ದೇವದಾಸಿ ಮಹಿಳೆಯರ ಸತ್ಯಾಗ್ರಹಕ್ಕೆ ರೈತ ಸಂಘದ ಬೆಂಬಲ

ಲೋಕದರ್ಶನ ವರದಿ

ಕೊಪ್ಪಳ 15: ಕೃಷಿ ಜಮೀನಿಗಾಗಿ ಸಿಂಗನಾಳ ಗ್ರಾಮದ ವಿಮೋಚಿತ 8 ದೇವದಾಸಿನಿಯರು 19ನೇ ನವೆಂಬರ್ 2018 ರಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕನರ್ಾಟಕ ಪ್ರಾಂತ ರೈತ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಬೆಣಕಲ್, ವೆಂಕಟಗಿರಿ, ವಡ್ಡರಹಟ್ಟಿ, ಹೊಸಳ್ಳಿ, ಜಂತಕಲ್, ಅಯೋಧ್ಯಾ, ಡಾಣಾಪುರ, ಮುಸ್ಟೂರು, ಹೊಸ ಜೂರುಟಗಿ, ಡಂಕನಕಲ್, ಸುಳೇಕಲ್, ಕೆಸರಟ್ಟಿ, ಮರಕುಂಬಿ, ಹಣವಾಳ, ದಾಸನಹಳ್ಳಿ, ಕಲಕೇರಿ ಮೊದಲಾದ ಗ್ರಾಮಗಳಿಗೆ ಕನರ್ಾಟಕ ಪ್ರಾಂತ ರೈತ ಸಂಘದ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಎದುರಿನ ಸತ್ಯಾಗ್ರಹ ಶಿಬಿರಕ್ಕೆ ಆಗಮಿಸಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಆರಾಳ್ ಗ್ರಾಮದವರು ಎರಡು ಚೀಲ ಆಗುವಷ್ಟು ಅಕ್ಕಿಯನ್ನು ತಂದು ಹೋರಾಟ ನಿರತರಿಗೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ. ನಾಗರಾಜ ಮಾತನಾಡಿ ಸಿಂಗನಾಳ ಗ್ರಾಮದ ಸ.ನಂ. 116ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ 8 ಮಂದಿ ಬಡ ದೇವದಾಸಿಯರನ್ನು ಹೇರೂರ್ ಗ್ರಾಮದ ಕೆಲವು ಶ್ರೀಮಂತ ಭೂ ಮಾಲಕರು ದೌರ್ಜನ್ಯ ಮಾಡಿ ಹೊರದಬ್ಬಿದ್ದನ್ನು ಖಂಡಿಸಿದರು. ಸ.ನಂ. 116ರಲ್ಲಿ ಇರುವ ಒಟ್ಟು 22 ಎಕರೆ ಭೂಮಿಯನ್ನು ಸಮಗ್ರವಾಗಿ ಸವರ್ೇ ಮಾಡಿ ದೇವದಾಸಿಯರಿಗೆ ಸಲ್ಲಿಸಬೇಕಾದ ಭೂಮಿಯನ್ನು ಅವರಿಗೆ ವಿತರಣೆ ಮಾಡಿ ಸಾಗುವಳಿ ಚೀಟಿಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ರೈತ ಸಂಘದ ಬೆಂಬಲದ ಅಂಗವಾಗಿ ಡಿಸೆಂಬರ್ 17 ರಿಂದ ಪ್ರತಿದಿನ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕೊಪ್ಪಳ ತಾಲೂಕುಗಳ ಒಂದೊಂದು ಗ್ರಾಮದ ಮತ್ತು 25 ರೈತರು ಹಾಗೂ ರೈತ ಮಹಿಳೆಯರು ಮತ್ತು ಕೃಷಿ ಕೂಲಿಕಾರರು ಬಂದು ಸತ್ಯಾಗ್ರಹದಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು. ಗಂಗಾವತಿ ತಾಲೂಕ ರೈತ ಸಂಘದ ಅಧ್ಯಕ್ಷರಾದ ಶಿವಪ್ಪ ಬೆಣಕಲ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.