ಸ್ವಾಮಿ ವಿವೇಕಾನಂದರು ಯುವ ಪೀಳಿಗೆಗೆ ಆದರ್ಶ ಸ್ಫೂರ್ತಿ: ದೊಡ್ಡಮನಿ

Swami Vivekananda is an ideal inspiration for the younger generation: Doddamani

ಸ್ವಾಮಿ ವಿವೇಕಾನಂದರು ಯುವ ಪೀಳಿಗೆಗೆ ಆದರ್ಶ ಸ್ಫೂರ್ತಿ: ದೊಡ್ಡಮನಿ 

ಧಾರವಾಡ 13:ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಪೀಳಿಗೆಗೆ ಸ್ಪೂರ್ತಿ ಮತ್ತು ಆದರ್ಶಪ್ರಾಯವಾಗಿದೆ ಎಂದು ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಸುರಾಮ ಎಫ್ ದೊಡ್ಡಮನಿ ಅವರು ಹೇಳಿದರು. 

ನೆಹರು ಯುವ ಕೇಂದ್ರ, ಧಾರವಾಡ. ಮೇರಾ ಯುವ ಭಾರತ, ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆದರ್ಶ ಮಹಿಳಾ ಸಾಂಸ್ಕೃತಿಕ ಕಲಾ ಸಂಘ,ಕರ್ನಾಟಕ ರಾಜ್ಯ ಯುವಕ ಸಂಘಗಳ ಒಕ್ಕೂಟ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿ.ವಿ.ರಾಮನ್ ಪದವಿ ಪೂರ್ವ ವಿನ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಯುವ ಜನತೆ ತಂದೆ-ತಾಯಿ ಗುರುಗಳನ್ನು ಗೌರವಿಸಬೇಕು. ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಂಡು ಸತತ ಪ್ರಯತ್ನದಿಂದ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬಾಳಬೇಕು ಹಾಗೂ ವಿವೇಕಾನಂದರು ತಮ್ಮ ಬದುಕಿನುದ್ದಕ್ಕೂ ದೇಶದ ಯುವಕರು ತಮಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿ ಬಾಳಿ ಎಂಬ ಸಂದೇಶ ನೀಡಿದ್ದಾರೆ ಎಂದರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಧಾರವಾಡ ಜರ್ನಲಿಸ್ಟ್‌ ಗಿಲ್ಡ್‌ ಅಧ್ಯಕ್ಷರಾದ ಡಾ. ಬಸವರಾಜ ಹೊಂಗಲ್ ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತ ದೇಶದ ಶ್ರೇಷ್ಠ ಆಧ್ಯಾತ್ಮೀಕ ಗುರು ಮತ್ತು ವಿಶ್ವ ಚಿಂತಕರು ಅವರು ದೇಶ ಕಟ್ಟಲು ಯುವಕರಿಗೆ ನೀಡಿದ ಪ್ರೇರಣೆ ಇಂದಿಗೂ ಮಾರ್ಗದರ್ಶನವಾಗಿದೆ ಹಾಗೂ ಯುವ ಜನರೇ ಸಮಾಜದ ಶಕ್ತಿ ಮತ್ತು ಉತ್ತಮ ನಾಯಕರಾಗುವ ಸಾಮರ್ಥ್ಯ ನಿಮ್ಮಲಿದೆ ಎಂದು ಹೇಳಿದರು. 

ಕಾಲೇಜಿ ಪ್ರಾಚಾರ್ಯರಾದ ಅನುರಾಧಾ ಆರಾಧ್ಯಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಆಲೋಚನೆಗಳು ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ ಇದಕ್ಕೆ ಸ್ವಾಮಿ ವಿವೇಕಾನಂದರ ವಿಚಾರಗಳೇ ಸಾಕ್ಷಿ. ಯುವ ಜನರಲ್ಲಿ ಇಚ್ಛಾಶಕ್ತಿ, ಸದೃಢ ಸಂಕಲ್ಪ, ಸಾಧಿಸುವ ಛಲ ಇದ್ದರೆ ಗುರಿ ಮುಟ್ಟುವುದು ಸುಲಭ ಎಂದರು.   

ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯದರ್ಶಿಯಾದ ಗೀರೀಶ ಹಾದಿಮನಿ ಹಾಗೂ ಆಡಳಿತ ಅಧಿಕಾರಯಾದ ದುಂಡಯ್ಯಾ ಹಿರೇಮಠ ಮತ್ತು ನೆಹರು ಯುವ ಕೇಂದ್ರದ ಶಿವಾಜಿ ಕಡೆಪ್ಪನವರ, ಶ್ರೀಧರ ಭಜಂತ್ರಿ ಕಾಲೇಜಿನ ಸಿಬ್ಬಂದಿಗಳು ಇದ್ದರು..ಇದೆ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇರಾದವರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿದರು.ಕಾರ್ಯಕ್ರಮದ ನಿರೂಪಣೆ ಅಂಬಿಕಾ ಇಂಡಿ, ವಂದರ್ನಾಪಣೆ ಬಸಮ್ಮ ಹಡಪದ ಸ್ವಾಗತ ಪ್ರೊ. ಮಾರುತಿ ಕದಂ.