ಆರ್ ಬಿ ಐಗೆ ಸುಪ್ರೀಂಕೋರ್ಟ್ ಎಚ್ಚರಿಕೆ

    ನವದೆಹಲಿ, ಏಪ್ರಿಲ್ 26  ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ತಪಾಸಣಾ ವರದಿಗಳನ್ನು  ಬಹಿರಂಗಗೊಳಿಸುವಂತೆ ತಾನು ನೀಡಿದ್ದ ಆದೇಶ  ಪಾಲಿಸಲು ಭಾರತೀಯ ರಿಸವರ್್ ಬ್ಯಾಂಕ್ ಗೆ  ಸುಪ್ರೀಂ ಕೋಟರ್್  ಶುಕ್ರವಾರ ಮತ್ತೊಂದು ಅವಕಾಶ ನೀಡಿದೆ. ನ್ಯಾಯಮೂತರ್ಿ ಎಲ್. ನಾಗೇಶ್ವರರಾವ್ ಅವರನ್ನೊಳಗೊಂಡ ನ್ಯಾಯಪೀಠ,   ಮಾಹಿತಿ ಕಾಯ್ದೆಯಡಿ, ಬ್ಯಾಂಕುಗಳಿಗೆ ಸಂಬಂಧಿಸಿದ  ಮಾಹಿತಿ ಬಹಿರಂಗಪಡಿಲು ತನ್ನ ನೀತಿಯನ್ನು ಬದಲಿಸಿಕೊಳ್ಳಲು  ಕೇಂದ್ರೀಯ ಬ್ಯಾಂಕ್ ಗೆ ಸೂಚನೆ ನೀಡಿದ್ದು, ಕಾನೂನು ಪ್ರಕಾರ ಇದು ಮಾಡಲೇಬೇಕಾದ ಕರ್ತವ್ಯವಾಗಿದೆ ಎಂದು ಹೇಳಿದೆ.  ಅಪೆಕ್ಸ್ ಕೋಟರ್್ ಆದೇಶಗಳ ಉಲ್ಲಂಘನೆಯ ಪ್ರವೃತ್ತಿ  ಮುಂದುವರಿಸಿದರೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆರ್ ಬಿ ಐಗೆ  ಎಚ್ಚರಿಕೆ ನೀಡಿದೆ.  ಮಾಹಿತಿ ಹಕ್ಕು ಕಾರ್ಯಕರ್ತರಾದ ಗಿರೀಶ್ ಹಾಗೂ ಸುಭಾಷ್  ಎಂಬವರು,   ಬ್ಯಾಂಕುಗಳ  ತಪಾಸಣಾ ವರದಿಯನ್ನು  ಮಾಹಿತಿ ಹಕ್ಕುಗಳ ಕಾಯ್ದೆಯಡಿ  ಬಹಿರಂಗಗೊಳಿಸಬೇಕು ಎಂದು ನ್ಯಾಯಾಲಯ ಆದೇಶ ಹೊರಡಿಸಿದ್ದರೂ,  ಅದನ್ನು ಜಾರಿಗೊಳಿಸದೆ ನ್ಯಾಯಾಂಗ ನಿಂಧನೆ ಎಸಗಿರುವ ಕೇಂದ್ರೀಯ ಬ್ಯಾಂಕ್ ವಿರುದ್ದ ಕ್ರಮ ಜರಿಗಿಸಬೇಕು ಎಂದು ಸಲ್ಲಿಸಿದ್ದ ಆಜರ್ಿ  ವಿಚಾರಣೆಯ ವೇಳೆ  ನ್ಯಾಯಾಲಯ ಈ ಸೂಚನೆ ನೀಡಿದೆ.