ಬೇರೆಯವರ ಆಸ್ತಿ ಕಬಳಿಸುವ ದಾರಿದ್ಯ ನನ್ನ ಮನೆತನಕ್ಕೆ ಬಂದಿಲ್ಲಸುರೇಶಗೌಡ ನಾಡಗೌಡ
ತಾಳಿಕೋಟಿ,19: ನನ್ನ ಮನೆತನದ ಹಿರಿಯರ ಆಶೀರ್ವಾದದಿಂದ ನಾವು ಸ್ವಾಭಿಮಾನದ ಬದುಕು ನಡೆಸುವಷ್ಟು ಅನುಕೂಲ ನಮಗಿದೆ, ಇನ್ನೊಬ್ಬರ ಆಸ್ತಿಯನ್ನು ಕಬಳಿಸುವಷ್ಟು ದಾರಿದ್ರ್ಯ ನಮಗೆ ಬಂದಿಲ್ಲ ಎಂಬುದನ್ನು ನಡಹಳ್ಳಿಯವರು ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಸುರೇಶಗೌಡ ನಾಡಗೌಡ( ಬಿಂಜಲಭಾವಿ) ಹೇಳಿದರು.
ಶನಿವಾರ ಸಂಜೆ ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮಾಜಿ ಶಾಸಕ ನಡಹಳ್ಳಿ ಅವರು ಚಾಮರಾಜಪೇಟೆ ಆಕಳ ಕೆಚ್ಚಲು ಕತ್ತರಿಸಿದ ಪ್ರಕರಣದ ಕುರಿತು ವಿಜಯಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ನನ್ನನ್ನು ವಿನಾಕಾರಣ ಎಳೆದು ತಂದು ನಾನು ಬಿಂಜಲಬಾವಿ ಗ್ರಾಮದ ರೈತರೊಬ್ಬರೊಬ್ಬರ ಜಮೀನನ್ನು ಕಬಳಿಸಿದ್ದೇನೆ ಎಂದು ಆರೋಪಿಸಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು, ಅವರು ಪ್ರಾಸ್ತಾಪಿಸಿದ ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳು ಹಾಗೂ ನ್ಯಾಯಾಲಯದ ಆದೇಶ ಪತ್ರವೂ ನನ್ನ ಬಳಿ ಇವೆ, ಮಾಜಿ ಶಾಸಕ ನಡಹಳ್ಳಿ ಅವರು ಬಯಸಿದರೆ ಅವರಿಗೆ ನಾನು ಹಸ್ತಾಂತರಿಸಲು ಸಿದ್ಧನಾಗಿದ್ದೇನೆ, ಯಾವುದೇ ಆರೋಪ ಮಾಡುವ ಮುಂಚೆ ಅನುಭವಿ ರಾಜಕಾರಣಿಗಳಾದ ಅವರಿಗೆ ಸರಿಯಾದ ಮಾಹಿತಿ ಇರಬೇಕು ಈ ರೀತಿ ಅವರು ಒಬ್ಬ ಅಪರಾಧಿ ಹಿನ್ನೆಲೆಯ ಕೆಟ್ಟ ವ್ಯಕ್ತಿಯನ್ನು ತಮ್ಮ ಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಅವರಿಗೂ ನನಗೂ ರಾಜಕೀಯ ಭಿನ್ನಾಭಿಪ್ರಾಯ ಇರುವುದು ಸತ್ಯ ಆದರೆ ವೈಯಕ್ತಿಕವಾಗಿ ಅವರೊಂದಿಗೆ ನನಗೆ ಯಾವ ದ್ವೇಷವು ಇಲ್ಲ, ಇನ್ನು ಅವರು ನನ್ನ ಹಾಗೂ ನನ್ನ ಸಂಬಂಧಿಕರಾದ ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾದ ಅಪ್ಪಾಜಿ ನಾಡಗೌಡರ ಕುರಿತು ಏನೇನು ಮಾತನಾಡಿದ್ದಾರೆ, ನಾನು ಅವರ ದತ್ತು ಪುತ್ರ,ಏಜೆಂಟ್ ಅಂತ, ನಾನು ಅವರ ದತ್ತು ಪುತ್ರ ಅಲ್ಲ ಸಂಬಂಧದಲ್ಲಿ ಅವರ ಪುತ್ರನೇ ಆದರೆ ನಾನು ಯಾವತ್ತೂ ಅವರ ರಾಜಕೀಯ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ, ರಾಜಕೀಯವಾಗಿ ನಡಹಳ್ಳಿ ಹಾಗೂ ಅಪ್ಪಾಜಿ ನಾಡಗೌಡರ ಮಧ್ಯದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು ಅದು ಅವರಿಗೆ ಬಿಟ್ಟ ವಿಚಾರ ಆದರೆ ನನ್ನ ಕುರಿತು ಅವರು ಮಾಡಿದ ಆರೋಪಿಗಳಿಗೆ ಸ್ಪಷ್ಟಿಕರಣ ನೀಡುವುದು ನನ್ನ ಜವಾಬ್ದಾರಿ ಮಾತ್ರ, ನಮ್ಮ ಗ್ರಾಮದ ಹಲವಾರು ಸಂಘ ಸಂಸ್ಥೆಗಳಿಗೆ ನಮ್ಮ ಹಿರಿಯರು ದಾನ ಮಾಡಿದ್ದಾರೆ ಅವರು ನನ್ನ ಗ್ರಾಮಕ್ಕೆ ಬಂದು ತಿಳಿದುಕೊಳ್ಳಬಹುದು, ನಮ್ಮದು ಗೌರವಸ್ತ ಮನೆತನ ಇನ್ನು ಮುಂದೆ ನಡಹಳ್ಳಿ ಅವರು ನನ್ನ ಮನೆತನದ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಲಿ ಎಂದರು.
ಪ್ರಶಾಂತಪಾಟೀಲ(ಬಿರಾದಾರ), ರಾಘವೇಂದ್ರ ರೆಡ್ಡಿ ಚೌಧರಿ ಹಾಗೂ ಮುದ್ನೂರ ಮಾತನಾಡಿ ವೈಯಕ್ತಿಕ ಆರೋಪ ಮಾಡುವಾಗ ಎಲ್ಲ ದಾಖಲೆಗಳನ್ನು ಪರೀಶೀಲಿಸಿ ನಡಹಳ್ಳಿಯವರು ಮಾತನಾಡಲಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಿಕೆಪಿಎಸ್ ಅಧ್ಯಕ್ಷ ಆರಿ್ಡ. ಪಾಟೀಲ, ಶರಣಗೌಡ ಬಿರಾದಾರ, ಎಸ್.ಬಿ ಪಟ್ಟಣಶೆಟ್ಟಿ, ಮಡಿವಾಳಪ್ಪ ಬ್ಯಾಲ್ಯಾಳ, ಶರಣಗೌಡ ಬಿರಾದಾರ ಕೆಸರಟ್ಟಿ, ನಿಂಗನಗೌಡ ಪಾಟೀಲ,ಶರಣು ಧಣಿ ದೇಶಮುಖ, ಚನ್ನುಧಣಿ ನಾಡಗೌಡ ಬಸರಕೋಡ, ಸಂಗನಗೌಡ ಅಸ್ಕಿ,ಪ್ರಕಾಶ ಪಾಟೀಲ ತಮದಡ್ಡಿ ಇದ್ದರು.