ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರಹ ಯುವ ಸಮುದಾಯಕ್ಕೆ ಸದಾ ಸ್ಪೂರ್ತಿ : ಬಡಿಗೇರ್ ಜಿಲಾನ್‌ಸಾಬ್

Swami Vivekananda's life and writings are always an inspiration to the youth community: Badiger Jil

ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರಹ ಯುವ ಸಮುದಾಯಕ್ಕೆ ಸದಾ ಸ್ಪೂರ್ತಿ : ಬಡಿಗೇರ್ ಜಿಲಾನ್‌ಸಾಬ್ 

ಕಂಪ್ಲಿ 12: ವಿಶ್ವಕ್ಕೆ ಭಗವದ್ಗೀತೆಯ ಸಾರ, ಸನಾತನ ಭವ್ಯ ಪರಂಪರೆ, ಸಂಸ್ಕೃತಿ, ಭಾತೃತ್ವ, ಸಂಸ್ಕಾರ ತಿಳಿಸಿಕೊಟ್ಟ ವೀರ ಸನ್ಯಾಸಿ ಯಾರಾದರೂ ಇದ್ದರೆ ಅದು ಸ್ವಾಮಿ ವಿವೇಕಾನಂದರು ಎಂದು ಮುಖ್ಯಗುರು ಬಡಿಗೇರ್ ಜಿಲಾನ್‌ಸಾಬ್ ಹೇಳಿದರು. ಇಲ್ಲಿನ ಕಂಪ್ಲಿ-ಕೋಟೆಯಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕತೆಯ ಸಂದೇಶವನ್ನು ಪಾಶ್ಚಿಮಾತ್ಯ ದೇಶಗಳಲ್ಲಿಯೂ ಪಸರಿಸಿದರು.  ವಿವೇಕಾನಂದರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯೋಣ. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ದೈಹಿಕ ಸವಾಲುಗಳನ್ನು ಮೆಟ್ಟಿನಿಂತು ಕಿರಿಯೇ ವಯಸ್ಸಿನಲ್ಲಿ ವಿಶ್ವ ತಲೆಬಾಗುವಂತಹ ಆಧ್ಯಾತ್ಮಿಕ ಗುರುವಾಗಿ ಬೆಳೆದ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರಹ ಯುವ ಸಮುದಾಯಕ್ಕೆ ಸದಾ ಸ್ಪೂರ್ತಿ. ನಾಡಿನ ಸಮಸ್ತ ಯುವ ಸಮುದಾಯಕ್ಕೆ ರಾಷ್ಟ್ರೀಯ ಯುವದಿನದ ಶುಭಾಶಯಗಳು. ವಿವೇಕಾನಂದರನ್ನು ಆರಾಧನೆಗಷ್ಟೇ ಸೀಮಿತವಾಗಿಸದೆ ಅವರ ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ, ಆ ಮೂಲಕ ದಿವ್ಯ ಚೇತನವನ್ನು ಗೌರವಿಸೋಣ ಎಂದು ತಿಳಿಸಿದರು. ಜಯಂತಿ ಅಂಗವಾಗಿ ಹಮ್ಮಿಕೊಂಡ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಕೆ.ಶ್ವೇತಾ, ಉಮಾ, ಜೆ.ಅಕ್ಷತಾ, ವರ್ಷಾ ಮಂಜುಮದಾರ್, ಸುನಿತಾ, ಗೌಸಿಯ, ಮಣ್ಣೂರ ಲಕ್ಷ್ಮಿ, ಆರ್‌.ಕೆ ಮುಸ್ಕನ್ ಸೇರಿದಂತೆ ವಿದ್ಯರ್ಥಿಗಳು ಪಾಲ್ಗೊಂಡಿದ್ದರು. ಜ.002: ಇಲ್ಲಿನ ಕಂಪ್ಲಿ-ಕೋಟೆಯಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು.