಕ್ರಮವನ್ನು ಅಪೂರ್ವ ಉತ್ಸಾಹದಿಂದ ಜರುಗಿತು. ಸಂಗೀತ ಪ್ರಾ. ವಿನಾಯಕ ಮೋರೆ ಇವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ಅನೇಕ ಭಾವಪೂರ್ಣ, ಸುಮಧುರ ಕನ್ನಡ, ಹಿಂದಿ, ಮರಾಠಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು.
ಪ್ರಾರಂಭದಲ್ಲಿ ಪ್ರಾಚಾರ್ಯರಾದ ಆರ್. ವ್ಹಿ. ಹಳಬ ಪ್ರಾಸ್ತಾವಿಕ ಮಾಡಿದರು. ಕಾರ್ಯಕ್ರಮದಲ್ಲಿ ವಿನಾಯಕ ಮೋರೆ, ತುಲನಾ ಗವಸ, ರವಿನಾ ದೆಸಾಈ, ಪ್ರಿತಮ ಪಾಟೀಲ, ಜ್ಯೊಶ್ನಾ ದೇಸಾಈ, ರೊಶಣೀ ಪಾಟೀಲ, ಕಲ್ಪನಾ ಬಿ., ಆರತಿ ಕಾಕತಕರ, ರಾಜಶ್ರೀ, ಮುಕ್ತಾ ಪಾಟೀಲ, ಸೋನಮ ಕಮಾತಿ, ಸ್ನೇಹಲ ಚೌಗಲೆ, ವೈದೆಹಿ ಜಾಧವ, ಮಧುಶ್ರೀ, ಭಾಗ್ಯಶ್ರೀ ದ ಳವಿ, ನಿಲಮ ಕೆ. ಇವರು ವಿವಿಧ ಭಾವ-ಭಕ್ತಿಗೀತೆ, ಭಜನೆ, ಚಲನಚಿತ್ರ ಗೀತೆಗಳನ್ನು ಉತ್ಕೃಷ್ಟವಾಗಿ ಪ್ರಸ್ತುತ ಪಡಿಸಿದರು. ವಿದ್ಯಾಥರ್ಿನಿ ಪ್ರತಿನಿಧಿ ಚೇತನಾರಾಣಿ ಹಾಗೂ ಪೂಜಾ ಸಾಲ್ಗುಡಿ ಸ್ವಾಗತಿಸಿದರು. ಸಾಂಸ್ಕ್ರುತಿಕ ಪ್ರತಿನಿಧಿ ತುಕಾರಾಮ ಸನದಿ ವಂದಿಸಿದರು.
***