ಮಹಾಲಿಂಗಪುರ ನೂತನ ತಾಲೂಕು ರಚನೆಗೆಬೆಂಬಲ - ಸಚಿವ ಆರ್. ಬಿ. ತಿಮ್ಮಾಪುರ
Support for the formation of Mahalingapur new taluk - Minister R. B. Thimmapura
ಮಹಾಲಿಂಗಪುರ 24 : ನನಗೆ ಮಹಾಲಿಂಗಪುರದ ಮೇಲೆ ಅಭಿಮಾನವಿದ್ದು, ಇಲ್ಲಿಂದ ಎರಡು ಸಾರಿ ಚುನಾಯಿತನಾಗಿ ಹೋಗಿದ್ದೇನೆ, ನನ್ನ ಮೇಲೆ ಆ ಋಣದ ಭಾರ ಇದೆ, ಆದ್ದರಿಂದ ಮಹಾಲಿಂಗಪುರ ನೂತನ ತಾಲೂಕಿಗಾಗಿ ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇನೆ ಮತ್ತು ತಾಲೂಕು ಮಾಡಲು ಶತ ಪ್ರಯತ್ನ ನಡೆಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದರು.
ಹೋರಾಟಗಾರರು ಮತ್ತು ಸಾರ್ವಜನಿಕರು ಸೇರಿ ಜನವರಿ 19ರಂದು ಮಹಾಲಿಂಗಪುರ ಪಟ್ಟಣವನ್ನು ಸಂಪೂರ್ಣ ಬಂದ್ ಗೆ ಕರೆ ನೀಡಿದ್ದ, ಸಂದರ್ಭದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಚಾಲುಕ್ಯ ಉತ್ಸವದಲ್ಲಿ ಪಾಲ್ಗೊಳ್ಳುವವರಿದ್ದ ಕಾರಣ ಸಚಿವರು ಪ್ರತಿಭಟನಾಕಾರರ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಲು ಆಗಿರಲ್ಲಿಲ್ಲವೋ ಏನೋ, ಶನಿವಾರ ಮಧ್ಯಾಹ್ನ ಸ್ಥಳೀಯ ಎಲ್‌ಬಿಸಿ ವಸತಿಗೃಹದಲ್ಲಿ ನೂತನ ತಾಲೂಕು ಹೋರಾಟಗಾರರ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ತೇರದಾಳ ಪಟ್ಟಣವನ್ನು ತಾಲೂಕು ಘೋಷಣೆ ಮಾಡದೆ ಹೋಗಿದ್ದರೆ, ಇವತ್ತು ತಮ್ಮ ತಾಲೂಕು ಘೋಷಣೆಯಾಗಿರುತ್ತಿತ್ತು, ಈಗಲೂ ಕಾಲ ಮಿಂಚಿಲ್ಲ ನಾನು ತಮ್ಮ ಜೊತೆ ಇದ್ದೇನೆ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಘೋಷಣೆಯಾಗು ವರೆಗೂ ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ ತಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದರು. ಈ ಹಿಂದೆ ತಮ್ಮ ಹೋರಾಟ ಸಮಿತಿಯ ನಿಯೋಗ ಬೆಂಗಳೂರಿಗೆ ಬಂದಾಗ ನಾನು ಕಂದಾಯ ಮಂತ್ರಿಗಳನ್ನ ಭೇಟಿ ಮಾಡಿಸಲು ಸಿದ್ಧತೆಯಲ್ಲಿದ್ದೆ, ಆಗ ನಾನು ಕರೆದಾಗ ತಾವ್ಯಾರೂ ಬರಲೇ ಇಲ್ಲ ಇದು ತಮ್ಮಿಂದ ಆಗಿರುವ ಲೋಪ ಎಂದರು.
ಆಗ ಹೋರಾಟಗಾರರು ಮಧ್ಯಪ್ರವೇಶಿಸಿ ಇನ್ನೊಮ್ಮೆ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳ ಟಿಪಿ ತೆಗೆದುಕೊಂಡು ನಮ್ಮನ್ನು ಭೇಟಿ ಮಾಡಿಸಿ ಎಂದು ಸಚಿವ ತಿಮ್ಮಾಪುರವರನ್ನು ಕೋರಿದಾಗ ಅದಕ್ಕೆ ಅವರು ಸಮ್ಮತಿಸಿ, ತಮಗೆ ಆದಷ್ಟು ಬೇಗ ಭೇಟಿ ಮಾಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಹೋರಾಟಗಾರ ಮತ್ತು ರೈತ ಸಂಘ ಹಸಿರು ಸೇನೆಯ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ಹೋರಾಟಗಾರರಿಗೆ ಮತ್ತು ಈ ಭಾಗದ ಜನರಿಗೆ ಏನು ಗೊಂದಲವಾಗಿದೆ ಎಂದರೆ ಕಂದಾಯ ಮಂತ್ರಿಗಳು ಸದನದಲ್ಲಿ ಮಹಾಲಿಂಗಪುರ ಪಟ್ಟಣ ಜಮಖಂಡಿ ತಾಲೂಕಿನಲ್ಲಿ ಬರುತ್ತದೆ
ಎಂದು ತಿಳಿದು ಈ ತಾಲೂಕಿನಲ್ಲಿ ಈಗಾಗಲೇ ಎರಡು ತಾಲೂಕುಗಳಾಗಿದ್ದು, ಮೂರನೇ ತಾಲೂಕನ್ನು ಮಾಡಲು ಬರುವುದಿಲ್ಲ ಇದನ್ನು ವಿಲೆಗೆ ಹಾಕಲಾಗಿದೆ ಎನ್ನುವ ಮಾತು ನಮ್ಮದು ರಬಕವಿ ಬನಹಟ್ಟಿ ಅಥವಾ ಮುಧೋಳ ತಾಲೂಕೋ ಎನ್ನುವ ಗೊಂದಲ ಸ್ಥಳೀಯರಲ್ಲಿ ಉಂಟಾಗಿದೆ ಎನ್ನುವ ಮಾತಿಗೆ ಸಚಿವರು ಇಂಥದನ್ನೆಲ್ಲ ತಲೆಗೆ ತೆಗೆದುಕೊಳ್ಳಬೇಡಿ ಅದನ್ನು ಸರಿಪಡಿಸೋಣ ಎಂದರು. ಒಟ್ಟಾರೆಯಾಗಿ ಸಚಿವರ ಮಾತುಗಳು ಹರ್ಷ ತಂದಿದೆ, ಸಚಿವರ ನಿಲುವಿಗೆ ನಮ್ಮ ಸ್ವಾಗತವಿದೆ ಎಂದು ಹೋರಾಟಗಾರರು ತಿಳಿಸಿದರು. ಬಂದ್ ಜರುಗಿದ ದಿವಸ ರಾತ್ರಿ 9 ರ ಸುಮಾರಿಗೆ ತಾಲೂಕಿಗಾಗಿ ಪಟ್ಟು ಹಿಡಿದ ಹೋರಾಟಗಾರರನ್ನು ಸಿಪಿಐ ಎಚ್ ಆರ್ ಪಾಟೀಲ್ ನೇತೃತ್ವದಲ್ಲಿ ತಾಲೂಕಾಡಳಿತ ತಹಶೀಲ್ದಾರ್ ಗೀರೀಶ್ ಸ್ವಾದಿ ಅವರು ಠಾಣೆಗೆ ಕರೆಸಿ ಸಾರ್ವಜನಿಕರಿಗೆ ತೊಂದರೆ ಮಾಡೋದು ಬೇಡ ಮಾತುಗತೆ ನಡೆಸಿ ಸಿಎಂ ಬೇಟಿಗೆ ಟಿಪಿ ಸಲುವಾಗಿ ಎರಡು ದಿವಸಗಳ ಗಡುವು ತೆಗೆದುಕ್ಕೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ತಾಲೂಕು ಹೊರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಯಲ್ಲನ್ನಗೌಡ ಪಾಟೀಲ, ಗಂಗಾಧರ ಮೇಟಿ,ರಂಗನಗೌಡ ಪಾಟೀಲ,ಸಿದ್ದನಗೌಡ ಪಾಟೀಲ,ನಿಂಗಪ್ಪ ಬಾಳಕಾಯಿ,ದುಂಡಪ್ಪ ಜಾಧವ,ಪರ್ಪ ಬ್ಯಾಕೋಡ, ಎಸ್. ಎಂ. ಪಾಟೀಲ, ಬಿ ಜಿ ಹೊಸೂರು, ಮಹಮ್ಮದ ಹೂಲಿಕಟ್ಟಿ, ಚನ್ನು ದೇಸಾಯಿ, ಶಿವನಗೌಡ ಪಾಟೀಲ,ಹಣಮಂತ ಜಮಾದಾರ,ವಿರೇಶ ಆಸಂಗಿ,ಸಿದ್ದು ಶಿರೋಳ,ರಫೀಕ ಮಾಲದಾರ,ಜ್ಯೋತೆಪ್ಪ ಕಪರಟ್ಟಿ,ಈಶ್ವರ ಮುರಗೋಡ,ಕರೆಪ್ಪ ಬ್ಯಾಕೋಡ, ರಾಜೇಂದ್ರ ಮಿರ್ಜಿ, ಅಲ್ಲಪ್ಪ ದಡ್ಡಿಮನಿ,ಹನಮಂತ ಭಜಂತ್ರಿ, ರಾಜು ತೇರದಾಳ, ಶ್ರೀಶೈಲ ಸತ್ತಿಗೇರಿ, ಶ್ರೀಶೈಲ ಚಿನಗುಂಡಿ, ಟಿ. ಬಿ. ನಾಗನೂರ, ಸುರೇಶ ಮಲಾಬಾದಿ, ಮುರಿಗೆಪ್ಪ ಗುಣದಾಳ, ಮಹೇಶ ಗೌಂಡಿ, ಕರೆಪ್ಪ ಮೇಟಿ, ಮಹಾಲಿಂಗಪ್ಪ ಅವರಾದಿ, ರಾಮಣ್ಣ ಉಳ್ಳಾಗಡಿ, ರಾಜು ಬೆಳಗಾಂವಕರ, ಶ್ರೀಶೈಲ ಬಡಿಗೇರ, ಭೀಮಶಿ ನಾಯಕ ಸೇರಿದಂತೆ ಇನ್ನೂ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 