ಗದಗ 11: ಗದಗ ಜಿಲ್ಲಾಡಳಿತ, ಜಿ.ಪಂ, ಯುವಜನ ಸಬಲೀಕರಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸ 125ನೇ ವಷರ್ಾಚರಣೆ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಜ.12 ರಂದು ಸಾಯಂಕಾಲ 4 ಗಂಟೆಗೆ ಗದುಗಿನ ಎ.ಪಿ.ಎಂ.ಸಿ ಆವರಣದಲ್ಲಿನ ಸ್ವಾಮಿ ವಿವೇಕಾನಂದ ಭವನದಲ್ಲಿ ಎರ್ಪಡಿಸಲಾಗಿದೆ.
ಈ ಹಿಂದೆ ದಿ. 11ರಂದು ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಹಾಗೂ ದಿ.19ರಂದು ಮಹಿಳಾ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿತ್ತು. ಇದೇ ದಿ.12ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಬೆೆಂಗಳೂರು ದಕ್ಷಿಣ ಪೋಲಿಸ ಮಹಾ ನಿದರ್ೇಶಕರಾದ ರವಿ ಚನ್ನಣ್ಣವರ ಹಾಗೂ ಗಾಂಧೀ ಭವನದ ಉಪಾಧ್ಯಕ್ಷರಾದ ಜಿ.ಬಿ. ಶಿವರಾಜು ಇವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿ ಯುವಜನತೆ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಸುಭದ್ರ ಸಮಾಜ ನಿಮರ್ಾಣಕ್ಕೆ ಪ್ರೇರಣೆಯಾಗುವ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಕಾರ್ಯಕ್ರಮವನ್ನು ರಾಮಕೃಷ್ಣ ವಿವೇಕಾನಂದ ಗದಗ-ವಿಜಯಪುರ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಉದ್ಘಾಟಿಸುವರು. ಗದುಗಿನ ತೋಂಟದಾರ್ಯ ಮಠದ ಜಗದ್ಗುರು ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್.ಕೆ.ಪಾಟೀಲ ಅವರು ವಹಿಸುವರು. ಗದಗ ಜಿ.ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಉಪಾಧ್ಯಕ್ಷರಾದ ಶಕುಂತಲಾ ಮೂಲಿಮನಿ, ಜಿಲ್ಲೆಯ ಸಂಸದರು, ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರುಗಳು, ಗದಗ ತಾ.ಪಂ. ಅಧ್ಯಕ್ಷ, ಉಪಾಧ್ಯಕರು, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ಗದಗ ಎ.ಪಿ.ಎಂ.ಸಿ. ಅಧ್ಯಕ್ಷರು, ಇತರೆ ಜನಪ್ರತಿನಿಧಿಗಳು, ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಸಮಿತಿ ಕಾಯರ್ಾಧ್ಯಕ್ಷ ಡಿ.ಆರ್.ಪಾಟೀಲ ಹಾಗೂ ಪದಾಧಿಕಾರಿಗಳು, ಸದಸ್ಯರು ವಿವಿಧ ಇಲಾಖೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಭಾಗವಹಿಸುವರು.
ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಚಿಕ್ಯಾಗೋ ಉಪನ್ಯಾಸ 125ನೇ ವಷರ್ಾಚರಣೆ ಅಂಗವಾಗಿ ಯುವಜನರಿಗಾಗಿ ವಿವೇಕಾನಂದರ ಕುರಿತಂತೆ ವಿವಿಧ ಸ್ಪಧರ್ೆಗಳನ್ನು ಎರ್ಪಡಿಸಲಾಗಿತ್ತು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಎರ್ಪಡಿಸಿದ ಈ ಸ್ಪಧರ್ೆಗಳಲ್ಲಿ ವಿಜೇತ ವಿಧ್ಯಾಥರ್ಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದು ಅವರಿಗೆ ಬಹುಮಾನ ವಿತರಣೆ ಮಾಡಲಾಗವುದು. ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಸಮಿತಿಯು ತಾಲೂಕು ಮತ್ತು ಗ್ರಾಮ ಪಂಚಾಯತಗಳ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸ್ವಾಮಿ ವಿವೇಕಾನಂದರ ಕುರಿತು ಅವರ ಚಿಕ್ಯಾಗೋ ಉಪನ್ಯಾಸದ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಕಾಲೇಜು, ಎನ್.ಎಸ್.ಎಸ್., ಎನ್.ಸಿ.ಸಿ ವಿಧ್ಯಾಥರ್ಿಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು ಸರ್ವರು ಆಸಕ್ತಿಯಿಂದ ಪಾಲ್ಗೊಂಡು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಪರವಾಗಿ ವಿನಂತಿಸಿದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಬಿ.ಬಿ.ವಿಶ್ವನಾಥ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.