ಅಭಿವೃದ್ಧಿಗೆ ಪೂರಕವಾದ ಬಜೆಟ್‌- ಲಿಂಗನಗೌಡರ

Supplementary budget for development- Lingan Gowda

ಅಭಿವೃದ್ಧಿಗೆ ಪೂರಕವಾದ ಬಜೆಟ್‌- ಲಿಂಗನಗೌಡರ  

ರಾಣೇಬೆನ್ನೂರು 01 :  ಸೀತಾರಾಮನ್ ರವರು ಮಂಡಿಸಿದ ಇಂದಿನ ಬಜೆಟ್ ನಲ್ಲಿ ರಾಜ್ಯದ ನೀರಾವರಿ ಹಾಗೂ ರೈಲ್ವೆ ಯೋಜನೆಗಳಿಗೆ ಎಷ್ಟು ಅನುದಾನ ಕಲ್ಪಿಸಲಾಗಿದೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲದಂತಾಗಿದೆಯಾದರೋ, ಒಟ್ಟು ಹಿಂದುಳಿದ ವರ್ಗಗಳಿಗೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ. ಕೃಷಿಕರು, ಮಧ್ಯಮ ವರ್ಗದವರಿಗೆ ಅಧಿಕ ಲಾಭದಾಯಕ. ಬಜೆಟ್‌. ಕೃಷಿ ಉತ್ಪನ್ನ ಹೆಚ್ಚಳಕ್ಕೆ ಹೆಚ್ಚು  ಇಳುವರಿ ಬೀಜಗಳ ಸಂಶೋಧನೆಗೆ ಪ್ರೋತ್ಸಾಹ ಧರಿಕಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ 3 ರಿಂದ 5 ಲಕ್ಷಕ್ಕೆ ಹೆಚ್ಚಳ, ಸಣ್ಣ ಮಧ್ಯಮ ಉದ್ದಿಮೆ ಆರಂಭಕ್ಕೆ 20 ಕೋಟಿ ಸಾಲ ಸೌಲಭ್ಯ ಸ್ವಾಗತಾರ್ಹ. ಪರಿಶಿಷ್ಟ ಜಾತಿ,ಪ ಪಂಗಡ ಮಹಿಳಾ ಉದ್ಯಮಕ್ಕೆ 2 ಕೋಟಿ ಮೀಸಲಿಟ್ಟಿದ್ದು, ತಾಂತ್ರಿಕ ಮತ್ತು ಆರೋಗ್ಯ ಶಿಕ್ಷಣದಲ್ಲಿ ಶೇ/- 100 ಪ್ರವೇಶಾತಿ ಹೆಚ್ಚಳ ಮೂಲಭೂತ ಸೌಲಭ್ಯಕ್ಕೆ 1.5 ಲಕ್ಷ ಕೋಟಿ ಮತ್ತು ನಗರಾಭಿವೃದ್ಧಿಗೆ 1 ಲಕ್ಷ ಕೋಟಿ. ನೀಡಿದ್ದು ಸ್ವಾಗತಾರ್ಹ. ಆದಾಯ ತೆರಿಗೆ ಮಿತಿ ಹೆಚ್ಚಿಸಿದ್ದು, ನೀತಿ ಪರಿಷ್ಕರಣೆ ಮಾಡಿದ್ದು ಜನರ ಬೇಡಿಕೆ ಈಡೇರಿಸಿದಂತಾಗಿದೆ.