ಶರಣರು ವೈಚಾರಿಕ ಚಿಂತನೆ, ವಿಶೇಷ ಉಪನ್ಯಾಸ ಕಾರ್ಯಕ್ರಮ
Surrender to rational thought, a special lecture program
ರಾಯಬಾಗ, 15 : ಮಾನವ ಸಮುದಾಯಕ್ಕೆ ಮಹಾಶತ್ರುವಾದ ಮೌಢ್ಯತೆಗಳ ನಿರ್ಮೂಲನೆಗಾಗಿ ಹನ್ನೆರಡನೇ ಶತಮಾನದ ಬಸವಾದಿ ಶರಣರು ನಡೆಸಿದ ಚಳುವಳಿ ಪ್ರಪಂಚದಲ್ಲಿಯೇ ಅದ್ವಿತೀಯವಾದದು ಎಂದು ಚಿಕ್ಕೋಡಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ವಿಶ್ರಾಂತ ಮುಖ್ಯೋಧ್ಯಾಪಕ ಎಸ್. ಆರ್. ಡೊಂಗರೆ ಹೇಳಿದರು.
ಬುಧವಾರ ಪಟ್ಟಣದ ನಾಗರಾಳ ರಸ್ತೆಯ ವಚನ ಪಿತಾಮಹ ಡಾ.ಫ. ಗು ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ ಸಭಾಂಗಣದಲ್ಲಿ ಶರಣ ಚೇತನ ಬಳಗದಿಂದ ನಡೆದ ’ಶರಣರು: ವೈಚಾರಿಕ ಚಿಂತನೆ, ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನ ಮೌಢ್ಯಗಳ ಮೂಲ ಭಯ, ದುರಾಸೆ, ತನ್ನ ದುರ್ಗತಿಗಳ ನಿವಾರಣೆ ಹಾಗೂ ಸದ್ಗತಿಗಳ ವ್ಯಾಮೋಹದಿಂದ ಮನುಷ್ಯ ಕಂದಾಚಾರಗಳಿಗೆ ಸಿಕ್ಕಿಕೊಳ್ಳುತ್ತಾನೆ. ಜ್ಯೋತಿಷ್ಯ, ವಾರ, ತಿಥಿ, ನಕ್ಷತ್ರಗಳ, ಲೆಕ್ಕಾಚಾರ, ಗ್ರಹಬಲ ಇತ್ಯಾದಿಗಳ ಬೆನ್ನು ಹತ್ತುತ್ತಾನೆ. ಇದರಿಂದ ಡೋಂಗಿ ಶಾಸ್ತ್ರಕಾರರ ಶೋಷಣೆಗೆ ಒಳಗಾಗುತ್ತಾನೆ. ಈ ವ್ಯವಸ್ಥೆಯಿಂದ ಮುಕ್ತಗೊಳಿಸಲು ಶರಣರು ಜೀವನಪರ್ಯಂತ ಹೋರಾಡಿದರೆಂದು ಎಂದು ಹೇಳಿದರು.
ಪವಾಡ ಬಯಲು ಕಾರ್ಯಕ್ರಮ: ಎಸ್. ಆರ್. ಡೊಂಗರೆ ಅವರು ಕೆಲವು ಕೈಚಳಕ ಮತ್ತು ಮಾತಿನ ಮೊಡಿಯಿಂದ ಪವಾಡಗಳನ್ನು ಸೃಷ್ಟಿಸಿ ಜನರನ್ನು ಹೇಗೆ ಮೋಸಗೊಳಿಸಿ ಶೋಷಣೆ ಮಾಡುತ್ತಾರೆಂದು ಪ್ರಾಯೋಗಿಕವಾಗಿ ತೋರಿಸಿದರು. ಟ್ರಸ್ಟ್ ಅಧ್ಯಕ್ಷ ಡಾ .ಬಿ. ಎಂ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಲೇ ವಿದ್ಯಾವಂತರು ಮೌಢ್ಯತೆಗಳಿಗೆ ಒಳಗಾಗುತ್ತಿರುವುದು ಆಶ್ಚರ್ಯ ಹಾಗೂ ಖೇದಕರ ಸಂಗತಿ ಎಂದರು. ಎಸ್. ಆರ್. ಸೊಲ್ಲಾಪುರೆ, ಮಹೇಶ ಪಾಟೀಲ, ಸಂಜು ಬುರುಡ ಇದ್ದರು. ಪಾವಣಿ ಮತ್ತು ಶಾಂಭವಿ ದೊಡವಾಡ ಪ್ರಾರ್ಥಿಸಿದರು. ಎಸ್. ಎಸ್. ಕಾಂಬಳೆ ಸ್ವಾಗತಿಸಿದರು, ಸವಿತಾ ಶ್ರೀಧರ ಪಾಟೀಲ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 