ಕಾರವಾರ: ನಾಪತ್ತೆಯಾಗಿದ್ದ ಮೀನುಗಾರಿಕಾ ದೋಣಿ ಸುವರ್ಣ ತ್ರಿಭುಜ್ ಮಹಾರಾಷ್ಟ್ರದ ಮಾಲವಾಣ ಬಳಿ ಸಮುದ್ರದಾಳದಲ್ಲಿ ಪತ್ತೆ ಹಚ್ಚಿದ ನೌಕಾಪಡೆ

ಕಾರವಾರ 8: ನಿಗೂಢವಾಗಿ ನಾಪತ್ತೆಯಾಗಿದ್ದ ಮೀನುಗಾರಿಕಾ ಬೋಟ್ ಸುವರ್ಣ ತ್ರಿಭುಜ್ನ್ನು ಮಹಾರಾಷ್ಟ್ರದ ಮಾಲವಾಣ ಕರಾವಳಿಯಲ್ಲಿ ಸುಮಾರು 137 ದಿನಗಳ ನಂತರ ಕೊನೆಗೂ ಭಾರತೀಯ ನೌಕಾಪಡೆಯು ಪತ್ತೆ ಹಚ್ಚಿದೆ.

ಭಾರತೀಯ ನೌಕಾಪಡೆಯ ಸಾರ್ವಜನಿಕ ಸಂಪಕರ್ಾಧಿಕಾರಿಯೊಬ್ಬರು ಈ ಸಂಬಂಧ   ಟ್ವಿಟ್ ಮಾಡಿದೆ. ಭಾರತೀಯ ನೌಕಾಪಡೆಗೆ ಸೇರಿದ ಐಎನ್ಎಸ್ ನಿರೀಕ್ಷಕ್ ನೌಕೆ  ನಾಪತ್ತೆಯಾದ ಸುರ್ವರ್ಣ ತ್ರಿಭುಜ್ನ್ನು ಪತ್ತೆ ಹಚ್ಚಿದೆ. ಮಹಾರಾಷ್ಟ್ರದ ಮಾಲವಾಣ ಕರಾವಳಿಯಿಂದ  33 ನಾಟಿಕಲ್ ಮೈಲ್ ದೂರದಲ್ಲಿ ಸುಮಾರು 60 ಮೀಟರ್ ಸಮುದ್ರದಾಳದಲ್ಲಿ ನೌಕಾದಳದ ಮುಳುಗು ತಜ್ಞರು ಪತ್ತೆ ಹಚ್ಚಿದ್ದಾರೆ. ಸಮುದ್ರಾದಳದಲ್ಲಿರುವ ಬೋಟ್ ಐಎನ್ಎಸ್ ತ್ರಿಭುಜ್ದೆಂದು ಮುಳುಗುತಜ್ಞರು ಖಚಿತಪಡಿಸಿದ್ದಾರೆ. 

ನೌಕಾಪಡೆಗೆ ಸೇರಿದ ಅತ್ಯಾಧುನಿಕ ತಂತ್ರಜ್ಞಾನದ ನೌಕೆಯನ್ನು ಸಮುದ್ರಾಳದ ಅವಶೇಷಗಳನ್ನು ಪತ್ತೆ ಹಚ್ಚಿದೆ. ನೌಕೆಯಲ್ಲಿನ ಸೈಡ್ ಸ್ಕ್ಯಾನ್  ಸೋನಾರ  ಸಿಸ್ಟಂ ನಿಂದ ಸಮುದ್ರದಾಳದಲ್ಲಿ ಬೋಟ್ ಅವಶೇಷಗಳಿರುವುದನ್ನು ಮೇ.1 ರಂದು ಪತ್ತೆ ಮಾಡಿತು. ನಂತರ ಮುಳುಗು ತಜ್ಞರು ಆಳ ಸಮುದ್ರದಲ್ಲಿ ಮುಳುಗಿ ಬೋಟ್ನ ಕೆಲ ಅವಶೇಷಗಳನ್ನು ತಂದರು. 23 ಮೀಟರ್ ಉದ್ದ ಸೈಡ್ ಸ್ಕ್ಯಾನ್ ಸೋನಾರ್ ಎಂಬ ಯಂತ್ರ ಸಮುದ್ರದಾಳದ ಅವೇಶೇಷಗಳ ಬಗ್ಗೆ ಖಚಿತ ಮಾಹಿತಿ ನೀಡಿತ್ತು. 

ಸುವರ್ಣ ತ್ರಿಭುಜ್ :

ಸುವರ್ಣ ತ್ರಿಭುಜ್ ಎಂಬ ಮೀನುಗಾರಿಕಾ ಹಡಗು ಸಹ 23 ಮೀಟರ್ ಉದ್ದ, 5.7 ಮೀಟರ್ ಅಗಲ ಹಾಗೂ 3.4 ಮೀಟರ್ ಎತ್ತರವಿತ್ತು. ಕೆಲ ಮೂಲಗಳ ಪ್ರಕಾರ ಮೀನುಗಾರಿಕಾ ಬೋಟ್ ತುಂಡಾಗಿದೆ. ಅದನ್ನು ಸಮುದ್ರದಾಳದಿಂದ ಮೇಲುತ್ತುವುದು ಸಹ ಸಾಹಸದ ಕೆಲಸವಾಗಿದೆ. ಅದರಲ್ಲಿದ್ದ ಮೀನುಗಾರರು ಏನಾದರು ಎಂಬ ಮಾಹಿತಿ ಮಾತ್ರ ಈತನಕ ಖಚಿತವಾಗಿ ತಿಳಿದಿಲ್ಲ.

ಉಡುಪಿಯ ಮೀನುಗಾರಿಕಾ ಬಂದರಿನಿಂದ ಕಳೆದ ವರ್ಷದ  ಡಿಸೆಂಬರ್ 13 ರಂದು ಸುವರ್ಣ ತ್ರಿಭುಜ್ ಮೀನುಗಾರಿಕೆಗೆ ತೆರಳಿತ್ತು. ಡಿ.15 ರಂದು (2018) ಮೀನುಗಾರಿಕಾ ಬೋಟ್ ಸಂಪರ್ಕ ಕಳೆದುಕೊಂಡಿತ್ತು.   ಅದರಲ್ಲಿ ಉತ್ತರಕನ್ನಡ ಜಿಲ್ಲೆಯ  ಐವರು ಮೀನುಗಾರರು ಇದ್ದರು. ಕುಮಟಾ ಹಾಗೂ ಮಾದನಗೇರಿಯ  ಲಕ್ಷ್ಮಣ, ರವಿ, ಸತೀಶ, ಹರೀಶ, ರಮೇಶ ಹಾಗೂ ಉಡುಪಿಯ ಮಲ್ಪೆ ಮೂಲದ  ಚಂದ್ರಶೇಖರ ಮತ್ತು ದಾಮೋದರ್ ಸೇರಿದಂತೆ ಒಟ್ಟು ಏಳು ಜನ ಮೀನುಗಾರರು  ದುರಂತಕ್ಕೀಡಾದ  ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟ್ನಲ್ಲಿದ್ದರು. 

ಈ ಬೊಟ್ನಲ್ಲಿದ್ದ ಎಲ್ಲಾ ಏಳು ಮೀನುಗಾರರು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಆದರೆ ಭಾರತೀಯ ನೌಕಾಪಡೆ ಅವರ ಸಾವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೀನುಗಾರರ ಪತ್ತೆ ಮಾಡುಂತೆ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ಲೋಕಸಭಾ ಚುನಾವಣೆಗೂ ಮುನ್ನ ನಡೆದಿತ್ತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಲ್ಪೆಯಲ್ಲಿ ಸುವರ್ಣ ತ್ರಿಭುಜದಿಂದ ಕಾಣೆಯಾದ ಮೀನುಗಾರರ ಮನೆಗೆ ಭೇಟಿ ನೀಡಿದ್ದರು. ಅಲ್ಲದೇ ರಾಜ್ಯ ಸಕರ್ಾರದ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಕಳೆದ ಜನೇವರಿಯಲ್ಲಿ ಸುವರ್ಣ ತ್ರಿಭುಜದಿಂದ ಕಾಣೆಯಾದ  ಮೀನುಗಾರರ ಕುಟುಂಬದವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದರಲ್ಲದೇ , ಕುಟುಂಬ ನಿರ್ವಹಣೆಗೆ ಸಕರ್ಾರದಿಂದ ತಲಾ 1 ಲಕ್ಷ ರೂ.ನಂತೆ 7 ಕುಟುಂಬದವರಿಗೂ ಪರಿಹಾರ ನೀಡಲಾಗಿತ್ತು.

ಬೊಟ್ ತಮ್ಮದೇ ಎಂದು ಖಚಿತ ಪಡಿಸಿದರು:

ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಮತ್ತು ಕಾಣೆಯಾದ ಮೀನುಗಾರರ ಕುಟುಂಬದ ಇಬ್ಬರು ಹಾಗೂ ಮಲ್ಪೆಯ ಮೀನುಗಾರರ ಮುಖಂಡರು ಮಹಾರಾಷ್ಟ್ರದ ಮಾಲವಾಣಕ್ಕೆ ಗುರುವಾರ ಭೇಟಿ ನೀಡಿ ಶುಕ್ರವಾರ ಉಡುಪಿಗೆ ಮರಳಿದ್ದಾರೆ. ಮಾಲವಾಣಕ್ಕೆ ಭೇಟಿ ನೀಡಿದ ನಿಯೋಗದಲ್ಲಿದ್ದವರು ನೌಕಾಪಡೆಗೆ ಸಿಕ್ಕ ಬೋಟ್ನ ಅವಶೇಷಗಳು ಮೀನುಗಾರಿಕಾ ದೋಣಿ ಸುವರ್ಣ ತ್ರಿಭುಜ್ದ್ದೇ ಎಂದು ಖಚಿತಪಡಿಸಿದ್ದಾರೆ.