ಪಡಿತರದಲ್ಲಿ ತಿನ್ನಲು ಯೋಗ್ಯವಲ್ಲದ ನುಶಿ ಮತ್ತು ಹುಳ ಹತ್ತಿದ ಜೋಳ ಸರಬರಾಜು, ಅಧಿಕಾರಿಗಳ ಬೇಜವಾಬ್ದಾರಿನತ ತನಿಖೆಗೆ ಒತ್ತಾಯ: ಪಾಟೀಲ

Supply of inedible nushi and worm-infested maize in rations, irresponsible authorities demand probe

ಪಡಿತರದಲ್ಲಿ ತಿನ್ನಲು ಯೋಗ್ಯವಲ್ಲದ ನುಶಿ ಮತ್ತು ಹುಳ ಹತ್ತಿದ ಜೋಳ ಸರಬರಾಜು, ಅಧಿಕಾರಿಗಳ ಬೇಜವಾಬ್ದಾರಿನತ ತನಿಖೆಗೆ ಒತ್ತಾಯ: ಪಾಟೀಲ 

ರಾಣೇಬೆನ್ನೂರು 25: ಕಳೆದ ನವೆಂಬರ್ ಮತ್ತು ಈಗಿನ ಡಿಸೆಂಬರ್ ತಿಂಗಳಲ್ಲಿ ಪಡಿತದಾರರಿಗೆ ವಿತರಿಸಿದ ಆಹಾರ ದಾನ್ಯಗಳಲ್ಲಿ ತಿನ್ನಲು ಯೋಗ್ಯವಲ್ಲದ ನುಶಿ ಮತ್ತು ಹುಳ ಹತ್ತಿದ ಜೋಳ ಸರಬರಾಜಾಗಿದ್ದು ಆಹಾರ ಮತ್ತು ಉಗ್ರಾಣ ನಿಗಮದ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣವಾಗಿದ್ದು ಬಡ ಮತ್ತು ಮಧ್ಯಮವರ್ಗದ ಜನರಿಗೆ ಆಸರೆಯಾಗಿರುವ ಪಡಿತರ ದಾನ್ಯಗಳಲ್ಲಿ ವಿತರಣೆ ಮತ್ತು ಉಪಯೋಗದಿಂದ ಈ ವರ್ಗದ ಜನರ ಆರೋಗ್ಯದ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರಬಲ್ಲದು ಎಂಬುದನ್ನು ಲೆಕ್ಕಿಸದೆ ಜನರ ಆರೋಗ್ಯದೊಂದಿಗೆ ಚಲ್ಲಾಟವಾಡುತ್ತಾ ಕರ್ತವ್ಯಲೋಪ ಎಸಗಿರುವ ಜಿಲ್ಲೆಯ ಆಹಾರ ಮತ್ತು ಉಗ್ರಾಣ ನಿಮಗದ ಹಿರಿಯ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯಿಸಿದ್ದಾರೆ.  

    ಈ ಘಟನೆಯ ಬಗ್ಗೆ ಸರಕಾರದ ಗಮನ ಸೆಳೆದಿರುವ ಅವರು ಸರಕಾರ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿ ತಿಂಗಳು ಪಡಿತ ವಿತರಣೆಯ ಮೂಲಕ 2 ಕೆ.ಜಿ. ಜೋಳ, 3 ಕೆ.ಜಿ. ಅಕ್ಕಿ ವಿತರಿಸುತ್ತಿದ್ದು, 90ಅ ಜನತೆ ಪಡಿತರವನ್ನೆ ಅವಲಂಭಿಸಿ ಜೀವಿಸುತ್ತಿದೆ. ಪ್ರತಿ ಕೆ.ಜಿ. ಜೋಳ ಮತ್ತು ಪ್ರತಿ ಕೆ.ಜಿ. ಅಕ್ಕಿಗೆ ಸರಕಾರ 28 ರೂ. ಭರಿಸುತ್ತಿದ್ದು ರಾಜ್ಯ ಸರಕಾರ ಅಕ್ಕಿ ಸರಬರಾಜ ಮಾಡಲು ಆಗದೆ ಇದ್ದದ್ದಕ್ಕೆ ಪಡಿತ ಚೀಟಿಯಲ್ಲಿರುವ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾ ಬಡತನದ ಜನರ ಹಿತಕಾಯುವ ಕೆಲಸ ಮಾಡುತ್ತಿದ್ದಾರೆ. ಇದೇ ಸರಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸರಕಾರದ ಕಣ್ಣಿಗೆ ಮೆಣ್ಣೆರಚಿ ಬಡ ಮತ್ತು ಮಧ್ಯಮವರ್ಗದ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ಅಕ್ಕಿ ಸರಬರಾಜು ಗುಜರಾತ, ಆಂದ್ರ ತಮಿಳುನಾಡುಗಳಿಂದ ಆದರೆ, ಜೋಳವನ್ನು ಸ್ಥಳೀಯವಾಗಿ ಖರೀದಿಸುವ ಅಧಿಕಾರಿಗಳು ಬಾರಿ ಪ್ರಮಾಣದಲ್ಲಿ ಖರೀದಿಸಿ ಶೇಖರಿಸಿ ಇಟ್ಟು ಇಂಥ ಅನಾಹುತಕ್ಕೆ ಕಾರಣರಾಗಿದ್ದಾರೆ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯತನದಿಂದ ಸರಕಾರದ ಹಣವೂ ಹೋಯಿತು. ಜನರ ಆರೋಗ್ಯವು ಹೋಯಿತು, ಜೋಳವು ಉಣ್ಣಲು ಬಾರದಂತಾಯಿತು. ಕೂಡಲೇ ಸಂಬಂಧಿಸಿದ ಈ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಈ ಕೂಡಲೇ ಅಮಾನತುಗೊಳಿಸಿ ತನಿಖೆಗೊಳಪಡಿಸಬೇಕೆಂದು ಸರಕಾರಕ್ಕೆ ಪಡಿತದಾರರ ಪ್ರಜ್ಞಾವಂತ ನಾಗರೀಕರ ಪರಿವಾಗಿ ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯಿಸಿದ್ದಾರೆ. ಬಹು ವರ್ಷಗಳಿಂದ ಹೆಗ್ಗಣಗಳಂತೆ ಬೇರು ಬಿಟ್ಟಿರುವ ಆಹಾರ ಮತ್ತು ಉಗ್ರಾಣ ನಿಗಮದಲ್ಲಿ ದೊಡ್ಡ ಮಾಫಿಯಾವೆ ಇದ್ದು ಇಡೀ ಆಹಾರ ಇಲಾಖೆಯನ್ನೆ ಕಂಟ್ರೋಲ್ ಮಾಡುವ ತಾಕತ್ತು ಹೊಂದಿ ಕೋಟಿ ಕೋಟಿ ಲೂಟಿ ಹೊಡೆದವರಿದ್ದಾರೆ. ಈಗಲಾದರೂ ಈ ವ್ಯವಸ್ಥೆಗೆ ಸರ್ಜರಿ ಆಗಬೇಕಿದೆ. ಕೂಡಲೇ ಸಂಬಂಧಿಸಿದ ಈ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಈ ಕೂಡಲೆ ಅಮಾನತುಗೊಳಿಸಿ ತನಿಖೆಗೊಳಪಡಿಸಬೇಕೆಂದು ಸರಕಾರಕ್ಕೆ ಪಡಿತದಾರರ, ಪ್ರಜ್ಞಾವಂತ ನಾಗರಿಕರ ಪರವಾಗಿ ಪ್ರಗತಿಪರ ಚಿಂತಕ, ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯಿಸಿದ್ದಾರೆ.