ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಸುವರ್ಣ ಸೌಧ ಚಲೋ: ಕೊಲಂಬೊ ಸಮುದಾಯಗಳಿಂದ ಬೃಹತ ಪ್ರತಿಭಟನೆ

Suvarna Soudha Chalo against unscientific reservation classification of Scheduled Castes: Massive p

ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಸುವರ್ಣ ಸೌಧ ಚಲೋ:  ಕೊಲಂಬೊ ಸಮುದಾಯಗಳಿಂದ ಬೃಹತ ಪ್ರತಿಭಟನೆ

ಬೆಳಗಾವಿ 19: ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳ ಮಹಾ ಒಕ್ಕೂಟದಿಂದ 2011 ರ ಜನಗಣಿತ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಂಗಡನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕಣ, ವಿರೋಧಿಸಿ ಬೆಳಗಾವಿ ಸುವರ್ಣಸೌಧದ ಎದುರಿಗೆ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. 2011 ರ ಜನಗಣತಿ, ದತ್ತಾಂಶದ ಮೇಲೆ ಒಳಮೀಸಲಾತಿ ವರ್ಗೀಕರಣ ಮಾಡಬಾರದು. ಪ್ರಸ್ತುತವಿರುವ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಸರಿಯಾಗಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯ ಓದ್ಯೋಗಿಕ ಸಮೀಕ್ಷೆ ಮಾಡಿ ಪರಿಶಿಷ್ಟ ಜಾತಿಯ ಇತರೆ ಸಮುದಾಯಗಳಿಗಿಂತ  ಹೆಚ್ಚಿನ ಮೀಸಲಾತಿಯ ಪ್ರಮಾಣವನ್ನು  ಕೊಲಂಬೊ ಸಮುದಾಯಕ್ಕೆ ನೀಡಬೇಕು. ಆಯೋಗ ಒಂದೆಡೆ ಕುಳಿತು ವರದಿ ಸಿದ್ಧಪಡಿಸದೆ ಪರಿಶಿಷ್ಟರ ತಾಂಡಾಗಳಿಗೆ, ನಗರಗಳಿಗೆ ಗ್ರಾಮಗಳಿಗೆ ಬೇಟಿ ನೀಡಿ ವಾಸ್ತವಿಕವಾಗಿ ಜನಾಂಗದ, ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಬೇಕು.  ಸರ್ಕಾರಗಳು ಈ ಸಮುದಾಯಗಳನ್ನು  ಕೇವಲ ಮತ ಬ್ಯಾಂಕಗಾಗಿ ಮಾತ್ರ ಬಳಕೆ ಮಾಡಿಕೊಂಡು   ಸಾಮಾಜಿಕ ಸೌಲಭ್ಯಗಳಿಂದ ವಂಚಿತಮಾಡುತ್ತಿವೆ. ಒಳಮೀಸಲಾತಿ ವಿಚಾರದಲ್ಲಿ  ಈ ಹಿಂದಿನ  ಸರ್ಕಾರಕ್ಕೆ ಪಾಠ ಕಲಿಸಿದ್ದೇವೆ. ರಾಜ್ಯ ಸರ್ಕಾರ ಇನ್ನೊಬ್ಬರ ಓಲೈಕೆಗಾಗಿ ತರಾತುರಿಯಲ್ಲಿ ಸರಿಯಾದ ಸಮೀಕ್ಷೆ ಇಲ್ಲದೆ ಒಳಮೀಸಲಾತಿ ಜಾರಿಗೆ ಮಾಡಿದರೆ ಈ ಸಮುದಾಯ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಲ್ಲದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಯುತ್ತರ ಕೊಡುತ್ತದೆ  ಎಂದು ಮಾತನಾಡಿ  ಆಕ್ರೋಶ ವ್ಯಕ್ತಪಡಿಸಿದ ಹೋರಾಟದ ಮುಖಂಡರಾದ ರವಿಕಾಂತ ಅಂಗಡಿ , ವೈ. ಕೋಟ್ರೇಶ, ರಾಮಚಂದ್ರ, ಚಂದ್ರಕಾಂತ್ ಚವ್ಹಾಣ, ಮಂಜುನಾಥ ಹಿರೇಮನಿ, ಸುಶೀಲಮ್ಮ, ಪಾಂಡು ಚವ್ಹಾಣ, ಸುನೀಲ ದೋತ್ರೆ, ಮೋಹನರಾಜ ಭಜಂತ್ರಿ, ಸುನಂದಾ, ಸುಮಂಗಲಾ ರವರು ಮುಖ್ಯಮಂತ್ರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿ  ಪ್ರತಿಭಟನೆಯ ಸಾನಿಧ್ಯ ವಹಿಸಿದ್ದ   ಲಿಂಗಸೂರಿನ ಸಿದ್ದಲಿಂಗ ಮಹಾಸ್ವಾಮಿಗಳು, ಬಿಜಾಪೂರ ಬಂಜಾರ ಪೀಠದ ಗೋಪಾಲ  ಮಹಾರಾಜರು  ಸಂಡೂರಿನ  ತಿಪ್ಪೇಸ್ವಾಮಿ, ಸ್ವಾಮೀಜಿಗಳ ಅಪ್ಪಣೆ ಮೇರೆಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಸಾವಿರಾರು ಪ್ರತಿಭಟನಾಕಾರರು ರಸ್ತೆಗೆ ಇಳಿದು ಪ್ರತಿಭಟಿಸಿದರು.   ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ,  ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ.ಮಹಾದೇವಪ್ಪ ಅವರು, ಪರಿಶಿಷ್ಟ ಜಾತಿಯಲ್ಲಿರುವ ಯಾವುದೇ ಸಮುದಾಯಕ್ಕೂ ಅನ್ಯಾಯ ಆಗುವದಿಲ್ಲ. ರಾಜ್ಯ ಸರ್ಕಾರ ನಿಮ್ಮ ಹಿತವನ್ನು ಕಾಯುತ್ತದೆ. ವೈಜ್ಞಾನಿಕವಾಗಿ, ವಾಸ್ತವಿಕ ದತ್ತಾಂಶಗಳನ್ನು ಸಂಗ್ರಹಿಸಿ ಒಳಮೀಸಲಾತಿ ಕುರಿತಾಗಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿ ತಿಳಿಸಿದರು.  ಉಪಸಭಾಪತಿಗಳಾದ ಮಾನ್ಯ ರುದ್ರ​‍್ಪ ಲಮಾಣಿ ಅವರು ಮಾತನಾಡಿ, ಕೂಡಲೇ ಒಂದು ನಿಯೋಗ ಮಾನ್ಯ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ನಮ್ಮ ಸಮುದಾಯಗಳ ಪ್ರಸ್ತುತ ವಿರುವ ದತ್ತಾಂಶಗಳನ್ನು ನಿಖರವಾಗಿ ಸಂಗ್ರಹಿಸುವಂತೆ ಆಗ್ರಹಿಸುವುದಾಗಿ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಭಟನೆ ನಿರತರಿಗೆ ಬೆಂಬಲ ಸೂಚಿಸಿ ಅವೈಜ್ಞಾನಿಕ ಒಳ ಮೀಸಲಾತಿ ವಿಂಗಡನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸುತ್ತದೆ ಅಂತಾ ಹೇಳಿದರು.  ವಿಧಾನಸಭಾ ಸದಸ್ಯರಾದ  ಶಿರಹಟ್ಟಿಯ ಡಾ. ಚಂದ್ರು ಲಮಾಣಿ, ಚಿಂಚೋಳಿಯ ಅವಿನಾಶ್ ಜಾಧವ್,  ಹೂವಿನಹಡಗಲಿಯ ಕೃಷ್ಣ ನಾಯ್ಕ್‌, ಹಗರಿಬೊಮ್ಮನಹಳ್ಳಿಯ ನೇಮಿರಾಜ ನಾಯಕ,  ಹೊಳಲ್ಕೆರೆಯ ಚಂದ್ರ​‍್ಪ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರ ತರಾತುರಿಯಲ್ಲಿ ಒಳಮೀಸಲಾತಿ ವಿಚಾರವಾಗಿ ಯಾವುದೇ ದುಡುಕು ತೀರ್ಮಾನವನ್ನು ತೆಗೆದುಕೊಳ್ಳಬಾರದು. ಹಿಂದುಳಿದಿರುವ ಕೊಲಂಬೊ, ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಬಾರದು. ಪ್ರಸ್ತುತ  ಜನಗಣತಿ ಜಾತಿ ಗಣತಿ, ಆಗಬೇಕು.    ದತ್ತಾಂಶಗಳ ಕ್ರೂಡಿಕರ್ಣ ಮಾಡಲಿಕೆ ಕೇವಲ ಎರಡು ತಿಂಗಳ ಸಾಲದು ಎರಡ್ಮೂರು ವರ್ಷೆಗಳೇ ಬೇಕಾಗುತ್ತವೆ. ನಾಗಮೋಹನ್ ದಾಸ ಆಯೋಗಕ್ಕೆ 2011 ರ ಜನಸಂಖ್ಯೆ ಹಾಗು ದತ್ತಾಂಶಗಳನ್ನು ಪಡೆಯಬಾರದು ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ಕೊಡಬೇಕೆಂದು   ಆಗ್ರಹಿಸದರು. ಈ ಸಂದರ್ಬದಲ್ಲಿ ಕೊಲಂಬೊ ಸಮುದಾಯಗಳ ಮುಖಂಡರಾದ  ಶ್ರೀಕಾಂತ ಭಜಂತ್ರಿ, , ಡಿ ಟಿ ಏಕಾಂತ, ಬಸವರಾಜ್ ಬಂಡಿವಡ್ಡರ, ರಾಜು,  ಅವಿನಾಶ, ಸುರೇಶ, ತುಕಾರಾಮ ಭಜಂತ್ರಿ,  ಪಿ.ವೆಂಕಟೇಶ,  ಮಂಜುನಾಥ ಹಳ್ಳಾಳ, ಶ್ರೀನಿವಾಸ , ಆನಂದ ಅಂಗಡಿ,  ಐ ಏಸ್ ಪೂಜಾರ, ಶಿವಣ್ಣ ಲಮಾಣಿ, ಮೋಹನ ಭಜಂತ್ರಿ, ಹನುಮಾನಾಯಕ, ಅಂಜಯನೇಪ್ಪ ಕಟಗಿ, ಸೋಮು ಲಮಾಣಿ, ಸುಭಾಷ ಗುಡಿಮನಿ, ಜಾನು ಲಮಾಣಿ, ಪರಮೇಶ ನಾಯಕ, ಗೀರೀಶ,  ಕೆ ಸಿ ನಭಾಪುರ, ನೀಲು ರಾಠೋಡ, ಕೃಷ್ಣಜಿ ಚವ್ಹಾಣ, ಶಿವಣ್ಣ ಲಮಾಣಿ,  ನಾಗಾಸರ, ತಿಪ್ಪೇಸ್ವಾಮಿ    ಪಾಂಡುರಂಗ ಪವಾರ,ಮಂಗಲೆಪ್ಪ,ವಾಸು ಲಮಾಣಿ, ಚಂದ್ರಾನಾಯಕ,  ದಯಾನಂದಪವಾರ, ಪುಂಡಲೀಕ ಲಮಾಣಿ,ಸುರೇಶ ಮಾಲಗಿಮನಿ,  ಜಗದೀಶ, ಮಂಜುನಾಥ, ಶಿವಕುಮಾರ, ನಾಗರಾಜ, ಜ್ಯೋತಿ,  ಸೇರಿದಂತೆ ಮುಖಂಡರು ಸಹೋದರ ಸಹೋದರಿಯರು  ಹೋರಾಟದಲ್ಲಿ  ಭಾಗವಹಿಸಿದ್ದರು.