ಮೌಢ್ಯವನ್ನು ಹೊಡೆದೋಡಿಸಿದ ಶರಣರು: ಡಾ.ಅಜಿತ ಪ್ರಸಾದ

ಲೋಕದರ್ಶನ ವರದಿ

ಧಾರವಾಡ12: 'ಅಂತರಂಗ ಹಾಗೂ ಬಹಿರಂಗಶುದ್ಧಿಗೆ ಪ್ರಾಧಾನ್ಯತೆಯನ್ನು ಕೊಟ್ಟ ಹನ್ನೆರಡನೆಯ ಶತಮಾನದ ಶರಣರು ವಚನ ಸಾಹಿತ್ಯ ರಚನೆಯ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವುದರೊಂದಿಗೆ ಮೌಢ್ಯತೆ ಹಾಗೂ ಢಂಬಾಚಾರಗಳ ವಿರುದ್ಧ ಹೋರಾಟ ಮಾಡಿದವರು' ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ ಹೇಳಿದರು. 

  ನಗರದ ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಕನರ್ಾಟಕ ವಿಶ್ವವಿದ್ಯಾಲಯದ ಬಸವೇಶ್ವರಪೀಠ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ 'ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ' ಕಾರ್ಯಕ್ರಮವನ್ನು ಆಯೋಜಿಸಲಾಗಿತು. 

 ನಿವೃತ್ತ ಪ್ರಾಚಾರ್ಯರಾದ ಡಾ. ಆರ್.ಬಿ. ಮಾತಾನಾಡಿ ಚಿಲುಮಿಯವರು 'ಹುಟ್ಟು-ಸಾವುಗಳ ಮಧ್ಯದಲ್ಲಿ ಮನುಷ್ಯ ಹೇಗೆ ತನ್ನ ಬದುಕನ್ನು ಕಟ್ಟಿಕೊಳ್ಳಬೇಕು' ಎಂಬುದನ್ನು ಸಾರಿದ ಶರಣರು 'ನಡೆ-ನುಡಿಯಲ್ಲಿ, ಆಚಾರ-ವಿಚಾರಗಳಲ್ಲಿ ಏಕಪ್ರಕಾರತೆಯಿಂದ ಬದುಕಿ ಇನ್ನುಳಿದವರಿಗೆ ಮಾನವೀಯ ಮಾರ್ಗವನ್ನು ತೋರಿದವರು. ದೇಹದ ಕಲ್ಮಶಗಳನ್ನು ತೊರೆದು, ಮನಸ್ಸಿನ ಸ್ವಚ್ಛತೆಗೆ ಪ್ರಾಧಾನ್ಯತೆಯನ್ನು ಕೊಟ್ಟವರು. ಅವರು ತಮ್ಮ ವಚನಗಳ ಮೂಲಕ ಸಾರಿದ ಆದರ್ಶ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸುಂದರವಾಗಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

       ಕನರ್ಾಟಕ ವಿಶ್ವವಿದ್ಯಾಲಯದ ಬಸವೇಶ್ವರಪೀಠದ ಸಂಯೋಜಕ ಡಾ. ಸಿ.ಎಂ. ಕುಂದಗೋಳ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಬಸವೇಶ್ವರಪೀಠದ ಕಾರ್ಯವೈಖರಿಯ ಬಗ್ಗೆ ಹೇಳಿದರು. 

     ವೇದಿಕೆಯ ಮೇಲೆ ಪ್ರೊ. ಸೂರಜ ಜೈನ, ಡಾ. ಜಿನದತ್ತ ಹಡಗಲಿ ಸ್ವಾಗತಿಸಿ, ನಿರೂಪಿಸಿದರು. ವಿಜಯಶ್ರೀ ಹೆಗಡೆ ಪ್ರಾಥರ್ಿಸಿ, ವಚನಗಾಯನ ಮಾಡಿದರು. ಸಮಾರಂಭದಲ್ಲಿ ಡಾ. ಆರ್.ವ್ಹಿ. ಪಾಟೀಲ, ಪ್ರೊ. ದೀಪಾ ಸಂಕಪಾಳೆ, ಡಾ. ಅರುಣಕುಮಾರ ಶಿರಹಟ್ಟಿ, ಪ್ರೊ. ಶ್ರೀಪಾದ ಕರಣಿ, ಪ್ರೊ. ವಿಭಾ ಮುಗಳಿ ಉಪಸ್ಥಿತರಿದ್ದರು.